ಶಾಸಕರ ತೇಜೋವಧೆ ನಿಲ್ಲಿಸದಿದ್ದರೆ ಪೊರಕೆ ಚಳವಳಿ

KannadaprabhaNewsNetwork |  
Published : Apr 30, 2025, 12:33 AM IST
29ಕೆಆರ್ ಎಂಎನ್ 3.ಜೆಪಿಜಿರಾಮನಗರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರಾಂಪುರ ನಾಗೇಶ್ ಮಾತನಾಡಿದರು. | Kannada Prabha

ಸಾರಾಂಶ

ಸಮಾಜದ ಎಲ್ಲಾ ವರ್ಗಗಳ ಮೇಲೆ ಅಪಾರ ವಿಶ್ವಾಸವನ್ನು ಹೊಂದಿರುವ ಶಾಸಕ ಇಕ್ಬಾಲ್ ಹುಸೇನ್‍ರವರು ದಲಿತ ಸಮುದಾಯದ ಬಗ್ಗೆಯೂ ಅತ್ಯಂತ ಕಳಕಳಿ ಹೊಂದಿರುವ ನಾಯಕ.

ಕನ್ನಡಪ್ರಭ ವಾರ್ತೆ ರಾಮನಗರಶಾಸಕ ಇಕ್ಬಾಲ್ ಹುಸೇನ್ ಅವರ ಜನಪರ ಕಾರ್ಯಗಳನ್ನು ಸಹಿಸದ ಕೆಲ ಸಂಘಟನೆಗಳು ಅವರ ತೇಜೋವಧೆಯಲ್ಲಿ ತೊಡಗಿವೆ. ಇದನ್ನು ನಿಲ್ಲಿಸದಿದ್ದರೆ ಆ ಸಂಘಟನೆಗಳ ಮುಖಂಡರ ಮನೆ ಎದುರು ಪೊರಕೆ ಚಳವಳಿ ನಡೆಸಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಂಪುರ ನಾಗೇಶ್ ಎಚ್ಚರಿಕೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಗಳು ಯಶಸ್ವಿಯಾಗಿರುವುದನ್ನು ಕೆಲ ಸಂಘಟನೆಗಳಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಶಾಸಕ ಎಚ್.ಎ,ಇಕ್ಬಾಲ್ ಹುಸೇನ್‍ರವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.ಸಮಾಜದ ಎಲ್ಲಾ ವರ್ಗಗಳ ಮೇಲೆ ಅಪಾರ ವಿಶ್ವಾಸವನ್ನು ಹೊಂದಿರುವ ಶಾಸಕ ಇಕ್ಬಾಲ್ ಹುಸೇನ್‍ರವರು ದಲಿತ ಸಮುದಾಯದ ಬಗ್ಗೆಯೂ ಅತ್ಯಂತ ಕಳಕಳಿ ಹೊಂದಿರುವ ನಾಯಕ. ಅಂಬೇಡ್ಕರ್ ಜಯಂತಿ ಅಂಗವಾಗಿ ಆನೆಯ ಮೇಲೆ ಅಂಬೇಡ್ಕರ್ ಭಾವಚಿತ್ರವನ್ನಿರಿಸಿ ಮರವಣಿಗೆ ಮಾಡುವ ಮೂಲಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅಲ್ಲದೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಕೀರ್ತಿ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್‍ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಮಹಿಳಾ ದಿನಾಚರಣೆ ಜಿಲ್ಲಾಡಳಿತದ ಕಾರ್ಯಕ್ರಮವೋ ಅಥವಾ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದ ಮಹಿಳಾ ಕಾಂಗ್ರೆಸ್ ಸಮಾವೇಶವೋ ಎಂದು ಕೆಲವರು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೊರೆಯುವ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಶಾಸಕರು ಭಿನ್ನವಾಗಿ ಮಾಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರಿಗೆ ಬಾಗೀನದ ಹೆಸರಲ್ಲಿ ಸೀರೆಗಳನ್ನು ನೀಡಿದ್ದಾರೆ ಅದನ್ನು ಪ್ರಶ್ನಿಸಲು ನಿಮಗೆ ಯಾವ ನೈತಿಕತೆಯಿದೆ ಎಂದು ಸಂಘಟನೆಗಳ ಮುಖಂಡರನ್ನು ಪ್ರಶ್ನಿಸಿದರು.ಸಹಸ್ರಾರು ಜನರು ಸೇರಿದ ಕಡೆ ಕೆಲವು ಸಣ್ಣಪುಟ್ಟ ದೋಷಗಳಾಗುವುದು ಸಹಜ. ಆತುರದಲ್ಲಿ ಬಲಗೈ ನೋವಿನ ಸಮಸ್ಯೆ ಮಾಡಿಕೊಂಡಿದ್ದ ಓರ್ವ ಮಹಿಳೆಗೆ ಶಾಸಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬೇರೆ ಯಾವ ಮಹಿಳೆಯೂ ನನಗೆ ತೊಂದರೆಯಾಗಿಲ್ಲ. ಆದರೆ ಜಿಲ್ಲಾಡಳಿತಕ್ಕೆ ಅವ್ಯವಸ್ಥೆ ಹಾಗೂ ಕಾರ್ಯಕ್ರಮದ ಸ್ಪಷ್ಟನೆ ಕೇಳಲು ಅವರ್ಯಾರು ಎಂದು ರಾಂಪುರ ನಾಗೇಶ್ ಕೇಳಿದರು.ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಗುವೊಂದು ಮೃತಪಟ್ಟಿದೆ ಎಂಬ ಸುಳ್ಳು ಸುದ್ಧಿಯನ್ನು ಕೆಲವರು ಹರಡುತ್ತಿದ್ದಾರೆ. ಈ ರೀತಿಯ ಯಾವ ಅವಘಡವೂ ಆಗಿಲ್ಲ, ಮಗುವಿನ ಪೋಷಕರು ಯಾವ ಠಾಣೆಯಲ್ಲೂ ದೂರು ಕೊಟ್ಟಿಲ್ಲ, ಒಂದು ವೇಳೆ ಘಟನೆ ಸಂಭವಿಸಿದ್ದರೇ ಆರೋಪ ಮಾಡುವವರು ದೃಢಪಡಿಸಲಿ ಎಂದು ಸವಾಲು ಹಾಕಿದರು. ಜಿಲ್ಲೆಯಲ್ಲಿ ಸಂಘಟನೆಗಳ ಹೆಸರಲ್ಲಿ ಅಥವಾ ವ್ಯಯಕ್ತಿಕವಾಗಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲು ಮಾಡುವವರು ಹಾಗೂ ಸುಳ್ಳು ಸುದ್ಧಿಗಳನ್ನು ಹಬ್ಬಿಸಿ ಶಾಂತಿ ಭಂಗಕ್ಕೆ ಯತ್ನಿಸುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಜರುಗಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಬೇಕೆಂದು ರಾಂಪುರ ನಾಗೇಶ್ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಶಂಕರ್, ಗುಡ್ಡೆ ವೆಂಕಟೇಶ್, ಶಿವಪ್ರಕಾಶ್, ಕನಕರಾಜ್, ಪಾಪಣ್ಣ, ವಿಜಯಲಕ್ಷ್ಮಮ್ಮ, ಗೋಪಿ, ನಾಗಮ್ಮ, ಚಂದ್ರಪ್ಪ, ಗೋಪಾಲ್‍ದಾಸ್, ರಾಘವೇಂದ್ರ ಮತ್ತಿತರರು ಇದ್ದರು.------29ಕೆಆರ್ ಎಂಎನ್ 3.ಜೆಪಿಜಿರಾಮನಗರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರಾಂಪುರ ನಾಗೇಶ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!