ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅಪರೂಪದ ಪ್ರಾಣಿ ಪಕ್ಷಿಗಳ ಸೇರ್ಪಡೆ

KannadaprabhaNewsNetwork |  
Published : Nov 10, 2023, 01:02 AM ISTUpdated : Nov 10, 2023, 01:03 AM IST
ಪಿಲಿಕುಳದಲ್ಲಿ ಅಪರೂಪದ ಪ್ರಾಣಿ, ಪಕ್ಷಿ | Kannada Prabha

ಸಾರಾಂಶ

ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಪರೂಪದ ಪ್ರಾಣಿ, ಪಕ್ಷಗಳ ಸೇರ್ಪಡೆ

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶದಲ್ಲೇ ಬೃಹತ್ ಮೃಗಾಲಯಗಳಲ್ಲಿ ಒಂದಾದ ಮಂಗಳೂರು ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಳಿವಿನಂಚಿನಲ್ಲಿ ಇರುವ ಒಂದು ಜೊತೆ ತೋಳಗಳು ಸೇರ್ಪಡೆಯಾಗಿವೆ. ಪ್ರಾಣಿ ವಿನಿಮಯ ಯೋಜನೆಯಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣ ಮೃಗಾಲಯದಿಂದ ತರಿಸಲಾಗಿದೆ.

ಹೊಸ ಜಗತ್ತಿನ ಮಂಗಗಳೆಂದು ಕರೆಯಲ್ಪಡುವ (New World Monkeys ) 4 ಜೊತೆ ಅಳಿಲು ಮಂಗ, ಮಾರ್ಮಸೆಟ್, ಟಾಮರಿಂನ್‌ಗಳು ಆಗಮಿಸಿವೆ. ಇವು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಕಂಡು ಬರುವ ಚಿಕ್ಕ ಜಾತಿಯ ಮಂಗಗಳಾಗಿವೆ. ಮೆಕ್ಸಿಕೋ ದೇಶದಲ್ಲಿ ಕಂಡು ಬರುವ ಬ್ಲೂ ಗೋಲ್ಡ್ ಮಹಾವ್, ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಗಾಲಾ (Galah ), ದಕ್ಷಿಣ ಆಫ್ರಿಕಾ ಖಂಡದಲ್ಲಿ ಕಾಣ ಸಿಗುವ ಟುರಾಕೋಗಳನ್ನು ತರಿಸಲಾಗಿದೆ.

ಹೊಸದಾಗಿ ಆಗಮಿಸಿರುವ ಪ್ರಾಣಿ ಪಕ್ಷಿಗಳ ಅವರಣಗಳನ್ನು ಸಮುಚ್ಚಯವನ್ನು ನಿರ್ಮಿಸಲು ಒಂದು ಕೋಟಿ ರು. ದೇಣಿಗೆಯನ್ನು ರಿಲಾಯನ್ಸ್ ಫೌಂಡೇಶನ್ ನೀಡಿದೆ. ಈ ಪ್ರಾಣಿ ಪಕ್ಷಿಗಳಿಗೆ ಅವುಗಳ ನೈಸರ್ಗಿಕ ಆವಾಸ ಸ್ಥಾನವನ್ನು ಹೋಲುವ ಅವರಣಗಳನ್ನು ರಚಿಸಲಾಗಿದೆ. ಆವರಣದ ಒಳಗೆ ಪ್ರಾಣಿಗಳಿಗಾಗಿ ಆಹಾರ ನೀಡುವ ಕೇಂದ್ರ, ಬೀಡಿಂಗ್ ಬೋಕ್ಸ್ ಇತ್ಯಾದಿ ಸಲಕರಣೆಗಳನ್ನು ಬೆಂಗಳೂರಿನ ಲೈಫ್ ಸೈನ್ಸ್ ಎಜುಕೇಶನ್‌ ಟ್ರಸ್ಟ್‌ ಉಚಿತವಾಗಿ ನೀಡಿದೆ.

ಈಗಾಗಲೆ ಪಿಲಿಕುಳ ಮೃಗಾಲಯದಲ್ಲಿ 1,200ರಷ್ಟು ವಿವಿಧ ಜಾತಿಯ ಪ್ರಾಣಿ, ಪಕ್ಷಿ, ಉರಗಗಳಿದ್ದು, ಇನ್ನಷ್ಟು ಪ್ರಾಣಿಗಳನ್ನು ತರಿಸಿ ಅಕರ್ಷಣೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್‌.ಜೆ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ