ಕರೆಂಟ್‌ ಇಲ್ಲದಿದ್ದರು ಬಿಎಸ್ಎನ್ಎಲ್ ಸೋಲಾರ್ ಟವರ್ ಕಾರ್ಯನಿರ್ವಹಣೆ: ಪ್ರತೀಕ್

KannadaprabhaNewsNetwork | Published : Mar 21, 2025 12:32 AM

ಸಾರಾಂಶ

ನರಸಿಂಹರಾಜಪುರ, ಕಡಹಿನಬೈಲು ಗ್ರಾಮ ಪಂಚಾಯಿತಿ ಗುಳ್ಳದಮನೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಬಿಎಸ್ಎನ್ಎಲ್ ಸೋಲಾರ್ 4-ಜಿ ಟವರ್ ವಿದ್ಯುತ್‌ ಗಾಗಿ ಕಾಯದೆ ಸೋಲಾರ್‌ ನಿಂದಲೇ ಬ್ಯಾಟರಿ ಚಾರ್ಜ್ ಆಗಲಿದೆ ಎಂದು ಚಿಕ್ಕಮಗಳೂರು ಬಿಎಸ್‌ಎನ್‌ಎಲ್ ನ ಜೂನಿಯರ್‌ ಟೆಕ್ನಿಕಲ್ ಆಫೀಸರ್ ಪ್ರತೀಕ್ ಜೈನ್ ತಿಳಿಸಿದರು.

ಬಿಎಸ್ಎನ್‌ಎಲ್ ಸೋಲಾರ್ 4 ಜಿ ಟವರ್‌ ಬಗ್ಗೆ ಮಾಹಿತಿ ಹಾಗೂ ಸಾರ್ವಜನಿಕರಿಗೆ ಸಿಮ್ ವಿತರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಡಹಿನಬೈಲು ಗ್ರಾಮ ಪಂಚಾಯಿತಿ ಗುಳ್ಳದಮನೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಬಿಎಸ್ಎನ್ಎಲ್ ಸೋಲಾರ್ 4-ಜಿ ಟವರ್ ವಿದ್ಯುತ್‌ ಗಾಗಿ ಕಾಯದೆ ಸೋಲಾರ್‌ ನಿಂದಲೇ ಬ್ಯಾಟರಿ ಚಾರ್ಜ್ ಆಗಲಿದೆ ಎಂದು ಚಿಕ್ಕಮಗಳೂರು ಬಿಎಸ್‌ಎನ್‌ಎಲ್ ನ ಜೂನಿಯರ್‌ ಟೆಕ್ನಿಕಲ್ ಆಫೀಸರ್ ಪ್ರತೀಕ್ ಜೈನ್ ತಿಳಿಸಿದರು.

ಬುಧವಾರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ಗುಳದಮನೆ ಗ್ರಾಮದ ಶಾಲೆ ಸಮೀಪ ಪ್ರಾರಂಭವಾಗಿರುವ ಬಿಎಸ್ಎನ್ಎಲ್ ನ ಸೋಲಾರ್ 4-ಜಿ ಟವರ್ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡುವ ಹಾಗೂ ಸಿಮ್ ವಿತರಣಾ ಕಾರ್ಯ ಕ್ರಮದಲ್ಲಿ ಮಾತನಾಡಿದರು. ನೂತನವಾಗಿ ಪ್ರಾರಂಭವಾದ ಬಿಎಸ್‌ಎನ್‌ಎಲ್ ಸೋಲಾರ್-4 ಜಿ ಟವರ್ 4 ಜಿ ಸಿಮ್ ಇದ್ದವರಿಗೆ ಮಾತ್ರ ಉಪಯೋಗವಾಗುತ್ತದೆ. ಆದ್ದರಿಂದ 2 ಜಿ ಹಾಗೂ 3 ಜಿ ಸಿಮ್‌ ಇದ್ದವರು ತಕ್ಷಣ 4 ಜಿ ಸಿಮ್ ಹಾಕಿಕೊಳ್ಳ ಬೇಕು. ಹೊಸದಾಗಿ ಸಿಮ್ ಹಾಕಿಕೊಳ್ಳುವವರು ಸಹ ಬಿಎಸ್ಎನ್ಎಲ್ 4 ಜಿ ಸಿಮ್ ಹಾಕಿಕೊಳ್ಳಬೇಕು. ಸೋಲಾರ್ ನಿಂದ ಬ್ಯಾಟರಿ ಚಾರ್ಜ್ ಆಗುವುದರಿಂದ ಕರೆಂಟಿಗಾಗಿ ಕಾಯಬೇಕಾಗಿಲ್ಲ. ಸೋಲಾರ್ ನಿಂದಲೇ ಬ್ಯಾಟರಿ ಚಾರ್ಜ್ ಆಗಲಿದ್ದು ಮಳೆ ಗಾಲದಲ್ಲೂ ಬ್ಯಾಟರಿ ಚಾರ್ಜ್ ಆಗಲಿದೆ. ಈ ಟವರ್ 3 ಕಿ.ಮೀ.ವ್ಯಾಪ್ತಿಯಲ್ಲಿ ಸಿಗ್ನಲ್ ಸಿಗಲಿದೆ. ಇಂದಿನಿಂದಲೇ ಪ್ರಾಯೋಗಿಕ ವಾಗಿ ಸಿಗ್ನಲ್ ಪ್ರಾರಂಭವಾಗಲಿದೆ. ಶೆಟ್ಟಿಕೊಪ್ಪ ಟವರ್‌ ನಿಂದ ಮೈಕ್ರೋ ವೇವ್ ಬರಲಿದೆ ಎಂದು ವಿವರಿಸಿದರು.

ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ವಿಠಲ ಗ್ರಾಮದಲ್ಲಿ ಮೊಬೈಲ್ ಗೆ ಸಿಗ್ನಲ್‌ ಸಿಗದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಈಗ ಸೋಲಾರ್ ರೂಫಿಂಗ್ ಬಿಎಸ್ಎನ್ಎಲ್ ನೂತನ ತಂತ್ರಜ್ಞಾನ ಟವರ್ ಪ್ರಾರಂಭವಾಗಿರುವುದರಿಂದ ಸಾರ್ವಜಕರಿಗೆ ಅನುಕೂಲವಾಗಲಿದೆ. ಸಾರ್ವಜನಿಕರ ಕನಸು ಇಂದು ನನಸಾಗಿದೆ. ಟವರ್‌ ಗಾಗಿ ನಾವೆಲ್ಲರೂ ಪರಿಶ್ರಮ ಪಟ್ಟಿದ್ದೇವೆ. ವಿಶೇಷವಾಗಿ ಅರಣ್ಯ ಇಲಾಖೆ ಸಹಕಾರದಿಂದ ಟವರ್ ನಿರ್ಮಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ನೆಟ್ ವರ್ಕ್ ಸಸ್ಯೆ ಬಗೆ ಹರಿಯಲಿದೆ. ಎಲ್ಲಾ ವ್ಯವಹಾರಗಳಿಗೆ ಅನುಕೂಲವಾಗಲಿದೆ ಎಂದರು.

ಸಭೆಯಲ್ಲಿದ್ದ ನರಸಿಂಹರಾಜಪುರ ಉಪ ವಲಯ ಅರಣ್ಯಾಧಿಕಾರಿ ಗೌಸ್ ಮಹಿಯುದ್ದೀನ್ ಮಾತನಾಡಿ, ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದ ಅರಣ್ಯ ಇಲಾಖೆ ಸಿಬ್ಬಂದಿಗೂ ತೊಂದರೆಯಾಗಿತ್ತು. ಇನ್ನು ಮುಂದೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ನೆಟ್ ವರ್ಕ್ ಸಮಸ್ಯೆ ಬಗೆಹರಿಯಲಿದೆ ಎಂದರು.

ಬಿಎಸ್ಎನ್ಎಲ್ ಟವರ್ ನ ಟೆಕ್ನಿಕಲ್ ಆಫೀಸರ್ ವಿಶ್ವನಾಥ್ ಟವರ್ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ವಿವರಿಸಿದರು. ನಂತರ ಗ್ರಾಮಸ್ಥರಿಗೆ ಹೊಸದಾಗಿ ಬಂದ 4 ಜಿ ಸಿಮ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆ ಮುಖ್ಯೋಪಾ ಧ್ಯಾಯಿನಿ ಶಿಲ್ಪ ಕುಮಾರಿ, ಗ್ರಾಮಸ್ಥ ಅಜೀಶ್, ವಿಲ್ಸನ್, ಸಲೀನಾ ಹಾಗೂ ವಿಠಲ ಗ್ರಾಮ, ಹಾಗಲಮನೆ, ಗುಳ್ಳದ ಮನೆ,ಹಳೇ ದಾನಿವಾಸ, ಮುದುಕೂರು, ಕೆಸವಿ ಮುಂತಾದ ಊರುಗಳ ನಾಗರಿಕರು ಆಗಮಿಸಿದ್ದರು.

Share this article