ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೂಡಲಸಂಗಮದ ಬಸವ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಸಮಕಾಲಿನ ಸಂವೇದನೆ ಕುರಿತು ಜರುಗಿದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ತಮ್ಮ ವಚನದ ಮೂಲಕ ಆಡಳಿತ ವ್ಯವಸ್ಥೆ ಕಲಿಸಿಕೊಟ್ಟಿದ್ದಾರೆ. ಅವರ ಹುಟ್ಟು ಹಾಕಿದ ಅನುಭವ ಮಂಟಪ ಇಂದು ಸಂಸತ್ತಾಗಿ ನಡೆಯುತ್ತಿದೆ ಎಂದರು.
ಜಯಂತಿಗಳ ಆಚರಣೆ ಮಾಡುವ ಉದ್ದೇಶ ಮಹಾಪುರುಷರ ಇತಿಹಾಸವನ್ನು ಯುವಕರಿಗೆ ಪರಿಚಯಿಸುವುದಾಗಿದೆ. ಬಸವಣ್ಣನವರ ವಚನಗಳನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಕಾರ್ಯ ಮಾಡಿ ಯುವಕರಲ್ಲಿ ಪರಿಣಾಮ ಬೀರುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಶರಣರ ಆಚಾರ, ವಿಚಾರ, ವಚನಗಳ ಮೂಲಕ ಇತಿಹಾಸ ಸೃಷ್ಟಿಸಿ ಸಾಮಾಜಿಕ ನ್ಯಾಯ ಕೊಡುವ ಕೆಲಸ ಸರಕಾರ ಮಾಡುತ್ತಿದೆ. ಬಸವಣ್ಣನವರ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಅವರ ಆಚಾರ, ವಿಚಾರಗಳನ್ನು ದಿನನಿತ್ಯ ಚಿಂತನೆ ಮಾಡಿ ಜೀವನ ನಡೆಸುತ್ತಿರುವವರು ಬಹಳ ಕಡಿಮೆ ಇದ್ದಾರೆಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಹುನಗುಂದ ಶಾಸಕ ವಿಜಯಾನಂದಕಾಶಪ್ಪನವರ ಮಾತನಾಡಿ, ಇತಿಹಾಸ ಪಟದಲ್ಲಿರುವ ಐತಿಹಾಸಿಕ ಕೂಡಲಸಂಗಮದಲ್ಲಿ ಬಸವಾದಿ ಶರಣರ ವೈಭವವನ್ನು ಹಮ್ಮಿಕೊಳ್ಳಲಾಗಿದೆ. ಸರಕಾರ ಸರ್ವಧರ್ಮ ಸಂಸತ್ತು ಎಂಬ ಹೆಸರಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಬಜೆಟ್ ನಲ್ಲಿ ಘೋಷಿಸಿದೆ. ಈ ಹಿನ್ನೆಲೆ ಕೂಡಲಸಂಗಮದಲ್ಲಿ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿರುವುದು ಹೆಮ್ಮೆಯ ವಿಷಯ ಎಂದರು.ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವ ಬಾಗಲಕೋಟೆ