ಕನ್ನಡಪ್ರಭ ವಾರ್ತೆ ಪಾವಗಡ
ಬುದ್ಧ ಪೂರ್ಣಿಮೆಯ ಅಂಗವಾಗಿ ಗುರುವಾರ ಪಟ್ಟಣದ ಸರ್ವಧರ್ಮ ಶಾಂತಿಪೀಠದ ಆಶ್ರಮದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸಿದ ಬಳಿಕ ಅವರು ಮಾತನಾಡಿದರು.
ಬುದ್ಧನ ಸಂದೇಶಗಳು ಸರ್ವಕಾಲಕ್ಕೂ ಅನ್ವಯವಾಗಲಿವೆ. ಬುದ್ಧನು ಸಮಾಜದ ಪರಿವರ್ತನೆ ಹಾಗೂ ಬದುಕಿಗೆ ಮಾದರಿಯಾಗುವ ಆನೇಕ ವಿಚಾರಗಳನ್ನು ಸಾರಿದ್ದಾನೆ. ಪ್ರಕೃತಿ ನಾಶ, ಜೀವಕುಲದ ಹಿಂಸೆ, ದುರಾಸೆ, ಆಸೂಯೆ ಇವೆಲ್ಲಾ ಮನುಷ್ಯನ ವಿನಾಶನಕ್ಕೆ ಕಾರಣವಾಗುತ್ತವೆ.ಆದ್ದರಿಂದ ಪರೋಪಕಾರ, ಸಂಕಷ್ಟದಲ್ಲಿದ್ದವರಿಗೆ ನೆರವು, ಪರಿಸರ ರಕ್ಷಣೆಯಂತಹ ಮಾನವೀಯ ಗುಣಗಳನ್ನು ರೂಢಿಸಿಕೊಳ್ಳುವುದರಿಂದ ನೆಮ್ಮದಿಯ ಬದುಕು ಕಾಣಬಹುದು ಎಂದು ತಿಳಿಸಿಕೊಟ್ಟವನು ಬುದ್ಧ. ಅವನ ಆದರ್ಶ ಹಾಗೂ ತತ್ವಗಳು ನಮಗೆಲ್ಲರಿಗೂ ಸ್ಪೂರ್ತಿಯಾಗಿವೆ ಎಂದು ತಿಳಿಸಿ, ಸಮಸ್ತ ಜನತೆಗೆ ಬುದ್ಧ ಪೌರ್ಣಿಮೆಯ ಶುಭಾಶಯ ಕೋರಿದರು. ಅನೇಕ ಬಡ ವೃದ್ಧ ಮಹಿಳೆಯರಿಗೆ ವಸ್ತ್ರಗಳನ್ನು ವಿತರಿಸಿ ಶುಭ ಕೋರಿದರು.ಒ.ಎಸ್.ರಮೇಶ್‌ಬಾಬು ಹಾಗೂ ಅರುಣ ದಂಪತಿಯಿಂದ ಪಟ್ಟಣದ ಶಾಂತಿ ಬೃಂದಾವನದಲ್ಲಿ ಯಶಸ್ವಿಯಾಗಿ ಶ್ರೀ ಲಕ್ಷ್ಮೀ ಸತ್ಯನಾರಾಯಣಸ್ವಾಮಿ ಪೂಜೆ ನೆರವೇರಿಸಲಾಯಿತು.ಅನೇಕ ಗೃಹಣಿಯರು, ಶ್ರೀ ಲಕ್ಷ್ಮೀ ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡಿದ್ದು, ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ವೈಶಾಖ ಶುದ್ಧ ಹುಣ್ಣಿಮೆ ಅಂಗವಾಗಿ ಗುರುವಾರ ಪಟ್ಟಣದ ಶ್ರೀ ವೆಂಕಟೇಶ್ವರ ಬಡಾವಣೆಯ ಮಾತೆ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ನೂರಾರು ಭಕ್ತರು ಭಾಗವಹಿಸಿದ್ದರು.