ಬುದ್ಧ ಪೂರ್ಣಿಮೆ: 2 ಲಕ್ಷ ಭಕ್ತರದಿಂದ ಹುಲಿಗೆಮ್ಮ ದೇವಿ ದರ್ಶನ

KannadaprabhaNewsNetwork |  
Published : May 13, 2025, 01:34 AM IST
4554 | Kannada Prabha

ಸಾರಾಂಶ

ಹುಲಿಗೆಮ್ಮ ದೇವಸ್ಥಾನದ ದೇವಿಯ ಜಾತ್ರೆಯು ಕಾರ್ಯಕ್ರಮಗಳು ಮಂಗಳವಾರದಿಂದ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ಭಕ್ತರು ತಂಗಲು ಅವಕಾಶವಿಲ್ಲ. ಅಲ್ಲದೆ ರಾತ್ರಿ 7 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಿದ್ದರಿಂದ ಈ ಹುಣ್ಣಿಮೆಗೆ ಭಕ್ತರ ಸಂಖ್ಯೆ ಇಳಿಮುಖವಾಗಿದೆ.

ಮುನಿರಾಬಾದ್:

ಬುದ್ಧ ಪೂರ್ಣಿಮೆ ಪ್ರಯುಕ್ತ ಸೋಮವಾರ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಸುಮಾರು 2 ಲಕ್ಷ ಕ್ಕೂಅಧಿಕ ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆದರು.

ಹುಲಿಗೆಮ್ಮ ದೇವಸ್ಥಾನದ ದೇವಿಯ ಜಾತ್ರೆಯು ಕಾರ್ಯಕ್ರಮಗಳು ಮಂಗಳವಾರದಿಂದ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ಭಕ್ತರು ತಂಗಲು ಅವಕಾಶವಿಲ್ಲ. ಅಲ್ಲದೆ ರಾತ್ರಿ 7 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಿದ್ದರಿಂದ ಈ ಹುಣ್ಣಿಮೆಗೆ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಮೇ 13ರಿಂದ ಅಮ್ಮನವರ ಜಾತ್ರೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಜೂ. 12ರ ವರೆಗೆ ನಡೆಯಲಿದೆ. ಮಂಗಳವಾರ ಅಮ್ಮನವರಿಗೆ ಕಂಕಣ ಧಾರಣೆ ಮಾಡುತ್ತಿದ್ದು ಜೂ.13ರಂದು ವಿಸರ್ಜನೆ ಮಾಡಲಾಗುವುದು.

ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಅಮ್ಮ ದಾಸೋಹ ನಿಲಯವನ್ನು ಮಂಗಳವಾರ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಲಿಸಲಿದ್ದಾರೆಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶರಾವ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ

ಮೇ 20ರಿಂದ ಹುಲಿಗೆಮ್ಮ ದೇವಿ ಜಾತ್ರೆ ಪ್ರಾರಂಭವಾಗಲಿದ್ದು 20ರಂದು ಲಘು ರಥೋತ್ಸವ, 21ರಂದು ಮಹಾರಾಥೋತ್ಸವ ನಡೆಯಲಿದೆ. ಜಾತ್ರೆ ನಿಮಿತ್ತ ಬಾಳೆ ದಂಡಿ, ಅಕ್ಕಿಪಿಡಿ ಹಾಗೂ ಅಗ್ನಿಕೊಂಡ ಕಾರ್ಯಕ್ರಮ ಸಹ ನಡೆಯಲಿದೆ. ಶ್ರೀಹುಲಿಗಮ್ಮ ದೇವಿ ಜಾತ್ರೆ ಕಾರ್ಯಕ್ರಮದಲ್ಲಿ 10 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌