ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ತಾಲೂಕು ಭಾರತೀಯ ಬೌದ್ಧ ಮಹಾಸಭಾ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಬೌದ್ಧ ಮಹಾಸಭಾವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಸದಸ್ಯತ್ವ ಹೆಚ್ಚಿಸುವ ಜೊತೆಗೆ ಬುದ್ಧನ ಮಾರ್ಗವನ್ನು ಗ್ರಾಮೀಣ ಜನರಿಗೆ ತಿಳಿಸಿ ಬೌದ್ಧ ಧರ್ಮದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಮೊಮ್ಮಗ ಹಾಗೂ ಬೌದ್ಧ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಭೀಮರಾವ್ ಯಶವಂತ್‌ರಾವ್ ಅಂಬೇಡ್ಕರ್ ಹಾಗೂ ಮೀರಾಬಾಯಿ ಅವರ ಸಲಹೆ, ಸಹಕಾರದೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಯುವಕರನ್ನು ಸಂಘಟಿಸಲಾಗುತ್ತಿದೆ ಎಂದರು.ಮಳವಳ್ಳಿ ತಾಲೂಕಿನಲ್ಲಿ ಬುದ್ಧನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಜೊತೆಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಎಲ್ಲರನ್ನು ಒಂದುಗೂಡಿಸಿ ಬುದ್ಧನ ಸಂದೇಶವನ್ನು ತಿಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಬೌದ್ಧ ಮಹಾಸಭಾದ ತಾಲೂಕು ಅಧ್ಯಕ್ಷ ಮೋಹನ್‌ಕುಮಾರ್ ಮಾತನಾಡಿದರು. ಮುಖಂಡರಾದ ವಿಜಯ್‌ಕುಮಾರ್, ಚಂದ್ರಶೇಖರ್, ಸಿದ್ದರಾಜು, ಯತೀಶ್, ನಂಜುಂಡಸ್ವಾಮಿ, ಸಿಕ್ರೇಶ್, ಅಶೋಕ್, ಅರವಿಂದ್, ಸ್ವಾಮಿ, ನಾಗೇಂದ್ರ, ಕುಮಾರ್, ಸುಧಾಕರ್, ಮಹೇಶ್‌ಕುಮಾರ್, ಸಂದೇಶ್ ಸೇರಿ ಇತರರು ಇದ್ದರು.