ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಗುರುಭವನದಲ್ಲಿ ಸರ್ಕಾರಿ ನೌಕರರು, ಶಿಕ್ಷಕರು ಹಾಗೂ ಗಣ್ಯರ ಸಮ್ಮುಖದಲ್ಲಿ ಅಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮ್ಮೇಳನವು ಐತಿಹಾಸಿಕವಾಗಲಿದ್ದು 1 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮ್ಮೇಳನ ಸುಗಮವಾಗಿ ಸಾಗಲು, ಅದ್ಧೂರಿತನಕ್ಕೆ ನಿಮ್ಮೆಲ್ಲರ ಸಹಕಾರ ಇರಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಪೂಜ್ಯ ಬಂತೇಜಿ ಅವರ ಮಹದೇವ ಹೆಸರಿನಲ್ಲಿರುವ ಪೋನ್ ಪೇ ಸಂಖ್ಯೆಗೆ ಹಲವು ಗಣ್ಯರು ಕೈಲಾದ ದೇಣಿಗೆ ನೀಡುವ ಮೂಲಕ ಸಹಕಾರ ನೀಡಿದ್ದಾರೆ, ಸ್ವತಃ ಬಂತೇಜಿಯವರು 50 ಸಾವಿರ ರು., ಗುಂಡ್ಲುಪೇಟೆಯ ದಾನಿಗಳೊಬ್ಬರು ಎರಡು ಲಕ್ಷ ರು. ನೀಡಿದ್ದಾರೆ, ಸುರೇಶ್ ಅವರು 50 ಸಾವಿರ ರು. ಹೀಗೆ ಕೆಲವರು 50 ಸಾವಿರ ರು., 25ಸಾವಿರ ರು., 10 ಸಾವಿರ ರು. ಹೀಗೆ ಸಾವಿರಾರು ರು.ಗಳನ್ನು ದೇಣಿಗೆ ನೀಡಿ ಸಹಕರಿಸುತ್ತಿದ್ದಾರೆ. ಅಂದು ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭವಾಗುವ ಕಾರ್ಯಕ್ರಮಗಳು ರಾತ್ರಿ ತನಕ ವಿಭಿನ್ನ ರೀತಿಯಲ್ಲಿ ಸಾಗಲಿವೆ. ಕಾರ್ಯಕ್ರಮದ ಪೂರ್ವ ತಯಾರಿಗೂ ರೂಪುರೇಷೆಗಳನ್ನು ತಯಾರಿಸಲಾಗಿದೆ. ಈ ವಿಚಾರದಲ್ಲಿ ಮಾಜಿ ಸಚಿವರು, ಶಾಸಕರು, ಗಣ್ಯರು, ಹಿರಿಯರು ಹಾಗೂ ಬುದ್ದಿ ಜೀವಿಗಳಿಂದಲೂ ಸಲಹೆ -ಸಹಕಾರ ಕೋರಲಾಗಿದೆ ಎಂದರು.ಪ್ರಗತಿಪರ ಚಿಂತಕ ವೆಂಕಟರಮಣಸ್ವಾಮಿ, ಕವಿ ಮುಳ್ಳೂರು ಶಿವಮಲ್ಲು, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಚಿಕ್ಕರಾಜು, ಸಿದ್ದರಾಜು, ಸಿದ್ದಯ್ಯ ಲೇಖಕ ಪಳನಿಸ್ವಾಮಿ ಜಾಗೇರಿ,ಮಹದೇವಕುಮಾರ್, ತುಳಸಿಯನ್, ನೌಕರರು, ಶಿಕ್ಷಕರು ಹಾಜರಿದ್ದರು.
2 ದಿನಗಳ ಕಾಲ ನಡೆಯುವ ಸಮ್ಮೇಳನ ನಮ್ಮೆಲ್ಲರ ಕಾರ್ಯಕ್ರಮ, ಇದಕ್ಕೆ ನಾವೆಲ್ಲರೂ ಹೆಚ್ಚಿನ ಸಹಕಾರ ನೀಡುವ ಮೂಲಕ ನಮ್ಮ ತಾಲೂಕು,ಜಿಲ್ಲೆಯ ಕೀರ್ತಿ ಎತ್ತಿ ಹಿಡಿಯಬೇಕು, ನಾನು ವಯುಕ್ತಿಕವಾಗಿ 10 ಸಾವಿರ ರು.ಗಳನ್ನು ದೇಣಿಗೆ ನೀಡುವೆ, ಸರ್ಕಾರಿ ನೌಕರರು, ಶಿಕ್ಷಕರು ಇಷ್ಟೆ ನೀಡಬೇಕು ಎಂಬ ನಿಯಮವಿಲ್ಲ. ಕೈಲಾದ ಮಟ್ಟಿಗೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಯಶಸ್ವಿಗೊಳಿಸೋಣ ಎಂದು ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಮಾಜಿ ಅಧ್ಯಕ್ಷ ಆನಂದರಾಜು ಹೇಳಿದರು.