ಗ್ರಾಹಕರೇ ದೇವರು ಎಂಬ ಪರಿಕಲ್ಪನೆಯಿಂದ ಕಳೆದ 88 ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಚನ್ನಬಸಪ್ಪ ಅಂಡ್ ಸನ್ಸ್. ಗ್ರಾಹಕರ ನಂಬಿಕೆ, ವಿಶ್ವಾಸವೇ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗ್ರಾಹಕರೇ ದೇವರು ಎಂಬ ಪರಿಕಲ್ಪನೆಯಿಂದ ಕಳೆದ 88 ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಚನ್ನಬಸಪ್ಪ ಅಂಡ್ ಸನ್ಸ್. ಗ್ರಾಹಕರ ನಂಬಿಕೆ, ವಿಶ್ವಾಸವೇ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಫಾರ್ಮ್ ಹೌಸ್‌ನಲ್ಲಿ ನಡೆದ ಬಿ.ಎಸ್.ಸಿ. ನೂತನ ಜವಳಿ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರಕ್ಕೆ ಇಂತಹ ಬೃಹತ್ ಜವಳಿ ಮಳಿಗೆಯ ಅಗತ್ಯವಿತ್ತು. ಗ್ರಾಹಕರಿಗೆ ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಒದಗಿಸಬೇಕು ಎಂದರು.
ಉತ್ತಮ ಗುಣಮಟ್ಟದ ಬಿಎಸ್‌ಸಿ ಜವಳಿ ಶೋರೂಮ್ ಗಳು ರಾಜ್ಯದಲ್ಲೇ ಅತ್ಯಂತ ಹೆಸರುವಾಸಿಯಾಗಿ ಬೆಳೆದಿವೆ. ಇಂತಹ ಶೋರೂಮ್ ಶಿವಮೊಗ್ಗಕ್ಕೆ ಬಂದಿರುವುದು ಜನರ ಬಹುದೊಡ್ಡ ಬೇಡಿಕೆ ಈಗ ಈಡೇರಿದೆ. ಅದು ಸಹ ಇಡೀ ರಾಜ್ಯದಲ್ಲಿ ಅತ್ಯಂತ ದೊಡ್ಡ ಶೋರೂಮ್ ಇಲ್ಲಿ ಆಗಿರುವುದು ನಿಜಕ್ಕೂ ಸಂತಸದ ವಿಷಯ. ದೊಡ್ಡ ಶೋರೂಮ್ ಆರಂಭವಾಗುವ ಮೂಲಕ ಇಲ್ಲಿನ ನೂರಾರು ಜನರಿಗೆ ಉದ್ಯೋಗದ ಅವಕಾಶ ನೀಡಿದೆ ಎಂದರು.
ಬೇರೆ ಉದ್ಯಮದತ್ತ ಈ ಕುಟುಂಬ ಯೋಚಿಸದೆ, ತಮ್ಮ ಕುಟುಂಬ ಇದೇ ಕೆಲಸವನ್ನು ಮಾಡಬೇಕೆಂದು ಪ್ರಯತ್ನಿಸುತ್ತಿರುವ ಬಿಎಸ್ಸಿ ಕುಟುಂಬದ ಶ್ರಮ ನಿಜಕ್ಕೂ ಶ್ಲಾಘನೀಯ ಹಾಗೂ ನಂಬಿಕೆಗೆ ಅರ್ಹವಾದುದು ಎಂದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, ಕುವೆಂಪು ಅವರ ಜನ್ಮಭೂಮಿಯಲ್ಲಿ ಬೃಹತ್ ಜವಳಿ ಮಳಿಗೆ ಆರಂಭಿಸಿರುವುದು ಸಂತಸದ ಸಂಗತಿ. ಮಲೆನಾಡು ಭಾಗದ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಸಂಸ್ಥೆಯ ನಿರ್ದೇಶಕರಾದ ಉಮಾಪತಿ ಅವರು ಮಾತನಾಡಿ, ನಮ್ಮ ಅಜ್ಜನ ಕಾಲದಿಂದಲೂ ಗ್ರಾಹಕರ ಸೇವೆಯನ್ನು ಮುಖ್ಯವಾಗಿ ಪರಿಗಣಿಸಿಕೊಂಡು ಬಂದಿದ್ದೇವೆ. ಗ್ರಾಹಕರ ನಂಬಿಕೆ ಮತ್ತು ವಿಶ್ವಾಸವೇ ನಮ್ಮ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ.ಯೋಗೇಶ್, ಚನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.