ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಐನೂರು ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಜಿಲ್ಲೆಯ ಹೊಸ ತಾಲ್ಲೂಕುಗಳಾದ ಚೇಳೂರು, ಮಂಚೇನಹಳ್ಳಿಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.
ಜಿಲ್ಲೆಗೆ ಬಜೆಟ್ ಕೊಡುಗೆಚೇಳೂರಿನಲ್ಲಿ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಣ, ಹಾಗೆ 150 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಚಿಂತಾಮಣಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಘಟಕ ಕಾಲೇಜು ಸ್ಥಾಪನೆಯಾಗಲಿದ್ದು ಸಂತಸ ವಿಷಯವಾಗಿದೆ. ಇನ್ನು ಜಿಲ್ಲಾ ಕೇಂದ್ರದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆಗೆ ನಿರ್ಮಾಣಕ್ಕೆ ಹಣ ಮೀಸಲಿಡಲಾಗಿದೆ. ಗೌರಿಬಿದನೂರಿಗೆ ಎಚ್ ಎನ್ ಪ್ರಾಧಿಕಾರ ಘೋಷಣೆಯಾಗಿದೆ ಎಂದರು.
ಗ್ಯಾರಂಟಿಗಳಿಗೂ ಅನುದಾನಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎನ್ ರಮೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವರಿಗೂ ಸಮಪಾಲು ಸಮಾನತೆಯ ಬಜೆಟ್ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಆಶಾದಯಕ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ, ಇನ್ನು ಪಂಚ ಗ್ಯಾರಂಟಿಗಳಿಗೂ ಹಣ ಮೀಸಲಿಡಲಾಗಿದೆ, ರೈತಾಪಿ ವರ್ಗಕ್ಕೆ ಈ ಬಜೆಟ್ ಆಶಾದಯಕವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಭರಣಿ ವೆಂಕಟೇಶ್, ಆವಲರೆಡ್ಡಿ, ಕೆ.ಎಂ.ಮುನೇಗೌಡ, ರಾಜಾಕಾಂತ್, ಜಯರಾಂ, ಪ್ರೆಸ್ ಸೂರಿ, ನಾಗಭೂಷಣ್ ಮ ತ್ತಿತರರು ಇದ್ದರು.