ಎಲ್ಲ ವಾರ್ಡ್‌ಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಆಯವ್ಯಯ ಮಂಡನೆ

KannadaprabhaNewsNetwork |  
Published : Mar 05, 2025, 12:30 AM IST
4ಎಚ್ಎಸ್ಎನ್5 : ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದರು. | Kannada Prabha

ಸಾರಾಂಶ

ಪುರಸಭೆ ೨೦೨೫-೨೦೨೬ನೇ ಸಾಲಿಗೆ ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಅವರು ಪುರಸಭೆಯ ಆಯ ವ್ಯಯವನ್ನು ಮಂಡನೆ ಮಾಡಿದ್ದು, ಅಳೆದು ತೂಗಿ ಪ್ರಸಕ್ತ ವರ್ಷಕ್ಕೆ ಅವರು ೪೧ ಲಕ್ಷ ೫೯ ಸಾವಿರ ರು.ಗಳ ಉಳಿತಾಯ ಬಜೆಟ್ ಮಂಡನೆ ಮಾಡಿದರು. ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿರುವ ನೂತನ ಬಡಾವಣೆಗಳು ಸೇರಿದಂತೆ ಎಲ್ಲಾ ಬಡಾವಣೆಗಳಿಗೂ ಮೂಲಸೌಕರ್ಯ ಕಲ್ಪಿಸಲು ವಿಶೇಷ ಅನುದಾನವನ್ನು ಮೀಸಲಿಡಲು ಹಾಗೂ ಪುರಸಭೆಯ ಆಧಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪುರಸಭೆ ೨೦೨೫-೨೦೨೬ನೇ ಸಾಲಿಗೆ ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಅವರು ಪುರಸಭೆಯ ಆಯ ವ್ಯಯವನ್ನು ಮಂಡನೆ ಮಾಡಿದ್ದು, ಅಳೆದು ತೂಗಿ ಪ್ರಸಕ್ತ ವರ್ಷಕ್ಕೆ ಅವರು ೪೧ ಲಕ್ಷ ೫೯ ಸಾವಿರ ರು.ಗಳ ಉಳಿತಾಯ ಬಜೆಟ್ ಮಂಡನೆ ಮಾಡಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿಗೆ ಅವಶ್ಯವಿರುವ ಹಣಕಾಸಿನ ಕ್ರೂಢೀಕರಣ ಮತ್ತು ಖರ್ಚಿನ ಕುರಿತಾಗಿ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಅವರು ಮಾತನಾಡಿ, ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಆಯವ್ಯಯ ಮಂಡಿಸಲಾಗಿದೆ. ಪಟ್ಟಣದ ಸರ್ವತೋಮುಖ ಬೆಳವಣಿಗೆಗೆ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದರು.

ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿರುವ ನೂತನ ಬಡಾವಣೆಗಳು ಸೇರಿದಂತೆ ಎಲ್ಲಾ ಬಡಾವಣೆಗಳಿಗೂ ಮೂಲಸೌಕರ್ಯ ಕಲ್ಪಿಸಲು ವಿಶೇಷ ಅನುದಾನವನ್ನು ಮೀಸಲಿಡಲು ಹಾಗೂ ಪುರಸಭೆಯ ಆಧಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಪಾದಚಾರಿ ಮಾರ್ಗ ನಿರ್ಮಾಣ, ಮಾರ್ಕೆಟ್ ಅಭಿವೃದ್ಧಿ ಸೇರಿದಂತೆ ಫುಟ್ಟಾತ್ ವ್ಯಾಪಾರಿಗಳ ತೆರವು ಸೇರಿದಂತೆ ಹತ್ತಾರೂ ಕಾರ್ಯಕ್ರಮ ಅನು?ನಕ್ಕೆ ಸಭೆಯಲ್ಲಿ ಸಮ್ಮತಿ ಪಡೆಯಲಾಗಿದೆ ಎಂದರು.

ಎಸ್‌ಎಫ್‌ಸಿ, ೧೫ನೇ ಹಣಕಾಸು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ, ಸ್ವಚ್ಛ ಭಾರತ್ ಅನುದಾನ, ಡೇ ನಲ್ಮ್‌ ಯೋಜನೆ, ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಅನುದಾನ, ತೆರಿಗೆ ಇನ್ನಿತರ ಮೂಲಗಳಿಂದ ೧೮ ಕೋಟಿ ೨೨ ಲಕ್ಷ ರು. ಗಳ ಅನುದಾನವನ್ನು ನಿರೀಕ್ಷಿಸಲಾಗಿದೆ. ಅದೇ ರೀತಿ ಕಚೇರಿ ನಿರ್ಮಾಣ ಕಾಮಗಾರಿ, ಕಚೇರಿ ಪೀಠೋಪಕರಣ, ವಾಣಿಜ್ಯ ಮಳಿಗೆ ಕಾಮಗಾರಿ, ರಸ್ತೆ, ಚರಂಡಿ ಅಭಿವೃದ್ಧಿ, ಸಂಚಾರಿ, ಬೀದಿದೀಪ ಅಳವಡಿಕೆ, ಮಳೆ ನೀರಿನ ಚರಂಡಿ, ಘನತ್ಯಾಜ್ಯ ನಿರ್ವಹಣೆ, ಕಟ್ಟಡ ಕಾಮಗಾರಿ, ನೀರು ಸರಬರಾಜು ಅಭಿವೃದ್ಧಿ ಕಾಮಗಾರಿ, ಒಳಚರಂಡಿ ಅಭಿವೃದ್ಧಿ ಕಾಮಗಾರಿ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಂಗವಿಕಲರ ಅಭಿವೃದ್ಧಿ, ಸಿಬ್ಬಂದಿ ವೇತನ, ಕೌನ್ಸಿಲ್ ಸದಸ್ಯರ ಗೌರವಧನ ಪ್ರಯಾಣ ಭತ್ಯ ಸೇರಿದಂತೆ ಇನ್ನಿತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ೧೨ ಕೋಟಿ ೭ ಲಕ್ಷ ರು.ಗಳ ಖರ್ಚು ಅಂದಾಜಿಸಲಾಗಿದೆ ಎಂದರು.

ಪುರಸಭೆಯ ಸ್ವಂತ ಮೂಲಗಳಿಂದ ಆದಾಯ ೯ ಕೋಟಿ ೫೬ ಲಕ್ಷ ರು. ಸೇರಿದಂತೆ ಒಟ್ಟಾರೆ ೩೯ ಕೋಟಿ ೮೫ ಲಕ್ಷ ರು. ಗಳ ಆದಾಯ ನಿರೀಕ್ಷೆಯೊಂದಿಗೆ ವಿವಿಧ ಪಾವತಿಗಳಿಗಾಗಿ ೪೦ ಕೋಟಿ ೭೫ ಲಕ್ಷ ರು.ಗಳನ್ನು ವ್ಯಯಿಸಲಾಗುತ್ತಿದೆ ಎಂದರು. ಬಜೆಟ್ ಮಂಡನೆ ಸಭೆಯಲ್ಲಿ ಹಾಜರಿದ್ದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಪುರಸಭಾಧ್ಯಕ್ಷರು ಉತ್ತಮವಾದ ಬಜೆಟ್ ಮಂಡನೆ ಮಾಡಿದ್ದು, ಕೆಲ ಸದಸ್ಯರ ಸಲಹೆಯಂತೆ ಪಟ್ಟಣದಲ್ಲಿನ ರಸ್ತೆ, ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಮತ್ತು ಸದಸ್ಯ ಪ್ರಕಾಶ್ ನೀಡಿದ ಸಲಹೆಯಂತೆ ಪುರಸಭಾ ಆಸ್ತಿಗಳನ್ನು ಸಂರಕ್ಷಿಸುವ ಸಲುವಾಗಿ ಅನುದಾನ ಮೀಸಲಿಟ್ಟು ಕಾರ್ಯನ್ಮೋಖರಾಗಬೇಕು ಎಂದ ಅವರು, ಭಿಕ್ಷುಕಕ ಕರವನ್ನು ಸರ್ಕಾರಕ್ಕೆ ಪಾವತಿ ಮಾಡುವ ಬದಲಾಗಿ ಸ್ಥಳೀಯವಾಗಿ ಇರುವ ಭಿಕ್ಷುಕರನ್ನು ಗುರ್ತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸವಾಗಬೇಕೆಂದರು.

ಇನ್ನುಳಿದಂತೆ ಪುರಸಭಾ ಸದಸ್ಯ ಪ್ರಕಾಶ್ ರವರು ಪಟ್ಟಣದ ವ್ಯಾಪ್ತಿಯಲ್ಲಿನ ಪಿಎಲ್ ಡಿ ಬ್ಯಾಂಕ್ ಪಕ್ಕದ ವಾಣಿಜ ವಾಣಿಜ್ಯ ಸಂರ್ಕೀಣ ತೆರವುಗೊಳಿಸಿ ಮಳಿಗೆ ನಿರ್ಮಣ ಮಾಡಿ ಪುರಸಭೆಗೆ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಹಣ ಮೀಸಲಿಡಬೇಕು, ಮಾರುಕಟ್ಟೆಯೊಳಗೆ ನಿರ್ಮಾಣ ಮಾಡಲಾಗಿರುವ ಪ್ರಾಂಗಣವನ್ನು ಹರಾಜು ನಡೆಸಿ ಆದಾಯ ತರುವ ಕೆಲಸವಾಗಬೇಕೆಂದರು.

ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಪುರಸಭೆ ಉಪಾಧ್ಯಕ್ಷೆ ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್‌ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ