ಅಲ್ಪಸಂಖ್ಯಾತರ ಓಲೈಸುವ ಬಜೆಟ್: ಪ್ರತಾಪ್‌ಸಿಂಹ ನಾಯಕ್‌

KannadaprabhaNewsNetwork |  
Published : Mar 07, 2025, 11:45 PM IST
32 | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ೧೬ನೇ ಬಜೆಟ್ ಮಂಡಿಸಿದ್ದು, ಅಭಿವೃದ್ಧಿಗೆ ಒತ್ತು ನೀಡದ, ಸಾಲದ ಹೊರೆ ಹೆಚ್ಚಿಸುವ, ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಇದಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಅಭಿವೃದ್ಧಿಗೆ ಒತ್ತು ನೀಡದ, ಸಾಲದ ಹೊರೆ ಹೆಚ್ಚಿಸುವ, ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಇದಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಟೀಕಿಸಿದ್ದಾರೆ.

ಸಾಲ ಮಾಡಿ ಬಜೆಟ್ ಗಾತ್ರವನ್ನು ಹಿಗ್ಗಿಸಲಾಗಿದೆ. ಶಾಶ್ವತ ಯೋಜನೆಗಳನ್ನು ಆಯವ್ಯಯದಿಂದ ತೆಗೆದುಹಾಕಲಾಗಿದೆ. ಮತಬ್ಯಾಂಕ್ ಆಧಾರಿತ, ರಾಜ್ಯದ ಆರ್ಥಿಕ ಶಿಸ್ತನ್ನು ಹಾಳುಗೆಡುವ ಬಜೆಟ್ ಇದಾಗಿದೆ.

ಕೌಶಲ್ಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಕಡೆಗೆಣಿಸಲಾಗಿದ್ದು ಮತ್ತು ರೈತ ವಿರೋಧಿಯಾಗಿದ್ದು, ಸಾಂಸ್ಕೃತಿಕ ವಲಯ, ಪ್ರವಾಸೋದ್ಯಮವನ್ನು ನಿರ್ಲಕ್ಷಿಸಲಾಗಿದೆ. ಎಸ್.ಸಿ, ಎಸ್.ಟಿ., ಮತ್ತು ಓಬಿಸಿ ಗಳು ತಮ್ಮ ಆರ್ಥಿಕ ಸದೃಢತೆಯತ್ತ ಸಾಗಲು ನೀರಸ ಬಂಡವಾಳ ಒದಗಿಸಲಾಗಿದೆ. ವಕ್ಭ ಆಸ್ತಿಯ ರಕ್ಷಣೆಗಾಗಿ 150 ಕೋಟಿ ಅನುದಾನ ಮೀಸಲಿರಿಸಿದ್ದೇ ಅಲ್ಲದೆ ಮುಸ್ಲಿಮರಿಗಷ್ಟೇ ಸಪ್ರಾರಿ ಗುತ್ತಿಗೆಯಲ್ಲಿ ಮೀಸಲು ನೀಡಿರುವುದು, ತಸ್ತೀಕ್ ಹೆಚ್ಚಿಸದೆ, ಮುಲ್ಲಾ, ಇಮಾಮ್ ಗಳಿಗೆ ಗೌರವಧನ ಹೆಚ್ಚಿಸುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದೆ. ಕನ್ನಡಿಯೊಳಗಿನ ಗಂಟಿನೊಳಗೆ ಭ್ರಮೆಯಲ್ಲಿರುವ ಬಂಡವಾಳವಿಲ್ಲದ ಬಡಾಯಿ ಬಜೆಟ್ ನ್ನು ಮುಖ್ಯಮಂತ್ರಿ ಮಂಡಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಆಯವ್ಯಯ ಗಾತ್ರದಲ್ಲಿ ಶೇ. 27 ಸಾಲ ವೆಚ್ಚದಲ್ಲಿ ಶೇ. 18 ಬಡ್ಡಿಗೆ ಹೋಗಿದೆ. ಒಟ್ಟಾರೆ ಆಯವ್ಯಯದಲ್ಲಿ ಶೇ. 45 ರಷ್ಟು ಸಾಲದ ಹೊರೆ ಇದೆ. ಶಿಕ್ಷಣದ ಯೋಜನೆಗಳನ್ನು ಕಡೆಗೆಣಿಸಿದೆ. ಬರಗಾಲ ಕುಡಿಯುವ ನೀರು, ಬೆಳಹಾನಿ ಪರಿಹಾರ ಇವುಗಳ ಬಗ್ಗೆ ಚಕಾರವೆತ್ತದೆ, ಅರೆಕಾಲಿಕ ಉಪನ್ಯಾಸಕರ ಮತ್ತು ಇತರೆ ಗುತ್ತಿಗೆ ನೌಕರರ ಭದ್ರೆಗೆ ಆಸಕ್ತಿ ವಹಿಸದೆ, ಲಕ್ಷಾಂತರ ಹಾಲು ಉತ್ಪಾದಕ ರೈತ ಬಾಂಧವರಿಗೆ ಬಾಕಿ ಇರುವ ಪ್ರೋತ್ಸಧನದ ಬಗ್ಗೆ ಮಾತನಾಡದೆ, ಕೇಂದ್ರದ ಮೇಲೆ ಗೂಬೆ ಕೂರಿಸುವ ಚಾಳಿಯನ್ನು ಮುಖ್ಯಮಂತ್ರಿಯವರು ಮುಂದುವರಿಸಿದ್ದಾರೆ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ