ಕನ್ನಡಪ್ರಭ ವಾರ್ತೆ ಕೊಲ್ಹಾರಪಟ್ಟಣದ ರಾಣಿ ಚೆನ್ನಮ್ಮ ಸರ್ಕಲ್ ಸಮೀಪದ ಹನಮಾನ ದೇವಸ್ಥಾನ ಬಳಿ ತೆಂಗಿನಮರಕ್ಕೆ ಸಿಡಿಲು ಬಡಿದು ಪರಿಣಾಮ ಪಕ್ಕದಲ್ಲಿದ್ದ ಎಮ್ಮೆ ಗೆ ತಗುಲಿದ ಹಿನ್ನೆಲೆ ಎಮ್ಮೆ ಮೃತಪಟ್ಟಿರುವ ಘಟನೆ ಗುರುವಾರ ಜರುಗಿದೆ.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದ ರಾಣಿ ಚೆನ್ನಮ್ಮ ಸರ್ಕಲ್ ಸಮೀಪದ ಹನಮಾನ ದೇವಸ್ಥಾನ ಬಳಿ ತೆಂಗಿನಮರಕ್ಕೆ ಸಿಡಿಲು ಬಡಿದು ಪರಿಣಾಮ ಪಕ್ಕದಲ್ಲಿದ್ದ ಎಮ್ಮೆ ಗೆ ತಗುಲಿದ ಹಿನ್ನೆಲೆ ಎಮ್ಮೆ ಮೃತಪಟ್ಟಿರುವ ಘಟನೆ ಗುರುವಾರ ಜರುಗಿದೆ.ಗುರುವಾರ ರಾತ್ರಿ 8-30 ಗಂಟೆ ಸುಮಾರಿಗೆ ಒಮ್ಮೆಲೇ ಭಾರಿ ಗಾಳಿ ಮಳೆ ಪ್ರಾರಂಭವಾಗಿದೆ. ಈ ವೇಳೆ ಭಾರೀ ಗಾತ್ರದ ಸಿಡಿಲೊಂದು ಪಟ್ಟಣದಲ್ಲಿ ಬಿದ್ದಿದೆ. ಪಟ್ಟಣದ 2ನೇ ವಾರ್ಡಿನಲ್ಲಿ ಹಣಮಂತ ದೇವರ ಮಂದಿರ ಹತ್ತಿರ ಕಲ್ಲಪ್ಪ ಗಣಿಯವರು ಗಿಡದ ಕೆಳಗಡೆ ಎಮ್ಮೆಯನ್ನು ಕಟ್ಟಿದ್ದಾರೆ. ಈ ವೇಳೆ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಪಕ್ಕದಲ್ಲಿದ್ದ ಎಮ್ಮೆಗೆಗೂ ಕೂಡಾ ತಾಗಿದೆ ಇದರಿಂದ ಎಮ್ಮೆ ಸತ್ತಿದೆ. ಸುಮಾರು ₹ 1ಲಕ್ಷ ಬೆಲೆಯ ಎಮ್ಮೆಯನ್ನು ಕಳೆದುಕೊಂಡ ರೈತ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.