ಮೂರು ದಿನ ಬಿಲ್ಡ್‌ ಎಕ್ಸ್‌ ಪೋ ಆಯೋಜನೆ

KannadaprabhaNewsNetwork |  
Published : Dec 23, 2023, 01:45 AM ISTUpdated : Dec 23, 2023, 01:46 AM IST
22ಎಚ್ಎಸ್ಎನ್5 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಲ್ಡರ್ಸ್ ಅಸೋಸಿಯೇಷನ್ ಆಫ್  ಇಂಡಿಯಾ ಛೇರ್ಮನ್ ಎ.ಸಿ. ನಾರಾಯಣ್ ಮತ್ತು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ. | Kannada Prabha

ಸಾರಾಂಶ

ಕಟ್ಟಡ ನಿರ್ಮಾಣ ವಿಷಯದಲ್ಲಿ ಸಾರ್ವಜನಿಕರಿಗೆ ಮಾಹಿತಿ ಹಾಗೂ ಅನುಭವ ನೀಡುವ ಉದ್ದೇಶದಿಂದ ಕಟ್ಟಡ ನಿರ್ಮಾಣದ ವಸ್ತುಗಳ, ಇಂಟೀರಿಯರ್‌ ಡಿಸೈನ್‌ಗಳು, ಫರ್ನಿಚರ್‌ಗಳು, ರೈತರ ಕೃಷಿ ಸಾಮಗ್ರಿಗಳು, ಕ್ರಷಿಂಗ್ ಯಂತ್ರಗಳು, ಗೃಹೋಪಯೋಗಿ ವಸ್ತುಗಳು ಮತ್ತು ವಾಹನಗಳು ಇತರೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಾಸನ ನಗರದಲ್ಲಿ ಯಶಸ್ವಿ ಎರಡನೇ ಬಾರಿಗೆ ಡಿಸೆಂಬರ್ ೨೪, ೨೫, ೨೬ರಂದು ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಬಿಲ್ಡ್ ಎಕ್ಸ್‌ಪೋ-೨೦೨೩ ಎಂಬ ಹೆಸರಿನಿಂದ ಕಟ್ಟಡ ನಿರ್ಮಾಣ ವಸ್ತುಗಳ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ ಬಿಲ್ಡರ್ಸ್ ಅಸೋಸಿಯೇಷನ್ ಆಫ್‌ ಇಂಡಿಯಾ ಇವರ ಸಹಯೋಗದೊಂದಿಗೆ ಡಿಸೆಂಬರ್‌ ೨೪, ೨೫, ೨೬ರಂದು ಹಾಸನ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಕಟ್ಟಡ ನಿರ್ಮಾಣದ ವಸ್ತುಗಳು, ಇಂಟೀರಿಯರ್‌ ಡಿಸೈನ್‌ಗಳು, ರೈತರ ಕೃಷಿ ಸಾಮಗ್ರಿಗಳು, ಕ್ರಷಿಂಗ್ ಯಂತ್ರಗಳು, ಗೃಹ ಉಪಯೋಗಿ ವಸ್ತುಗಳು ಮತ್ತು ವಾಹನಗಳ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಛೇರ್ಮನ್ ಎ.ಸಿ. ನಾರಾಯಣ್ ಮತ್ತು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಹಾಸನ ನಗರ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದ್ದು ಕಟ್ಟಡ ನಿರ್ಮಾಣ ವಿಷಯದಲ್ಲಿ ಸಾರ್ವಜನಿಕರಿಗೆ ಮಾಹಿತಿ ಹಾಗೂ ಅನುಭವ ನೀಡುವ ಉದ್ದೇಶದಿಂದ ಕಟ್ಟಡ ನಿರ್ಮಾಣದ ವಸ್ತುಗಳ, ಇಂಟೀರಿಯರ್‌ ಡಿಸೈನ್‌ಗಳು, ಫರ್ನಿಚರ್‌ಗಳು, ರೈತರ ಕೃಷಿ ಸಾಮಗ್ರಿಗಳು, ಕ್ರಷಿಂಗ್ ಯಂತ್ರಗಳು, ಗೃಹೋಪಯೋಗಿ ವಸ್ತುಗಳು ಮತ್ತು ವಾಹನಗಳು ಇತರೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಾಸನ ನಗರದಲ್ಲಿ ಯಶಸ್ವಿ ಎರಡನೇ ಬಾರಿಗೆ ಡಿಸೆಂಬರ್ ೨೪, ೨೫, ೨೬ರಂದು ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಬಿಲ್ಡ್ ಎಕ್ಸ್‌ಪೋ-೨೦೨೩ ಎಂಬ ಹೆಸರಿನಿಂದ ಕಟ್ಟಡ ನಿರ್ಮಾಣ ವಸ್ತುಗಳ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಎರಡನೇ ಬಾರಿಗೆ ಆಯೋಜಿಸಲಾಗಿರುವ ಈ ವಸ್ತು ಪ್ರದರ್ಶನದಲ್ಲಿ ಹಲವಾರು ಪ್ರತಿಷ್ಟಿತ ಕಂಪನಿಗಳು ಭಾಗವಹಿಸಿಸುತ್ತಿದೆ. ಪ್ರೈಮ್ ಸೇಫ್ಟಿ ಗ್ಲಾಸ್ (ಟಫನ್ ಗ್ಲಾಸ್), ಅಕಾರ್ಡ್, ಸೋನಾಟ, ಸೊಮಾನಿ, ಜಿಂದಾಲ್, ಟಾಟಾ ಸ್ಟೀಲ್, ಜಾನ್‌ಸನ್ ಟೈಲ್ಸ್, ಕೆನರಾ ಬ್ಯಾಂಕ್, ರಾಮೋ ಸಿಮಿಂಟ್, ಸೆಂಚುರಿ ಪ್ಲೇ, ಐಚರ್ ಟ್ರಾಕ್ಟರ್ಸ್, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆರಾ, ಸೆಂಟಿನಿ, ಸುದರ್ಶನ್ ಸೋಲಾರ್, ಬರ್ಜರ್ ಪೈಂಟ್ಸ್, ಬೆಸ್ಟ್ ಬಾಂಡ್, ಸಿಂಟೆಕ್ಸ್, ಸುಪ್ರಿಂ ಫರ್ನಿಚರ್, ನಿಪ್ಪಾನ್ ಪೈಂಟ್ಸ್, ಜುವಾರಿ ಸಿಮೆಂಟ್, ಜಾನ್ ಡೀರ್ ಟ್ರಾಕ್ಟರ್, ಮೀನಾಕ್ಷಿ ಸ್ಟೀಲ್ಸ್, ಸುಪ್ರೀಂ ಪ್ರಾಡಕ್ಟ್, ಅದ್ವತ್ ಹುಂಡೈ, ಸೆಂಟ್‌ಗೋಬಿನ್, ಸೋನಾಲಿಕ, ನಂದಗೋಕುಲ, ಸುಜುಕಿ, ಎಂಜಿ ಹೆಕ್ಟರ್, ಅಕ್ವಾ ಫ್ರೆಶ್, ನೆಕ್ಸಾ ಮಾರುತಿ, ಯುರೇಕಾ ಫೋರ್ಟ್ಸ್, ಕಾಜಿ ಇನ್ನೋವೇಶನ್ಸ್, ಮಹೇಂದ್ರ, ಹೋಂಡಾ ಕಾರ್ಸ್, ಅಮೋಫ್ ಚಾನೆಲ್, ಸೋಲಾರ್ ಕಂಪೆನಿಗಳು, ಸಿಸಿಟಿವಿ, ಹೋಂ ಥಿಯೇಟರ್, ರಿಮೋಟ್ ಕಂಟ್ರೋಲ್ ಗೇಟ್ಸ್, ಯುಪಿವಿಸಿ ವಿಂಡೋಸ್, ಇಂಟೀರಿಯರ್ಸ್ ಸಿಂಟೆಕ್ಸ್, ಎಂವೈಕೆ ಲ್ಯಾಟಿಕ್ರೇಟ್, ರಾಸ್ಕೋ, ಜುವಾರಿ ಸಿಮೆಂಟ್, ಎಲೆಕ್ಟಿಕಲ್ ಸ್ವಿಚ್‌ಗಳು ಹೀಗೆ ಹಲವಾರು ಪ್ರತಿಷ್ಟಿತ ಕಂಪೆನಿಗಳು ಭಾಗವಹಿಸುತ್ತಿರುವುದಾಗಿ ಹೇಳಿದರು. ಈ ಮೇಳದಲ್ಲಿ ೧೧೦ ಮಳಿಗೆಗಳು ಪ್ರದರ್ಶನಕ್ಕೆ ಲಭ್ಯವಿದೆ. ಈ ಮಳಿಗೆಗಳಲ್ಲಿ ಜನರ ಮನಸ್ಸಿಗೆ ಒಪ್ಪುವಂತಹ ಅವರ ಆಸಕ್ತಿಗೆ ತಕ್ಕಂತೆ ವಿವಿಧ ಮಾದರಿಯ ಗುಣಮಟ್ಟದ ಜನಸಾಮಾನ್ಯರಿಗೆ ಒಪ್ಪುವ ಅಡಿಗೆ ಮನೆ ಅಲಂಕಾರಿಕ ವಸ್ತುಗಳು ಹಾಗು ಎಲ್ಲಾ ರೀತಿಯ ಕುಟುಂಬ ವರ್ಗದವರಿಗೆ, ವಿದ್ಯಾರ್ಥಿಗಳಿಗೆ ಬಿಲ್ಡ್ ಎಕ್ಸ್ಪೋ-೨೦೨೩, ಹೊಸ ರೀತಿಯ, ಹೊಸ ವಿನ್ಯಾಸದ ಅನುಭವ ಯೋಜನೆಯ ಮಾಹಿತಿಯನ್ನು ಒಂದೇ ಸೂರಿನಡಿ ನೀಡುತ್ತದೆ. ಒಂದು ಗುಣಮಟ್ಟದ ನವೀನ ರೀತಿಯ ಸಾಮಗ್ರಿಗಳನ್ನು ದೊರಕಿಸುವಲ್ಲಿ ಈ ವಸ್ತು ಪ್ರದರ್ಶನ ಸಹಕಾರಿಯಾಗುತ್ತದೆ.

ನಗರದ ಎಂ.ಜಿ. ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯುವ ಬಿಲ್ಡ್ ಎಕ್ಸ್‌ಪೋ-೨೦೨೩ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬೇಕು. ವಸ್ತು ಪ್ರದರ್ಶನಕ್ಕೆ ಉಚಿತ ಪ್ರವೇಶವಿರುತ್ತದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕನ್ವಿನರ್ ಬಿ.ಎನ್. ದಿನೇಶ್‌ ಕುಮಾರ್‌, ಛೇರ್‍ಮನ್ ಡಿ.ಎಸ್. ಹರೀಶ್‌ ಕಾರ್ಯದರ್ಶಿ ಮಧುನಾರಾಯಣ್ ಹಾಗೂ ಕಮಿಟಿ ಸದಸ್ಯ ಈ. ಕೃಷ್ಣೇಗೌಡ, ಇತರರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ