ತಾತ್ವಿಕ ತಳಹಡಿ ಸಂಘಟನೆ ಕಟ್ಟಿ

KannadaprabhaNewsNetwork |  
Published : Apr 16, 2025, 12:31 AM IST
15ಕೆಪಿಎಲ್25 ನಗರದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟ ಜಿಲ್ಲಾ ಘಟಕ ಕೊಪ್ಪಳ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ | Kannada Prabha

ಸಾರಾಂಶ

ಸಂವಿಧಾನದ ಅಡಿ ಸೌಲಭ್ಯ, ವಸತಿನಿಲಯಗಳ ವ್ಯವಸ್ಥೆ ಇಲ್ಲದೇ ಹೋಗಿದ್ದರೆ ನಮ್ಮಂತಹವರಿಗೆ ಶಿಕ್ಷಣ ದೊರೆಯುತ್ತಿರಲಿಲ್ಲ. ಅಂಬೇಡ್ಕರ್‌ ದೂರದೃಷ್ಟಿಯಿಂದ ನಾವಿಂದು ಸೌಲಭ್ಯ ಅನುಭವಿಸುತ್ತಿದ್ದೇವೆ.

ಕೊಪ್ಪಳ:

ತಾತ್ವಿಕ ನಿಲುವುಗಳ ಮೂಲಕ ಸಂಘಟನೆ ಕಟ್ಟಬೇಕು. ಸಾಮಾಜಿಕ ಪರಿವರ್ತನೆಗಾಗಿ ಸೇವೆ ಮಾಡಬೇಕು. ಅಂಬೇಡ್ಕರ್ ಮಾರ್ಗದಲ್ಲಿ ನಡೆದರೆ ಮಾತ್ರ ಅವರ ಕನಸು ನನಸು ಮಾಡಲು ಸಾಧ್ಯ ಎಂದು ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಸಂಸ್ಥಾಪಕ ಸಿ.ಕೆ. ಮಹೇಶ ಹೇಳಿದರು.

ನಗರದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ರಾಜ್ಯ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಜಿಲ್ಲಾ ಘಟಕದಿಂದ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ತಾವು ಕೂಡ ಧರ್ಮ ಹಾಗೂ ಆಚರಣೆಯ ವಿಷಯದಲ್ಲಿ ಅರಿತು ನಡೆಯಬೇಕು. ತಾವು ಹುಟ್ಟಿ ಬೆಳೆದು ಬಂದ ದಾರಿ, ಸಂಸ್ಕೃತಿ ಮರೆತು ನಗರೀಕರಣಕ್ಕೊಳಗಾಗಿ, ಇಲ್ಲದ ಆಚರಣೆ ಮಾಡಬೇಡಿ. ಇತರರಿಗಿಂತಲೂ ನಿಮಗೆ ಸಾಕಷ್ಟು ಸವಾಲು, ಜವಾಬ್ದಾರಿ ಎದುರಾಗುತ್ತವೆ. ಆ ಎಲ್ಲ ಸವಾಲುಗಳಿಗೂ ನಿಮಗೆ ಉತ್ತರ ಸಂವಿಧಾನ ಹಾಗೂ ನಿಮ್ಮ ನಡೆ ಅಂಬೇಡ್ಕರ್ ದಾರಿಯಲ್ಲಿದ್ದಾಗ ಮಾತ್ರ ಸುಗಮವಾಗುತ್ತದೆ ಎಂದರು.

ಮುಖ್ಯ ಅಭಿಯಂತರ ಶಿವಾನಂದ ನಾಯ್ಕ ಮಾತನಾಡಿ, ಸಂವಿಧಾನದ ಅಡಿ ಸೌಲಭ್ಯ, ವಸತಿನಿಲಯಗಳ ವ್ಯವಸ್ಥೆ ಇಲ್ಲದೇ ಹೋಗಿದ್ದರೆ ನಮ್ಮಂತಹವರಿಗೆ ಶಿಕ್ಷಣ ದೊರೆಯುತ್ತಿರಲಿಲ್ಲ. ಅಂಬೇಡ್ಕರ್‌ ದೂರದೃಷ್ಟಿಯಿಂದ ನಾವಿಂದು ಸೌಲಭ್ಯ ಅನುಭವಿಸುತ್ತಿದ್ದೇವೆ. ಮೀಸಲಾತಿಯಲ್ಲಿ ನೌಕರಿ ಪಡೆದಿರುವವರು, ತಾವು ಹುಟ್ಟಿ ಬೆಳೆದ ಸಮಾಜ, ವರ್ಗಗಳಿಗೆ ಸಹಾಯ, ಸಹಕಾರ ನೀಡುವ ಮನೋಭಾವ ಹೊಂದಬೇಕು ಎಂದು ಹೇಳಿದರು.

ವೈದ್ಯ ಡಾ ಸರ್ವೇಶ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪಿ. ಹೇಮಂತರಾಜ, ಹನುಮಂತಪ್ಪ ನಾಯಕ, ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹನುಮೇಶ ಕಡೇಮನಿ, ಬಿಇಒ ಟಿ.ಎಸ್.ಶಂಕ್ರಯ್ಯ ಮಾತನಾಡಿದರು.

ಇದೇ ವೇಳೆ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜಿಲ್ಲಾ ಘಟಕಕ್ಕೆ ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಮ್ಯಾಗಳಮನಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಾಣೇಶ ಪೂಜಾರ, ಖಚಾಂಚಿಯಾಗಿ ರಾಮಣ್ಣ ಕಳ್ಳಿಮನಿ, ಸಹ ಕಾರ್ಯದರ್ಶಿಯಾಗಿ ಮಂಜುನಾಥ ಬುಲ್ಟಿ, ಹೇಮಣ್ಣ ಕವಲೂರ ಮಂಜುಳಾ ಶ್ಯಾವಿ, ಶಂಕರಪ್ಪ ಚಾಗಿ ಪದಾಧಿಕಾರಿಗಳಾಗಿ ಆಯ್ಕೆಯಾದರು.

ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಗಳ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಮಲ್ಲೇಶ ಹಾಗೂ ತಂಡದವರ ಕ್ರಾಂತಿಗೀತೆಯೊಂದಿಗೆ ಪ್ರಾರಂಭಿಸಿದರು, ಶಶಿಧರ ಸಂವಿಧಾನ ಪೀಠಿಕೆ ವಾಚಿಸಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ. ವೆಂಕಟೇಶ, ಸಹಾಯಕ ಕಾರ್ಯಪಾಲಕ ಅಭಿಯಂತರ ದೇವೆಂದ್ರಪ್ಪ ಇಟ್ಟಂಗಿ, ಗ್ರೇಡ್‌-೨ ತಹಸೀಲ್ದಾರ್‌ ಗವಿಸಿದ್ಧಪ್ಪ ಮಣ್ಣೂರ, ಶಿಕ್ಷಕ ಡಿ. ರಾಮಣ್ಣ ಆಲ್ಮರಸಿಕೇರಿ, ಆಸೀಫ್ ಅಲಿ, ಅಣ್ಣಪ್ಪ ಹಳ್ಳಿ, ಎಸ್ಸಿ-ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಹೊಳಿಬಸಯ್ಯ, ರಾಮಣ್ಣ ಶ್ಯಾವಿ, ಬಾಲನಾಗಮ್ಮ, ರೇಣುಕಾ, ಮಾರುತಿ ಮಂಗಳಾಪುರ, ಡಿ. ಸುಧಾಕರ, ಹನುಮಂತಪ್ಪ ಚಲವಾದಿ, ಹೇಮಣ್ಣ ಕವಲೂರ, ನಾಗರಾಜ ನಾಯಕ ಡಿ. ಡೊಳ್ಳಿನ, ಮಹಾವೀರ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...