ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ-ಬನಹಟ್ಟಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಗಣ್ಯರೊಡನೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಕೃತಿರಹಿತ ಬದುಕು ನಿಸ್ಸಾರ ಹಣ್ಣಿನಂತೆ. ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತಿವಂತಿಕೆ ಹೆಚ್ಚಿಸಲು ಶರಣ ಸಾಹಿತ್ಯದ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಎಲ್ಲರ ಜೀವನ ಬಂಗಾರವಾಗುವುದು. ಬಣಜಿಗ ಸಂಸ್ಕೃತಿ ಶರಣ ಸಂಸ್ಕೃತಿಯ ಜೀವಾಳವಾಗಿದ್ದು, ಬಣಜಿಗರು ಎಲ್ಲರೊಡನೆ ಸೌಹಾರ್ದಯುತ ಸಂಬಂಧಗಳನ್ನು ಹೊಂದಿದ್ದು, ವಣಿಕ ವೃತ್ತಿಯೊಡನೆ ಹಣಗಳಿಕೆಯಷ್ಟೇ ಅಲ್ಲದೇ ಎಲ್ಲರಿಗೂ ಸಹಾಯಹಸ್ತ ನೀಡುವ ಸಮಾಜವಾಗಿದೆ. ಸಹಕಾರ ಮತ್ತು ಸೌಹಾರ್ದತೆ ಬಣಜಿಗರಿಗೆ ರಕ್ತಗತ ಗುಣವಾಗಿದ್ದು, ನಮ್ಮ ವಣಿಕ ವೃತ್ತಿಯತ್ತ ಯುವಕರನ್ನು ಆಕರ್ಷಿಸುವತ್ತ ನಮ್ಮ ಕುಲದ ವೃತ್ತಿ ನಾಶವಾಗದಂತೆ ಹಿರಿಯರು ನೋಡಿಕೊಳ್ಳಬೇಕಿದೆ ಎಂದರು.
ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಮಾತನಾಡಿ, ನಮ್ಮ ಸಮಾಜದ ಕುಲಕಸಬು ಇಂದು ಬೇರೆ ರಾಜ್ಯಗಳ ವಲಸಿಗರ ಕೈವಶವಾಗುತ್ತಿದೆ. ನಮ್ಮ ಸಂತಾನಗಳು ಬೇರೆಯವರೆದುರು ಕೈಚಾಚಿ ನೌಕರಿಯತ್ತ ಆಕರ್ಷಿತರಾಗುತ್ತಿದ್ದು, ಸ್ವಕುಲದ ಉದ್ಯೋಗ ಪತನದ ಅಂಚಿಗೆ ತಲುಪಿದ್ದು, ಇದನ್ನು ತಡೆಯಲು ನಾವು ನಮ್ಮ ಮಕ್ಕಳಿಗೆ ವ್ಯಾಪಾರಿ ಮನೋಭಾವನೆ ಬಾಲ್ಯದಲ್ಲೇ ಬೆಳೆಸಬೇಕೆಂದರು.ಗದಗ ಜಿಲ್ಲೆಯ ಪ್ರಧಾನ ಹಿರಿಯ ನ್ಯಾಯಾಧೀಶ ಜಿ.ಆರ್.ಶೆಟ್ಟರ ಮಾತನಾಡಿ, ಬಣಜಿಗರು ಸ್ವಾಭಿಮಾನಿ ಜನಾಂಗವಾಗಿದ್ದು, ಬಸವಾನುಯಾಯಿ ಸಮುದಾಯ ಇಂದು ಆಧುನಿಕತೆಯ ಸ್ಪರ್ಶದಿಂದ ಮಕ್ಕಳಿಗೆ ಪಾರಂಪರಿಕ ವಿಧಿ-ವಿಧಾನಗಳನ್ನು ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ಕಡ್ಡಾಯಗೊಳಿಸದೇ ಇರುವುದರಿಂದ ಯುವ ಜನತೆ ನಮ್ಮತನದಿಂದ ದೂರವಾಗುತ್ತಿದ್ದಾರೆಂದು ವಿಷಾದಿಸಿದರು.
ವಿಶೇಷ ಸಾಧಕರಿಗೆ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ, ವೈದ್ಯಕೀಯ ಸೇರಿ ವಿವಿಧ ರಂಗಗಳಲ್ಲಿ ಸಾಧಿಸಿದವರನ್ನು ಸನ್ಮಾನಿಸಲಾಯಿತು.
ಎಂ.ಎಸ್.ಗಡನ್ನವರ ಪ್ರಾರ್ಥಿಸಿದರು. ವಿಜಯಕುಮಾರ ಹಲಕುರ್ಕಿ ಸ್ವಾಗತಿಸಿದರು. ಗಿರೀಶ ಮುತ್ತೂರ ಪ್ರಾಸ್ತಾವಿಕ ಮಾತುಗಳಾಡಿದರು. ಉಮೆಶ ಹನಗಂಡಿ ಅತಿಥಿಗಳನ್ನು ಸನ್ಮಾನಿಸಿದರು. ರವೀಂದ್ರ ಅಷ್ಟಗಿ, ವಿಜಯಕುಮಾರ ಹಲಕುರ್ಕಿ ನಿರೂಪಿಸಿದರು. ಈರಣ್ಣಾ ಜಿಗಜಿನ್ನಿ ವಂದಿಸಿದರು.