ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಆನೆಕೆರೆಯ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ಶ್ರೀ ಲಕ್ಷ್ಮೀದೇವಿಯವರ ನೂತನ ದೇವಾಲಯ ಮತ್ತು ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಮಡಿವಾಳ ಸಮುದಾಯ ಸಣ್ಣ ಸಮುದಾಯವಾದರೂ ಸಹ ಇಡೀ ಸಮಾಜಕ್ಕೆ ಬೇಕಾದ ಸಮಾಜವಾಗಿದೆ. ದೇಹವನ್ನು, ಬಟ್ಟೆಯನ್ನು ಸ್ಚಚ್ಚಗೊಳಿಸುವ ಕಾಯಕ ಮಾಡುವ ಈ ಸಮಾಜ ಯಾರಿಗೆ ತಾನೇ ಬೇಡ ಹೇಳಿ. ಸಮಾಜದ ಪ್ರತಿಯೊಂದು ಕಾರ್ಯದಲ್ಲೂ ಮಡಿವಾಳ ಸಮುದಾಯ ತನ್ನ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಸಮಾಜದಲ್ಲಿ ಹಾಸುಹೊಕ್ಕಾಗಿದೆ ಎಂದು ಅವರು ಹೇಳಿದರು. ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಮಡಿವಾಳ ಸಮಾಜ ರಾಜಕೀಯವಾಗಿ ಶಕ್ತಿಯುತವಾಗಬೇಕು. ಎಲ್ಲಾ ಸಮುದಾಯದ ಏಳಿಗೆಗೆ ಶ್ರಮಿಸುವ ಮಡಿವಾಳ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರು.ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ ಆತ್ಮಕ್ಕೆ ಆದಿ ಮತ್ತು ಅಂತ್ಯವಿಲ್ಲ. ದೇಹ ಇರುವ ತನಕ ತಮ್ಮ ಕೈಲಾದಷ್ಟು ಸೇವೆಯನ್ನು ಮಾಡಿದಲ್ಲಿ ಪರಮಾತ್ಮ ಒಲಿಯುವನು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಅಧ್ಯಕ್ಷ ರಘು , ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರರಾದ ಎಚ್.ಡಾ.ರವಿಕುಮಾರ್, ಮುಖಂಡರಾದ ಮುನಿಯೂರು ಎಂ.ಡಿ.ಮೂರ್ತಿ, ಕೆಎಂಎಫ್ ನಿರ್ದೇಶಕರಾದ ಸಿ.ವಿ.ಮಹಲಿಂಗಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನಾಧಿಕಾರಿ ಶಾಲಿನಿ, ಬೆಸ್ಕಾಂನ ಮಾಜಿ ನಿರ್ದೇಶಕ ಕಾಂಗ್ರೆಸ್ ಮುಖಂಡ ವಸಂತಕುಮಾರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.