ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರು ಸಮೃದ್ಧಿಯಿಂದ ಬೆಳೆಗಳನ್ನು ಬೆಳೆಯಲಿ ಆ ದೇವ್ರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮುಳಬಾಗಿಲುರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರು ಸಮೃದ್ಧಿಯಿಂದ ಬೆಳೆಗಳನ್ನು ಬೆಳೆಯಲಿ ಆ ದೇವ್ರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ತಾಲೂಕಿನ ತಾಯಲೂರು ರಸ್ತೆಯ ಖಾದ್ರಿಪುರ ವೃತ್ತದ ಶ್ರೀ ಶಾಂತಿಧಾಮ ಕ್ಷೇತ್ರ ಶ್ರೀ ಶನೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಪ್ರಸನ್ನ ಸೋಮೇಶ್ವರ ಸ್ವಾಮಿ ಶ್ರೀ ಅಭಯ ಆಂಜನೇಯ ಸ್ವಾಮಿ ನೂತನ ಬಿಂಬ ಪ್ರತಿಷ್ಠಾಪನ ಮತ್ತು ಕುಂಭಾಭಿಷೇಕ ಮಹೋತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ದೇವಸ್ಥಾನದ ಅರ್ಚಕರು ಮತ್ತು ದಾನಿಗಳು ನೂತನ ದೇವಸ್ಥಾನಗಳನ್ನು ನಿರ್ಮಿಸಿ ಅತ್ಯುತ್ತಮ ಕಾರ್ಯವನ್ನು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ನಿರ್ಮಾಣ ಹೆಚ್ಚಾಗುತ್ತಿದೆ. ಯಾವುದೇ ಚುನಾವಣೆಗಳು ಬಂದರೆ ಕರ್ನಾಟಕ ರಾಜ್ಯಕ್ಕೆ ಮೂಡಲ ದಿಕ್ಕಿನಲ್ಲಿರುವ ತಾಲೂಕಿನ ಕೂಡುಮಲೆ ಶ್ರೀ ವಿನಾಯಕ ನಗರದ ಅರ್ಜುನ ಪ್ರತಿಷ್ಠಾಪಿತ ಶ್ರೀ ಆಂಜನೇಯ ಸ್ವಾಮಿ ಶ್ರೀ ಪ್ರಸನ್ನ ಸೋಮೇಶ್ವರ ಸ್ವಾಮಿ ದೇವಾಲಯ ಮತ್ತು ಬಾಬಾ ಹೈದರ ವಲ್ಲಿ ದರ್ಗಾದಲ್ಲಿ ಪೂಜೆಗಳನ್ನು ಮಾಡಿ ಚುನಾವಣಾ ಪ್ರಚಾರ ಕಾರ್ಯ ಇಲ್ಲಿಂದಲೇ ಪ್ರಾರಂಭಿಸುವುದು ಹಲವಾರು ವರ್ಷಗಳಿಂದ ರೂಢಿಯಲ್ಲಿದೆ ಎಂದು ಹೇಳಿದರು.
ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಂಸಿ ನೀಲಕಂಠೇಗೌಡ ಇತ್ತೀಚೆಗೆ ನಿಧನ ಹೊಂದಿದ್ದು ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಖಾಲಿ ಇರುವುದರಿಂದ ನೂತನ ಅಧ್ಯಕ್ಷರ ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿಳಂಬ ಮಾಡುತ್ತಿದೆ ಕಾರಣ ಏನು ಎಂಬ ಪ್ರಶ್ನೆಗೆ ಈ ಸಂಬಂಧ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬಳಿ ಚರ್ಚಿಸಿ ಶೀಘ್ರದಲ್ಲೇ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡೋದಾಗಿ ಉತ್ತರಿಸಿದರು.ನೂತನ ದೇವಾಲಯ ನಿರ್ಮಿಸಿದ ದಾನಿಗಳಾದ ಬೆಂಗಳೂರಿನ ಸಿ.ವಿ.ರಕ್ಷಾ, ಕೆ.ಎಲ್.ಚೇತನ್, ಪಟೇಲ್ ಯೋಗ್ನ ಪಟೇಲ್, ದೀಶನ್ ಪಟೇಲ್ ತಾಲೂಕಿನ ಮೇಲಾಗಾಣಿಯ ಎಂ.ಸಿ.ಸರ್ವಜ್ಞ ಗೌಡ, ಎಂ.ಸಿ.ಭಾರ್ಗವರಾಂ, ಎಂ.ಸಿ.ಫಲ್ಗುಣರನ್ನು ಸಚಿವರು ಸನ್ಮಾನಿಸಿದರು.ಮುಖಂಡರಾದ ಸಿನಿಗೆನಹಳ್ಳಿ ಜಿ.ಆನಂದ ರೆಡ್ಡಿ, ಊರುಬಾಗಿಲು ಶ್ರೀನಿವಾಸ್, ಪ್ರಸಾದ್ ಬಾಬು, ಜಯದೇವ್, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ವಿ.ರಾಮಪ್ರಸಾದ್, ಕಿಸಾನ್ ಖೇತ್ ಘಟಕ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ಸುಭಾಷ್, ಚಂದ್ರ ಗೌಡ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ವಿ.ಮಾರಪ್ಪ, ಕೊಂಡೇನಹಳ್ಳಿ ವೆಂಕಟರಾಮ್ ರೆಡ್ಡಿ, ಕಗ್ಗಿನಹಳ್ಳಿ ಶ್ರೀನಿವಾಸ್, ಪಿ.ರಾಮಚಂದ್ರಯ್ಯ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಂಡಿಕಲ್ಲು ಮಂಜುನಾಥ್, ಹೈದಲಪುರ ಅಶೋಕ್, ಅರ್ಚಕರಾದ ಪಿ.ಸುದರ್ಶನ್ ದೀಕ್ಷಿತ್, ಮಂಜುನಾಥ್ ಆಚಾರ್, ಭರತ್, ಅರವಿಂದ್ ದೀಕ್ಷಿತ್, ಕಾರ್ತಿಕ್ ಭಟ್, ಉದಯ್, ಕಾರ್ತಿಕ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.