ಕಳೆದ ವರ್ಷ ಜೀರ್ಣಾವಸ್ಥೆಯಲ್ಲಿರುವ ಈ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಈ ದುರಂತದ ಬಳಿಕ ಪುರಸಭೆ ವತಿಯಿಂದ ಮೃತರ ಕುಟುಂಬಗಳಿಗೆ ತಲಾ 50 ಸಾವಿರ ಹಾಗೂ ಗಾಯಾಳುಗಳಿಗೆ 25 ಸಾವಿರ ನೆರವು ನೀಡಲಾಗಿತ್ತು. ಆದರೆ ಕಟ್ಟಡದ ಮಾಲೀಕರು ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಪರಿಹಾರ ನೀಡಿಲ್ಲ. ಈಗಲೂ ರಸ್ತೆ ಬದಿ ವ್ಯಾಪಾರ ನಂಬಿಕೊಂಡಿರುವ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುತ್ತಿವೆ ಎಂದು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಸತ್ಯನಾರಾಯಣ ಗೌಡ ಅವರಿಗೆ ಸೇರಿದ ಹಳೆಯ ವಾಣಿಜ್ಯ ಮಳಿಗೆ ಕಟ್ಟಡವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಪುರಸಭೆ ಅಧ್ಯಕ್ಷ ಅಕ್ರಂ ಪಾಷಾ, ಸದಸ್ಯ ಎ ಆರ್ ಅಶೋಕ್, ಜಗದೀಶ್ ಆಕ್ಷೇಪಿಸಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿ ಪುರಸಭೆಯ ಕೆಲ ಅಧಿಕಾರಿಗಳು ಕಟ್ಟಡದ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.ಸತ್ಯನಾರಾಯಣ ಗೌಡ ಅವರಿಗೆ ಸೇರಿದ ಹಳೆಯ ವಾಣಿಜ್ಯ ಮಳಿಗೆ ಹಾಗೂ ಜೀರ್ಣಾವಸ್ಥೆಯಲ್ಲಿರುವ ಸಿನಿಮಾ ಮಂದಿರ ಕಟ್ಟಡವನ್ನು ತೆರವುಗೊಳಿಸಲು ಮಾಲೀಕರು ಮುಂದಾಗಿರುವುದಕ್ಕೆ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎ.ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಳೆದ ವರ್ಷ ಜೀರ್ಣಾವಸ್ಥೆಯಲ್ಲಿರುವ ಈ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಈ ದುರಂತದ ಬಳಿಕ ಪುರಸಭೆ ವತಿಯಿಂದ ಮೃತರ ಕುಟುಂಬಗಳಿಗೆ ತಲಾ 50 ಸಾವಿರ ಹಾಗೂ ಗಾಯಾಳುಗಳಿಗೆ 25 ಸಾವಿರ ನೆರವು ನೀಡಲಾಗಿತ್ತು. ಆದರೆ ಕಟ್ಟಡದ ಮಾಲೀಕರು ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಪರಿಹಾರ ನೀಡಿಲ್ಲ. ಈಗಲೂ ರಸ್ತೆ ಬದಿ ವ್ಯಾಪಾರ ನಂಬಿಕೊಂಡಿರುವ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುತ್ತಿವೆ ಎಂದು ಆರೋಪಿಸಿದರು.ಪುರಸಭೆಗೆ ಸುಮಾರು 46 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ಕಟ್ಟಡ ತೆರವಿಗೆ ಅನುಮತಿ ನೀಡಿರುವುದು ಪ್ರಶ್ನಾರ್ಹವಾಗಿದ್ದು, ತೆರವು ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಪುರಸಭೆಯ ಮುಖ್ಯ ಅಧಿಕಾರಿ ಹಾಗೂ ಇತರರು ಶಾಮೀಲಾಗಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಅಕ್ರಮ್ ಪಾಷಾ, ಜಿಲ್ಲಾಧಿಕಾರಿಗಳ ಆದೇಶದಂತೆ ತೆರಿಗೆ ಪಾವತಿಸಿ, ಸ್ಥಳ ಪರಿಶೀಲನೆಯ ಬಳಿಕ ಕಟ್ಟಡ ತೆರವುಗೊಳಿಸಬಹುದಾಗಿದೆ . ಆದರೆ ಪುರಸಭೆಗೆ ಬಾಕಿ ಇರುವ ಸುಮಾರು ₹46 ಲಕ್ಷ ತೆರಿಗೆಯನ್ನು ಪಾವತಿಸಬೇಕು ಹಾಗೂ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಿದ ಬಳಿಕವೇ ಪುರಸಭೆ ಸಂಪೂರ್ಣ ಸಹಕಾರ ನೀಡಲಿದೆ. ಅಲ್ಲಿವರೆಗೆ ಈಗಿರುವ ಜಾಗದಲ್ಲಿ ಅಕ್ರಮ ಪ್ರವೇಶ ಮಾಡದಂತೆ ತಾತ್ಕಾಲಿಕ ತಡಗೋಡೆ ನಿರ್ಮಾಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ.ಸಿ. ಜಗದೀಶ್, ಕಟ್ಟಡ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಾದ ಜಯಮ್ಮ, ಸವಿತಾ, ಸಾಯಿರಾ ಬಾನು ಸೇರಿದಂತೆ ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.