ಚಿಕ್ಕಮಾಕೊಪ್ಪ ಹಬ್ಬದಲ್ಲಿ ಓಡಿ ಮನರಂಜಿಸಿದ ಹೋರಿಗಳು

KannadaprabhaNewsNetwork |  
Published : Feb 07, 2024, 01:49 AM IST
ಫೋಟೊ:೦೫ಕೆಪಿಸೊರಬ-೦೩ : ಸೊರಬ ತಾಲೂಕಿನ ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಹಮ್ಕಿಕೊಂಡಿದ್ದ ಹೋರಿ ಬೆದರಿಸುವ ಹಬ್ಬದಲ್ಲಿ ಕೈಗೆ ಸಿಗದೇ ಮಿಂಚಿನAತೆ ಓಡಿ ನೋಡುಗರ ಕಣ್ಮನ ಸೆಳೆದ ದೊಡ್ಮನೆ ಚಿನ್ನಾ ಹೆಸರಿನ ಹೋರಿ. | Kannada Prabha

ಸಾರಾಂಶ

ಗ್ರಾಮೀಣ ಭಾಗದ ರೈತರ ಅಚ್ಚುಮೆಚ್ಚಿನ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ಸೋಮವಾರ ಸೊರಬ ತಾಲೂಕಿನ ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗೆಳೆಯರ ಬಳಗ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸುಮಾರು 150ಕ್ಕೂ ಅಧಿಕ ಹೋರಿಗಳು ಆಗಮಿಸಿದ್ದವು. ಅಖಾಡದಲ್ಲಿ ಹೋರಿಗಳ ಮಿಂಚಿನ ಓಟ ನೋಡುಗರ ಗಮನ ಸೆಳೆಯಿತು. ಹೋರಿಹಬ್ಬ ನೋಡಲು ನೆರೆಯ ಗ್ರಾಮಗಳು ಸೇರಿದಂತೆ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ ಸೊರಬ

ಗ್ರಾಮೀಣ ಭಾಗದ ರೈತರ ಅಚ್ಚುಮೆಚ್ಚಿನ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ಸೋಮವಾರ ತಾಲೂಕಿನ ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗೆಳೆಯರ ಬಳಗ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸುಮಾರು 150ಕ್ಕೂ ಅಧಿಕ ಹೋರಿಗಳು ಆಗಮಿಸಿದ್ದವು. ಅಖಾಡದಲ್ಲಿ ಹೋರಿಗಳ ಮಿಂಚಿನ ಓಟ ನೋಡುಗರ ಗಮನ ಸೆಳೆಯಿತು. ಹೋರಿಹಬ್ಬ ನೋಡಲು ನೆರೆಯ ಗ್ರಾಮಗಳು ಸೇರಿದಂತೆ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು.

ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ರೋಮಾಂಚನಗೊಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿಹಾರ ಕಟ್ಟಿ ಶೃಂಗರಿಸಿದ್ದರು. ಪೀಪಿ ಹೋರಿಗಳು ಅಖಾಡದಲ್ಲಿ ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು.

ಚಂದ್ರಗುತ್ತಿಯ ಚಕ್ರವರ್ತಿ, ಯಡಗೊಪ್ಪದ ಬಡವ ಸಾಕಿದ ಬಹದ್ದೂರ್, ಮದರವಳ್ಳಿ ಡೇಂಜರ್ ಮುತ್ತು, ಚಂದ್ರಗುತ್ತಿ ಡಾನ್, ಬಳ್ಳಿಬೈಲು ಅಗ್ನಿ, ಭದ್ರಾಪುರ ವಾಲ್ಮೀಕಿ ಹುಲಿ, ಭದ್ರಾಪುರದ ಬ್ರಹ್ಮ, ಚಂದ್ರಗುತ್ತಿ ಅಧೀರ, ಮಗರವಳ್ಳಿ ಅಶ್ವಮೇಧ, ಬನವಾಸಿ ವರದಾ ಎಕ್ಸ್‌ಪ್ರೆಸ್‌, ಅಂಕರವಳ್ಳಿ ಬಸವೇಶ್ವರ, ಗುಡವಿ ಜಮೀನ್ದಾರ, ತರಲಘಟ್ಟ ವಾಯುಪುತ್ರ, ಓಟೂರು ಆರ್ಮಿ ಹುಲಿ, ಮಾರಿಗುಡಿ ಕಾ ರಾಜ, ಗ್ರಾಮದ ಹೋರಿಗಳಾದ ದೊಡ್ಮನೆ ಚಿನ್ನಾ, ಸೀತಾ ರಾಮೇಶ್ವರ, ಶ್ರೀ ನಂದಿ, ಜೈ ಹನುಮ, ವಾಯುಪುತ್ರ, ವಿವಿಧ ಹೆಸರಿನ ಹೋರಿಗಳು ಅಖಾಡದಲ್ಲಿ ಓಡಿ ಮನರಂಜಿಸಿದವು.

ಬಳಗ ವತಿಯಿಂದ ಅಖಾಡದ ಎರಡು ಬದಿಯಲ್ಲಿ ಸುರಕ್ಷತಾ ಬೇಲಿ ನಿರ್ಮಿಸಲಾಗಿತ್ತು. ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಪೈಲ್ವಾನರನ್ನು ಗುರುತಿಸಿ, ಗೌರವಿಸಲಾಯಿತು.

- - - -05ಕೆಪಿಸೊರಬ03:

ಸೊರಬ ತಾಲೂಕಿನ ಚಿಕ್ಕಮಾಕೊಪ್ಪದ ಹೋರಿ ಬೆದರಿಸುವ ಹಬ್ಬದಲ್ಲಿ ಮಿಂಚಿನಂತೆ ಓಡುತ್ತಿರುವ ದೊಡ್ಮನೆ ಚಿನ್ನಾ ಹೆಸರಿನ ಹೋರಿ.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ