ದೇವರಹಿಪ್ಪರಗಿ: ಮಾನವ ದೈಹಿಕವಾಗಿ ಸಬಲನಾಗಿ ಎಲ್ಲ ರೀತಿಯಲ್ಲಿ ಮಾನಸಿಕ ಸಾಮರ್ಥ್ಯ ಹೊಂದಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಆದರೆ, ಪ್ರಾಣಿಗಳು ಮಾತ್ರ ತಮ್ಮ ಶಕ್ತಿ ಸಾಮರ್ಥ್ಯ ತೋರುವಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಇದೀಗ ತಾಲ್ಲೂಕಿನ ಕೋರವಾರ ಗ್ರಾಮದ ಅಶೋಕ ನಾಯಕಲ್ ಎಂಬುವರು ಎತ್ತುಗಳು 8 ಗಂಟೆ ಅವಧಿಯಲ್ಲಿ 20 ಎಕರೆ ಜಮೀನನ್ನು ಕುಂಟೆ ಹೊಡೆದು ಸೈ ಎನಿಸಿಕೊಂಡಿವೆ.
ದೇವರಹಿಪ್ಪರಗಿ: ಮಾನವ ದೈಹಿಕವಾಗಿ ಸಬಲನಾಗಿ ಎಲ್ಲ ರೀತಿಯಲ್ಲಿ ಮಾನಸಿಕ ಸಾಮರ್ಥ್ಯ ಹೊಂದಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಆದರೆ, ಪ್ರಾಣಿಗಳು ಮಾತ್ರ ತಮ್ಮ ಶಕ್ತಿ ಸಾಮರ್ಥ್ಯ ತೋರುವಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಇದೀಗ ತಾಲ್ಲೂಕಿನ ಕೋರವಾರ ಗ್ರಾಮದ ಅಶೋಕ ನಾಯಕಲ್ ಎಂಬುವರು ಎತ್ತುಗಳು 8 ಗಂಟೆ ಅವಧಿಯಲ್ಲಿ 20 ಎಕರೆ ಜಮೀನನ್ನು ಕುಂಟೆ ಹೊಡೆದು ಸೈ ಎಣಿಸಿಕೊಂಡಿವೆ. ಶುಕ್ರವಾರ ತಮ್ಮ ಜೋಡಿ ಎತ್ತುಗಳು 20 ಎಕರೆ ಜಮೀನಿನಲ್ಲಿ ನಿರಂತರವಾಗಿ 8 ಗಂಟೆ ಕುಂಟೆ ಹೊಡೆದಿವೆ.
ಅಶೋಕ ನಾಯಕಲ್ ತಮ್ಮ ಹೊಲದಲ್ಲಿ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 3 ಗಂಟೆವರೆಗೆ ನಿರಂತರ ಕುಂಟೆಗಳನ್ನು ಹೆಗಲೇರಿಸಿಕೊಂಡು 20 ಎಕರೆ ಭೂಮಿ ಕುಂಟೆ ಹೊಡೆದದ್ದು ತಾಲ್ಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಜೋಡಿ ಎತ್ತುಗಳು ದಿನಕ್ಕೆ ಐದು ಎಕರೆ ಕುಂಟೆ ಹೊಡೆಯುತ್ತವೆ. ಹೆಚ್ಚೆಂದರೆ 8 ರಿಂದ 10 ಎಕರೆ ಎಡೆ ಹೊಡೆಯಬಹುದು. ಆದರೆ ಈ ಎತ್ತುಗಳು 20 ಎಕರೆ ಜಮೀನಿನಲ್ಲಿ ಕುಂಟೆ ಹೊಡೆದು ಭಲೇ ಜೋಡಿ ಎನಿಸಿಕೊಂಡಿವೆ. ಈ ಎತ್ತುಗಳ ಸಾಧನೆ ಕಂಡು ಗ್ರಾಮಸ್ಥರು ಆಶ್ಚರ್ಯಪಟ್ಟಿದ್ದು, ಎತ್ತುಗಳಿಗೆ ಗುಲಾಲ್ ಎರಚಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.