ಬಜೆಟ್‌ನಲ್ಲಿ ಮಾಲೂರಿಗೆ ಬಂಪರ್‌: ವಿಶ್ವಾಸ

KannadaprabhaNewsNetwork | Published : Mar 7, 2025 12:47 AM

ಸಾರಾಂಶ

ತಾಲೂಕಿನಲ್ಲಿ ಹಾದುಹೋಗುವ ಕೈಗಾರಿಕಾ ಕಾರಿಡಾರ್‌ ಗಾಗಿ ೩೬೦೦ ಕೋಟಿ ರು.ಗಳ ಯೋಜನೆ ಘೋಷಿಸಿದ್ದರು. ಆ ಯೋಜನೆಯಲ್ಲಿ ತಾಲೂಕಿನಲ್ಲಿ ಎರಡು ಪ್ಯಾಕೇಜ್‌ ನಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದ್ದು,ಒಟ್ಟು ೨೧೫೦ ಕೋಟಿ ಇದಕ್ಕಾಗಿ ಸರ್ಕಾರವು ಮೀಸಲಿಟ್ಟಿದೆ. ೪೦ ಕೋಟಿ ವೆಚ್ಚದಲ್ಲಿ ನೂತನ ಸುಸಜ್ಜಿತ ಆಸ್ವತ್ರೆ ನಿರ್ಮಾಣದ ಘೋಷಣೆ ಆಗಬಹುದು.

ಕನ್ನಡ ಪ್ರಭವಾರ್ತೆ ಮಾಲೂರು

ಬಡವರ ಶೋಷಿತರ ಆಶಾ ಕಿರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ಬಾರಿಯೂ ಜನಪ್ರಿಯ ಬಜೆಟ್‌ ನೀಡಲಿದ್ದು, ನಮ್ಮ ಜಿಲ್ಲೆಗೆ ಅದರಲ್ಲೂ ಮಾಲೂರು ಕ್ಷೇತ್ರಕ್ಕೆ ಬಂಪರ್‌ ಯೋಜನೆಗಳ ನೀಡುವ ಭರವಸೆ ಇದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಇಲ್ಲಿನ ಮಿನಿ ವಿಧಾನ ಸೌಧ ಮುಂಭಾಗ ಅಧಿವೇಶನಕ್ಕೆ ತೆರಳುವ ಮುನ್ನ ಪತ್ರಕರ್ತರೊಡನೆ ಮಾತನಾಡುತ್ತ ಕಳೆದ ಬಜೆಟ್‌ ನಲ್ಲಿ ತಾಲೂಕಿನಲ್ಲಿ ಹಾದುಹೋಗುವ ಕೈಗಾರಿಕಾ ಕಾರಿಡಾರ್‌ ಗಾಗಿ ೩೬೦೦ ಕೋಟಿ ರು.ಗಳ ಯೋಜನೆ ಘೋಷಿಸಿದ್ದರು. ಆ ಯೋಜನೆಯಲ್ಲಿ ತಾಲೂಕಿನಲ್ಲಿ ಎರಡು ಪ್ಯಾಕೇಜ್‌ ನಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದ್ದು,ಒಟ್ಟು ೨೧೫೦ ಕೋಟಿ ಇದಕ್ಕಾಗಿ ಸರ್ಕಾರವು ಮೀಸಲಿಟ್ಟಿದೆ ಎಂದರು

ಸುಸಜ್ಜಿತ ಆಸ್ಪತ್ರೆ ನಿರ್ಮಾಣ

ಒಂದನೇ ಪ್ಯಾಕೇಜ್‌ ನರಸಾಪುರದಿಂದ ತಮಿಳುನಾಡಿನ ಗಡಿಭಾಗವಾದ ಸಂಪಂಗೆರೆ ವರೆಗಿನ ಯೋಜನೆಯಾಗಿದ್ದು,ಇದರಲ್ಲಿ ಪಟ್ಟಣದಲ್ಲಿ ೩.೫ ಕಿ.ಮೀ. ಉದ್ದದ ಮೇಲ್‌ಸೇತುವೆ ಸೇರಿದಂತೆ ನಾಲ್ಕು ಪಥದ ರಸ್ತೆ ನಿರ್ಮಾಣವಾಗಲಿದೆ.ಮತ್ತೋಂದು ಪ್ಯಾಕೇಜ್‌ ನಲ್ಲಿ ಮಾಲೂರಿನಿಂದ ಹೊಸಕೋಟೆವರೆಗೆ ವೈಟ್‌ ಟ್ಯಾಪ್‌ ರಸ್ತೆ ಸೇರಿದಂತೆ ವಶ ಪಡಿಸಿಕೊಳ್ಳುವ ಜಮೀನಿಗೆ ಪರಿಹಾರ ಧನ ಸಹ ಸೇರಿದೆ. ಈ ಬಾರಿಯು ಸಹ ತಾಲೂಕಿಗೆ ಬಂಪರ್‌ ಯೋಜನೆ ನೀಡುವ ಭರವಸೇ ಸಿಕ್ಕಿದ್ದು,೪೦ ಕೋಟಿ ವೆಚ್ಚದಲ್ಲಿ ನೂತನ ಸುಸಜ್ಜಿತ ಆಸ್ವತ್ರೆ ನಿರ್ಮಾಣದ ಘೋಷಣೆ ಆಗಬಹುದು ಎಂದರು.ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದ ವಿರೋಧಿಗಳು ಸರ್ಕಾರದಿಂದ ಘೋಷಣೆಯಾಗಿರುವ ಯೋಜನೆಗಳೇ ಬೋಗಸ್‌ ಎನ್ನುತ್ತಿದ್ದಾರೆ.ಆದರೆ ಈಗಾಗಲೇ ೩೮೦೦ ಕೋಟಿ ಯೋಜನೆಯ ಟೆಂಡರ್‌ ಪ್ರಕ್ರೀಯೆ ಪ್ರಾರಂಭವಾಗಿ ವಾರ ಆಗಿದ್ದು,ಇನ್ನೊಂದು ತಿಂಗಳಲ್ಲಿ ಯಾವ ಏಜೆನ್ಸಿಗೆ ಆಗಿದೆ ಎಂಬುಂದು ತಿಳಿಯುತ್ತದೆ. ಆಗಲಾದರೂ ವಿರೋಧಿಗಳ ಬಾಯಿಗೆ ಬೀಗ ಬೀಳಬಹುದೆನ್ನೂ ಎನ್ನಿಸುತ್ತದೆ ಎಂದರು.

ನೂತನ ಬಸ್‌ ನಿಲ್ದಾಣ ನಿರ್ಮಾಣ

ಕಳೆದ ಒಂದು ವರ್ಷದಲ್ಲಿ ಸರ್ಕಾರ ಹಾಗೂ ಸರ್ಕಾರದ ಹಿಡಿತದಲ್ಲಿರುವ ಇತರೆ ಸಂಪನ್ಮೂಲಗಳನ್ನು ಬಳಸಿಕೊಂಡು ಪಟ್ಟಣದ ದೊಡ್ಡಕೆರೆಯನ್ನು ೩೫ ಕೋಟಿ ರು.ಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು,೨೧ ಕೋಟಿ ರು.ಗಳಲ್ಲಿ ನೂತನ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದರು.ಈ ಎಲ್ಲಾ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ ಚಾಲನೆ,ಉದ್ಗಾಟನೆ ಮಾಡಸಲಿದ್ದೇನೆ ಎಂದ ಶಾಸಕರು ಇನ್ನೊಂದು ವರ್ಷದಲ್ಲಿ ತಾಲೂಕು ಬದಲಾವಣೆಯಾಗುವಂತರ ಶಾಶ್ವತ ಅಭಿವೃದ್ಧಿ ಕಾಮಗಾರಿಗಳು ಕಣ್ಣಿಗೆ ಕಾಣಲಿದೆ ಎಂದರು.ತಹಸೀಲ್ದಾರ್‌ ರೂಪ,ದರಕಾಸ್ತು ಸಮಿತಿ ಅಧ್ಯಕ್ಷ ಆನೇಪುರ ಹನುಮಂತಪ್ಪ,ಮೈ.ನಾರಾಯಣಸ್ವಾಮಿ,ನವೀನ್‌ ಸೇರಿದಂತೆ ದರಕಾಸ್ತು ಸಮಿತಿ ಸದಸ್ಯರಿದ್ದರು.

Share this article