ತೀರ್ಥಹಳ್ಳಿ ಪಟ್ಟಣದ ಕುಶಾವತಿ ಬನ್ನಿಮಂಟಪದಲ್ಲಿ ಬನ್ನಿ ಪೂಜೆ

KannadaprabhaNewsNetwork |  
Published : Oct 25, 2023, 01:15 AM IST
ಫೋಟೋ 24 ಟಿಟಿಎಚ್ 0 1:  ದಸರಾ ಉತ್ಸವದ ರಾಮೇಶ್ವರ ದೇವರ ರಾಜಭೀದಿ ಉತ್ಸವ ಹಾಗೂ ಭುವನೇಶ್ವರಿ ದೇವಿ ಮೆರವಣಿಗೆಗೆ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕ ಆರಗ ಜ್ಞಾನೇಂದ್ರ ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು | Kannada Prabha

ಸಾರಾಂಶ

ನಾಲ್ಕು ದಿನಗಳ ತೀರ್ಥಹಳ್ಳಿ ಅದ್ಧೂರಿ ದಸರಾ ಸಂಪನ್ನ

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ದಸರಾ ಉತ್ಸವ ಸಮಿತಿ ವತಿಯಿಂದ ಪಟ್ಟಣದಲ್ಲಿ ವಿಜಯ ದಶಮಿ ದಿನವಾದ ಮಂಗಳವಾರ ಕುಶಾವತಿಯ ಬನ್ನಿಮಂಟಪದಲ್ಲಿ ಸಾಂಪ್ರದಾಯಿಕವಾಗಿ ಬನ್ನಿ ಪೂಜೆ ನೆರವೇರಿಸುವುದರೊಂದಿಗೆ ನಾಲ್ಕು ದಿನಗಳ ಕಾಲ ನಡೆದ ತೀರ್ಥಹಳ್ಳಿ ಅದ್ಧೂರಿ ನಾಡಹಬ್ಬ ದಸರಾ ಸಂಪನ್ನಗೊಂಡಿತು. ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀ ರಾಮೇಶ್ವರ ರಾಜಬೀದಿ ಉತ್ಸವ ಮತ್ತು ಭುವನೇಶ್ವರಿ ದೇವಿ ಮೆರವಣಿಗೆಗೆ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯತಿ ಅಧ್ಯಕ್ಷ ಗೀತಾ ರಮೇಶ್, ತಹಸೀಲ್ದಾರ್ ಎಂ.ಲಿಂಗರಾಜ್ ಮತ್ತು ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು. ಅದ್ಧೂರಿ ಮೆರವಣಿಗೆಯಲ್ಲಿ ಹಿರಣ್ಯ ಕಶ್ಯಪ ವಧೆ, ಗೀತೋಪದೇಶ ಚಂದ್ರಯಾನ-3 ಡೈಸೋಸರ್ ಮುಂತಾದ ಸ್ತಬ್ಧಚಿತ್ರಗಳು ಗಮನ ಸೆಳೆದವು. ಇದರೊಂದಿಗೆ ಚಂಡೆಮೇಳ, ಕರಾವಳಿಯ ಹುಲಿವೇಷ, ಭಜನೆ ಮುಂತಾದ ಕಲಾವಿದರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ರಂಜಿಸಿದರು. ಅಲ್ಲದೇ, ವಿಶೇಷವಾಗಿ ಗಮನ ಸೆಳೆದವು. ಸಂಜೆ ಕುಶಾವತಿಯಲ್ಲಿರುವ ಬನ್ನಿ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಂದ್ರಯಾನ-3ರ ಯಶಸ್ಸಿಗೆ ಕಾರಣರಾದ ತಾಲೂಕಿನ ವಿಜ್ಞಾನಿಗಳಾದ ಸುಬ್ರಮಣ್ಯ ಉಡುಪ ಮತ್ತು ಶಿವಾನಿ ಅವರನ್ನು ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಗೌರವಿಸಲಾಯಿತು. - - - -24 ಟಿಟಿಎಚ್01: ದಸರಾ ಉತ್ಸವದ ಶ್ರೀ ರಾಮೇಶ್ವರ ದೇವರ ರಾಜಬೀದಿ ಉತ್ಸವ, ಶ್ರೀ ಭುವನೇಶ್ವರಿ ದೇವಿ ಮೆರವಣಿಗೆಗೆ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಶಾಸಕ ಆರಗ ಜ್ಞಾನೇಂದ್ರ ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌