ಕನ್ನಡಪ್ರಭ ವಾರ್ತೆ ಹನೂರು
ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಹುಣಸೂರು ರಾಜ್ಯ ಸಾರಿಗೆ ಡಿಪೋದಿಂದ ಮಲೆಮಾದೇಶ್ವರ ಬೆಟ್ಟಕ್ಕೆ ಬಂದಂತ ಸಾರಿಗೆ ವಾಹನ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಭಕ್ತಾದಿಗಳು ನಂತರ ವಾಪಸ್ ಬರುವಾಗ ಸಾರಿಗೆ ಬ್ರೇಕ್ ವಿಫಲಗೊಂಡು 75 ಹೆಚ್ಚು ಭಕ್ತಾದಿಗಳು ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಚಾಲಕ ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ:ಮಧ್ಯಾಹ್ನ ಮಲೆಮಾದೇಶ್ವರ ಬೆಟ್ಟದಿಂದ ಹೊರಟಂತ ಸಾರಿಗೆ ಬಸ್ ಬ್ರೇಕ್ ಸಮಸ್ಯೆ ಇದ್ದ ಕಾರಣ ಮಾದೇಶ್ವರ ಬೆಟ್ಟದಲ್ಲಿ ತಪಾಸಣೆಗೊಳಿಸಿ ಬಂದಿರುವ ವಾಹನ ಮತ್ತೆ ಪೊನ್ನಾಚಿ ಕ್ರಾಸ್ ಬಳಿ ಬ್ರೇಕ್ ಸಮಸ್ಯೆ ಉಂಟಾಗಿ ಚಾಲಕನ ಸಮಯಪ್ರಜ್ಞೆ ಹಾಗೂ ತುಂಬಿ ತುಳುಕಿದ ಮಾದಪ್ಪನ ಭಕ್ತಾದಿಗಳು ಬಸ್ಸಿನಲ್ಲಿದ್ದ ಕಾರಣ ಚಾಲಕ ಗಣೇಶ್ ಬಸ್ ಅಪಘಾತಕ್ಕೆ ಒಳಗಾಗುವ ಮುನ್ನ ಚಾಲಕನ ಸಮಯ ಪ್ರಜ್ಞೆಯಿಂದ ರಸ್ತೆ ಬದಿಯ ತೀವ್ರ ತಿರುವಿನ ತಡೆ ಗೋಡೆಗೆ ಬಡಿದು ವಾಹನ ನಿಲ್ಲಿಸಿ 75ಕ್ಕೂ ಹೆಚ್ಚು ಭಕ್ತರು ಪಾರಾಗಿದ್ದಾರೆ.
ಮಾದೇಶ್ವರ ಬೆಟ್ಟದಿಂದ, ಆನೆಹೊಲ ಗ್ರಾಮದಿಂದ ತಾಳು ಬೆಟ್ಟದ ವರೆಗೆ ನೆಟ್ವರ್ಕ್ ಸಮಸ್ಯೆ ಜೊತೆಗೆ ಇಂತಹ ಘಟನೆಗಳು ಅಪಘಾತಗಳು ಸಂಭವಿಸಿದಾಗ ತುರ್ತು ವಾಹನಗಳಿಗೆ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಲು ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಜೊತೆಗೆ ಡಕೋಟಾ ಬಸ್‌ಗಳನ್ನು ಮಾದೇಶ್ವರ ಬೆಟ್ಟದ ವಿಶೇಷ ದಿನಗಳಲ್ಲಿ ಬಿಡಲಾಗುತ್ತಿದೆ. ಈ ಬಗ್ಗೆ ಭಕ್ತರ ಸುರಕ್ಷಿತ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಬಸ್‌ಗಳನ್ನು ಮಾದೇಶ್ವರ ಬೆಟ್ಟಕ್ಕೆ ವಿವಿಧ ಡಿಪೋಗಳಿಂದ ಬಿಡಲು ಕ್ರಮ ಕೈಗೊಳ್ಳಬೇಕುಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜು ಹೇಳಿದ್ದಾರೆ.