ಕನ್ನಡಪ್ರಭ ವಾರ್ತೆ ಲೋಕಾಪುರ
ಲೋಕಾಪುರದಿಂದ-ಹೊಸಕೋಟೆ ಮಾರ್ಗದಲ್ಲಿ ಪ್ರಯಾಣಿಸುವಾಗ ಮಹಿಳಾ ಪ್ರಯಾಣಿಕರೊಬ್ಬರು ಚಿನ್ನಾಭರಣ ಇದ್ದ ಬ್ಯಾಗ್ ಮರೆತು ಹೋಗಿದ್ದರು. ಎಲ್ಲರೂ ಬಸ್ ಇಳಿದ ಬಳಿಕ ಬ್ಯಾಗ್ ಇರುವುದನ್ನು ಗಮನಿಸಿದ ನಿರ್ವಾಹಕ ಎ.ಎಸ್. ಕಂಬಾರ ಅವರು ಪರ್ಸ್ ತೆಗೆದುಕೊಂಡು ಅದರಲ್ಲಿದ್ದ ದಾಖಲೆಗಳ ಸಹಾಯದಿಂದ ಪ್ರಯಾಣಿಕರನ್ನು ಪತ್ತೆ ಹಚ್ಚಿ ಘಟಕಕ್ಕೆ ಕರೆಸಿ ಪರ್ಸ್ ಮರಳಿಸಿದ್ದಾರೆ,
ನಿರ್ವಾಹಕ ಎ.ಎಸ್.ಕಂಬಾರ ಕಾರ್ಯಕ್ಕೆ ಪ್ರಯಾಣಿಕ ಮತ್ತು ಮುಧೋಳ ಘಟಕದ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ, ನಿರ್ವಾಹಕ ಕಂಬಾರ ಅವರಿಗೆ ಅಭಿನಂದನೆ ಸಲ್ಲಿಸಿದರು.