ನವಲಗುಂದ:
ತಾಲೂಕಿನ ಗುಡಿಸಾಗರ, ನಾಗನೂರ, ಸೊಟಕನಾಳ ಗ್ರಾಮಗಳಿಗೆ ಪ್ರತಿದಿನ ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ. ಕೆಲವೊಮ್ಮೆ ಬಸ್ ಬಂದರೆ ಅದರಲ್ಲಿ ಹತ್ತಲೂ ಜಾಗವಿರುವುದಿಲ್ಲ. ಪ್ರತಿ ದಿನವೂ ತಡವಾಗಿ ಬರುವ ಕಾರಣ ಎರಡು ಬಸ್‌ನ ಜನರು ಒಂದೇ ಬಸ್‌ನಲ್ಲಿ ಪ್ರಯಾಣಸುವಂತಾಗಿದೆ. ಏಳು ಗ್ರಾಮಗಳ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುವ ನೌಕರರು ಒಂದೇ ಬಸ್‌ನಲ್ಲಿ ಹೇಗೆ ಪ್ರಯಾಣಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್‌ನಲ್ಲಿ ಹೆಚ್ಚಿನ ಜನರನ್ನು ತುಂಬಿಕೊಂಡು ಹೋಗುವ ಕಾರಣ ವಿದ್ಯಾರ್ಥಿಗಳಿಗೆ ಮತ್ತು ತುರ್ತಾಗಿ ತೆರಳಬೇಕಿರುವ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಬೆಳಗ್ಗೆ 8.30, 9.30 ಮಧ್ಯಾಹ್ನ 1.30 ಹಾಗೂ ಸಂಜೆ 5.30ಕ್ಕೆ ಬಸ್‌ಗಳ ಸೌಲಭ್ಯ ಕಲ್ಪಿಸಬೇಕು. ಕೂಡಲೇ ಕ್ರಮ ವಹಿಸದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ನಂತರ ಸ್ಥಳಕ್ಕೆ ಆಗಮಿಸಿದ ಸಾರಿಗೆ ನಿಯಂತ್ರಕ ಎಂ.ಎಸ್. ಶಾಲದಾರ ಮೂಲಕ ನವಲಗುಂದ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.