ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಶಾಲನಗರ ಕನ್ನಡ ಭಾರತಿ ಪ್ರಥಮ ದರ್ಜೆ‌ ಕಾಲೇಜಿನಲ್ಲಿ ತ್ರಿಭಾಷಾ ಸಾಹಿತಿ ದಿ.ವಿ.ಎಸ್.ರಾಮಕೃಷ್ಣ ಬದುಕು- ಬರಹ ಹಾಗೂ ಕೃತಿಗಳ ಕುರಿತು ದತ್ತಿ ಕಾರ್ಯಕ್ರಮ ನಡೆಯಿತು.

ಕುಶಾಲನಗರ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಶಾಲನಗರ ಕನ್ನಡ ಭಾರತಿ ಪ್ರಥಮ ದರ್ಜೆ‌ ಕಾಲೇಜಿನಲ್ಲಿ ತ್ರಿಭಾಷಾ ಸಾಹಿತಿ ದಿ.ವಿ.ಎಸ್.ರಾಮಕೃಷ್ಣ ಬದುಕು- ಬರಹ ಹಾಗೂ ಕೃತಿಗಳ ಕುರಿತು ದತ್ತಿ ಕಾರ್ಯಕ್ರಮ ನಡೆಯಿತು.

ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು ಮಾತನಾಡಿ, ಕೊಡಗಿನ ತ್ರಿಭಾಷಾ ಸಾಹಿತಿ ವಿ.ಎಸ್.ರಾಮಕೃಷ್ಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡಗುಗೆಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯ ಮಾಡಿಕೊಡಬೇಕಾಗಿದೆ ಎಂದರು.

ರಾಮಕೃಷ್ಣ ಅವರ ಬದುಕು- ಬರಹ ಹಾಗೂ ಕೃತಿಗಳ ಕುರಿತು ಮಾತನಾಡಿದ ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕೊಡಗಿನಲ್ಲಿ ಗದ್ಯ, ಕಾವ್ಯ ರಚನೆ ಮೂಲಕ ಸಾಹಿತ್ಯ ಕೃಷಿ ಮಾಡಿರುವ ತ್ರಿಭಾಷಾ ಸಾಹಿತಿಯಾಗಿರುವ ವಿ.ಎಸ್.ರಾಮಕೃಷ್ಣ ಕೊಡಗಿನ ಮೇರು ಸಾಹಿತಿ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಕುಶಾಲನಗರ ಪಟ್ಟಣದ ಕಲಾಭವನಕ್ಕೆ ತೆರಳುವ ರಸ್ತೆಗೆ ಸಾಹಿತಿ ವಿ.ಎಸ್.ರಾಮಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದರು.

ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ, ಸಾಹಿತ್ಯ ಅಭಿರುಚಿಯಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿ, ಮಾನಸಿಕ ನೆಮ್ಮದಿ, ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಸಂಸ್ಕೃತಿ ಅರಿವಿನಂತಹ ಪ್ರಯೋಜನಗಳು ಲಭಿಸುತ್ತವೆ ಎಂದು ಹೇಳಿದರು.

ಕೊಡಗು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿ.ದಿನೇಶ್, ಸಾಹಿತಿ ದಿ.ವಿ.ಎಸ್.ರಾಮಕೃಷ್ಣ ಅವರ ಪುತ್ರ ವಿ.ಆರ್.ದಿನೇಶ್, ತಾಲೂಕು ಕ.ಸಾ.ಪ. ಸಮಿತಿ ಸದಸ್ಯ ಎಂ.ಎನ್.ಕಾಳಪ್ಪ, ಕೋಶಾಧಿಕಾರಿ ಕೆ.ವಿ.ಉಮೇಶ್ , ನಿವೃತ್ತ ಹಿರಿಯ ವ್ಯವಸ್ಥಾಪಕಿ ಸೂದನ ರತ್ನಾವತಿ, ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಮತ್ತಿತರರು ಇದ್ದರು.

ಉಪನ್ಯಾಸಕಿ ಬಿ.ಜಿ.ಸ್ಮಿತಾ ನಿರ್ವಹಿಸಿದರು. ಉಪನ್ಯಾಸಕಿ ಸುಮಯ ತಬಸಮ್ ಸ್ವಾಗತಿಸಿದರು. ಉಪನ್ಯಾಸಕಿ ಎ.ದರ್ಶಿನಿ ವಂದಿಸಿದರು.

ಉಪನ್ಯಾಸ ನೀಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು ಅವರನ್ನು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ, ಟಿ.ಜಿ.ಪ್ರೇಮಕುಮಾರ್, ಬಿ.ಸಿ.ದಿನೇಶ್, ಕೆ.ವಿ.ಉಮೇಶ್,ವಿ.ಆರ್. ದಿನೇಶ್, ಟಿ.ವಿ.ಶೈಲಾ ಇತರರು ಇದ್ದರು.