ಬಮ್ಮನಹಳ್ಳಿ ಸವಣೂರು ಮಾರ್ಗದ ಬಸ್ ಸೇವೆಗೆ ಚಾಲನೆ

KannadaprabhaNewsNetwork |  
Published : Jun 14, 2025, 12:56 AM IST
ಬಮ್ಮನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬಮ್ಮನಹಳ್ಳಿ- ಸವಣೂರು ನೂತನ ಮಾರ್ಗದ ಬಸ್ ಸೇವೆಗೆ ಶಾಸಕ ಶ್ರೀನಿವಾಸ ಮಾನೆ ಹಸಿರು ನಿಶಾನೆ ತೋರಿದರು. ಶಿಗ್ಗಾಂವಿ-ಸವಣೂರು ಶಾಸಕ ಯಾಸೀರಖಾನ್ ಪಠಾಣ ಇದ್ದರು. | Kannada Prabha

ಸಾರಾಂಶ

ಬಸ್ ನಿತ್ಯ ಬೆಳಗ್ಗೆ 5.45 ಗಂಟೆಗೆ ಬಮ್ಮನಹಳ್ಳಿ ಗ್ರಾಮದಿಂದ ಲಕ್ಕಿಕೊಪ್ಪ, ದೇವರ ಹೊಸಪೇಟೆ, ಹೋತನಹಳ್ಳಿ, ಮಾಸನಕಟ್ಟಿ, ವಳಗೇರಿ, ಗುಡ್ಡದಚನ್ನಾಪುರ, ಬಂಕಾಪುರ ಮಾರ್ಗವಾಗಿ ಸವಣೂರು ತಲುಪಲಿದ್ದು, ರಾತ್ರಿ 8 ಗಂಟೆಗೆ ಇದೇ ಮಾರ್ಗದಿಂದ ವಾಪಸ್ ಬಮ್ಮನಹಳ್ಳಿಗೆ ಆಗಮಿಸಲಿದೆ.

ಹಾನಗಲ್ಲ: ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬಮ್ಮನಹಳ್ಳಿ- ಸವಣೂರು ನೂತನ ಮಾರ್ಗದ ಬಸ್ ಸೇವೆಗೆ ಶಾಸಕ ಶ್ರೀನಿವಾಸ ಮಾನೆ ಹಸಿರುನಿಶಾನೆ ತೋರಿದರು.ಶಿಗ್ಗಾಂವಿ- ಸವಣೂರು ಶಾಸಕ ಯಾಸೀರಖಾನ್ ಪಠಾಣ, ತಹಸೀಲ್ದಾರ್ ರೇಣುಕಾ ಎಸ್., ಕೆಡಿಪಿ ಸದಸ್ಯ ಮಹ್ಮದಹನೀಫ್ ಬಂಕಾಪುರ, ಗ್ರಾಪಂ ಸದಸ್ಯರಾದ ಅರುಣ ಮಲ್ಲಮ್ಮನವರ, ಪತಂಗಸಾಬ ಮಕಾನದಾರ, ರಾಮಣ್ಣ ವಡ್ಡರ, ಲಕ್ಷ್ಮೀ ಕಲಾಲ, ಗದಿಗೆವ್ವ ಚಿಕ್ಕಣಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಪದ್ಮಾ ಬೇಂದ್ರೆ, ಮುಖಂಡರಾದ ಚನ್ನಬಸಣ್ಣ ಬಿದರಗಡ್ಡಿ, ನಾಗರಾಜ ಮಲ್ಲಮ್ಮನವರ, ಮಲ್ಲನಗೌಡ ಪಾಟೀಲ, ಚಮನಸಾಬ ಪಾಟೀಲ, ಮಲ್ಲೇಶಪ್ಪ ಕ್ಷೌರದ, ರಾಮಣ್ಣ ರಾಮಜಿ, ಮಾರುತಿ ಮುದುಕಣ್ಣನವರ, ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಚಂದ್ರಪ್ಪ ಜಾಲಗಾರ, ಈರಣ್ಣ ಬೈಲವಾಳ, ಭರಮಣ್ಣ ಶಿವೂರ, ಆದರ್ಶ ಶೆಟ್ಟಿ ಸೇರಿದಂತೆ ಇತರರು ಇದ್ದರು.

ಬಸ್ ನಿತ್ಯ ಬೆಳಗ್ಗೆ 5.45 ಗಂಟೆಗೆ ಬಮ್ಮನಹಳ್ಳಿ ಗ್ರಾಮದಿಂದ ಲಕ್ಕಿಕೊಪ್ಪ, ದೇವರ ಹೊಸಪೇಟೆ, ಹೋತನಹಳ್ಳಿ, ಮಾಸನಕಟ್ಟಿ, ವಳಗೇರಿ, ಗುಡ್ಡದಚನ್ನಾಪುರ, ಬಂಕಾಪುರ ಮಾರ್ಗವಾಗಿ ಸವಣೂರು ತಲುಪಲಿದ್ದು, ರಾತ್ರಿ 8 ಗಂಟೆಗೆ ಇದೇ ಮಾರ್ಗದಿಂದ ವಾಪಸ್ ಬಮ್ಮನಹಳ್ಳಿಗೆ ಆಗಮಿಸಲಿದೆ.ಪರಿಸರ ಸಂರಕ್ಷಣೆಗೆ ಗಿಡಮರ ಬೆಳೆಸಿ

ರಾಣಿಬೆನ್ನೂರು: ಗಿಡಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸಂಜಯ ಸಾವುಕಾರ ತಿಳಿಸಿದರು.ನಗರದ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಸಸಿಯನ್ನು ನೆಟ್ಟು ಅದನ್ನು ಪೋಷಣೆ ಮಾಡಿದರೆ ಅವುಗಳಿಗೆ ತಮ್ಮ ಹೆಸರನ್ನು ಇಡಲಾಗುವುದು ಎಂದರು.

ಪ್ರಾ. ಸಿ.ಎ. ಹರಿಹರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಿ.ಸಿ. ನಿಡಗುಂದಿ, ನೋಡಲ್ ಅಧಿಕಾರಿ ಡಾ. ಮನೋಜಕುಮಾರ ಸವಣೂರ, ಡಾ. ಬಾಬಾಸಾಹೇಬ ಜಂಗ್ಳಪ್ಪನವರ, ಡಾ. ಎಸ್.ಎ. ಪಾಟೀಲ, ಡಾ. ಪ್ರಸನ್ನಗೌಡ ಪಾಟೀಲ, ಡಾ. ಜ್ಯೋತಿ ಜಂಬಗಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ. ಸರಸ್ವತಿ ಬಮ್ಮನಾಳ, ಸುನೀಲ ಕಡೂರ, ಡಾ. ಮಧುಕುಮಾರ ಆರ್., ಬಿ.ಕೆ. ಕಾಟೇನಹಳ್ಳಿ, ಬೋಧಕ ಹಾಗೂ ಬೋಧಕೇತರ ವರ್ಗದವರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌