ಕನ್ನಡಪ್ರಭ ವಾರ್ತೆ ಬೆಂಗಳೂರು
ನೂತನ ಬಸ್ ಸೇವೆ ಸರ್ಜಾಪುರದಿಂದ ದೊಡ್ಡಕನ್ನಳ್ಳಿ, ಬೆಳ್ಳಂದೂರು ಗೇಟ್, ಸರ್ಜಾಪುರ ರಸ್ತೆ ಜಂಕ್ಷನ್, ಮಾರತಹಳ್ಳಿ ಬ್ರಿಡ್ಜ್, ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಕೆಐಎ 8 ಮಾರ್ಗಸಂಖ್ಯೆ ಅಡಿಯಲ್ಲಿ ಪ್ರತಿದಿನ 14 ಟ್ರಿಪ್ ಬಸ್ ಸೇವೆ ನೀಡಲಿದೆ. ಈವರೆಗೆ 18 ಮಾರ್ಗಗಳಲ್ಲಿ 988 ಟ್ರಿಪ್‌ಗಳ ಮೂಲಕ ವಾಯುವಜ್ರ ಬಸ್ ಸೇವೆ ನೀಡಲಾಗುತ್ತಿತ್ತು. ಇದೀಗ ಆ ಸಂಖ್ಯೆ 19 ಮಾರ್ಗ ಹಾಗೂ 1012 ಟ್ರಿಪ್‌ಗಳಿಗೆ ಏರಿಕೆಯಾಗುವಂತಾಗಿದೆ.
ಇದೇ ವೇಳೆ ಸರ್ಜಾಪುರ-ಹೆಬ್ಬಾಳ, ಸರ್ಜಾಪುರ ಮಾರ್ಗವಾಗಿ ಸಂಚರಿಸುವ ಶಿವಾಜಿನಗರ ಬಸ್ ನಿಲ್ದಾಣ-ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ ಮಾರ್ಗಗಳಲ್ಲಿ ಸಂಚರಿಸುವ ನೂತನ ಬಸ್ ಸೇವೆಗೆ ಚಾಲನೆ ನೀಡಲಾಯಿತು.ಶಾಸಕ ಬಿ. ಶಿವಣ್ಣ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್, ನಿರ್ದೇಶಕಿ ಎಂ. ಶಿಲ್ಪಾ, ಸರ್ಜಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಎ. ಸತೀಶ್‌ಕುಮಾರ್ ಇತರರಿದ್ದರು.