ಸುಂಡಘಟ್ಟದಲ್ಲಿ ಬಸ್ ತಂಗುದಾಣ ಉದ್ಘಾಟನೆ

KannadaprabhaNewsNetwork |  
Published : Jan 24, 2026, 02:30 AM IST
ಕೆ ಕೆ ಪಿ ಸುದ್ದಿ 02: ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ. ಮಂಜುನಾಥ್ ತಾಲ್ಲೂಕು ಹಲವು ಗ್ರಾಮಗಳಲ್ಲಿ ಬಸ್ ತಂಗುದಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.  | Kannada Prabha

ಸಾರಾಂಶ

ಕನಕಪುರ: ಚುನಾವಣಾ ಸಮಯದಲ್ಲಿ ಈ ಭಾಗದ ಜನರು ತಂಗುದಾಣ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರಿಂದ ಅವರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಸಂಸದ ಡಾ. ಮಂಜುನಾಥ್‌ ಹೇಳಿದರು.

ಕನಕಪುರ: ಚುನಾವಣಾ ಸಮಯದಲ್ಲಿ ಈ ಭಾಗದ ಜನರು ತಂಗುದಾಣ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರಿಂದ ಅವರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಸಂಸದ ಡಾ. ಮಂಜುನಾಥ್‌ ಹೇಳಿದರು.

ತಾಲೂಕಿನ ಚಾಕನಹಳ್ಳಿ ಗ್ರಾಪಂ ವ್ಯಾಪ್ತಿಯ ಸುಂಡಘಟ್ಟದಲ್ಲಿ ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿದ ಸಂಸದರು, ಮಳೆ ಹಾಗೂ ಬಿಸಿಲಿನಿಂದ ಗ್ರಾಮೀಣರಿಗೆ ಇದರಿಂದ ಅನುಕೂಲವಾಗಲಿದೆ. ಇಂದು ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಅಗತ್ಯವಾಗಿರುವುದನ್ನ ಮನಗಂಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಹೆಚ್ಚಿನ ಒತ್ತು ನೀಡುವ ಮೂಲಕ ಈ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿರುವುದಾಗಿ ತಿಳಿಸಿದರು.

ತಾಲೂಕಿನ ಸಾತನೂರು ಹಾಗೂ ಚನ್ನಪಟ್ಟಣ ಅರಣ್ಯ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ದಾಳಿಗೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ, ರೈತರ ಜಮೀನುಗಳಿಗೆ ನುಗ್ಗಿ ಅಪಾರ ಬೆಳೆ ನಾಶವಾಗಿದೆ. ಇದನ್ನು ತಪ್ಪಿಸಲು ತಡೆಗೋಡೆ ನಿರ್ಮಾಣಕ್ಕೆ ಮಂಜೂರಾತಿ ಪಡೆದಿದ್ದು 20ರಿಂದ 30 ಕಿಲೋ ಮೀಟರ್‌ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ. ಅರಣ್ಯಾಧಿಕಾರಿಗಳು ಅರಣ್ಯ ಗಸ್ತು ತಿರುಗಲು ಸಂಸದರ ನಿಧಿಯಿಂದ ಹೊಸದಾಗಿ ಜೀಪ್ ನೀಡುವುದಾಗಿ ತಿಳಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೆ. ಕುಮಾರ್, ರಾಜ್ಯ ಜೆಡಿಎಸ್ ಯುವ ಉಪಾಧ್ಯಕ್ಷ ಚಿನ್ನಸ್ವಾಮಿ, ಜೆಡಿಎಸ್ ಮುಖಂಡರಾದ ನಲ್ಲಹಳ್ಳಿ ಶಿವಕುಮಾರ್, ಸಿದ್ದಮರಿ ಗೌಡ, ಜೆಡಿಎಸ್ ಯುವ ಮುಖಂಡರಾದ ತಿಮ್ಮೇಗೌಡ, ಅರಳಾಳು ರಾಜೇಂದ್ರ, ದಿಶಾ ಸಮಿತಿ ಸದಸ್ಯರಾದ ರಾಜೇಶ್, ಶೋಭಾ, ಶ್ರೀನಿವಾಸ್, ಯುವ ಮುಖಂಡ ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಾಲಾಕ್ಷ, ನಗರಸಭಾ ಮಾಜಿ ಸದಸ್ಯ ಸ್ಟುಡಿಯೋ ಚಂದ್ರು, ಸಾತನೂರು ಮಹೇಂದ್ರ, ಮುಳ್ಳಹಳ್ಳಿ ಸುಂದರ, ಆನಂದ ಇತರರಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಸ್ ತಂಗುದಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ. ಮಂಜುನಾಥ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ವಿಷಯಗಳ ಮುಂದಿಟ್ಟು ಫೆ.2ನೇ ವಾರ ಬೃಹತ್‌ ಪ್ರತಿಭಟನೆ: ಎಂ. ಗುರುಮೂರ್ತಿ ಮಾಹಿತಿ
ರಾಜ್ಯ ಸರ್ಕಾರ ಅಣತಿಯಂತೆ ಮೆಕ್ಕೆಜೋಳ ಖರೀದಿಸಿ: ಬಿ.ಎಂ.ಸತೀಶ