ಉದ್ಯಮಿ ನಾಗರಾಜ ಕೆಂಬಿ ಸಾಧನೆ ಮಾದರಿ: ರಾಜಕಿರಣ ಮೆಣಸಿನಕಾಯಿ

KannadaprabhaNewsNetwork |  
Published : Sep 15, 2025, 01:01 AM IST
ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದಿಂದ ಜೀವಮಾನ ಶ್ರೇಷ್ಠ ಸಾಧಕ ಪುರಸ್ಕೃತ ಬ್ಯಾಡಗಿ ಉದ್ದಿಮೆದಾರ ನಾಗರಾಜ ಕೆಂಬಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನಾಗಾರಾಜ ಕೆಂಬಿ ಅವರ ಪರಿಶ್ರಮದಿಂದ ರಾಜ್ಯದೆಲ್ಲೆಡೆ ಬ್ಯಾಡಗಿ ತಳಿ ಮೆಣಸಿನಕಾಯಿ ಇಂದು ದೇಶದಲ್ಲಷ್ಟೇ ಅಲ್ಲ ಇಟಲಿ, ಯುಎಇ, ನೇಪಾಳ, ಶ್ರೀಲಂಕಾ ದೇಶಗಳಿಗೆ ರಫ್ತಾಗುತ್ತಿದೆ.

ಬ್ಯಾಡಗಿ: ಸಾಧನೆ ಯಾರ ಸ್ವತ್ತಲ್ಲ. ದೇಶದ ಮುಖ್ಯವಾಹಿನಿಗೆ ಬಂದಿರುವ ಬಹುತೇಕ ಉದ್ದಿಮೆದಾರರ ಸಾಧನೆ ಹಿಂದೆ ಒಂದು ಬಹುದೊಡ್ಡ ಹೋರಾಟದ ಬದುಕನ್ನೇ ಕಾಣಬಹುದು. ಇಂಥವರ ಸಾಲಿಗೆ ಉದ್ಯಮಿ ನಾಗರಾಜ ಕೆಂಬಿ ಅವರ ಹೆಸರು ಸೇರ್ಪಡೆಯಾಗಿದ್ದು ವ್ಯಾಪಾರಸ್ಥರಿಗೆ ಸಂತಸದ ಸಂಗತಿ ಎಂದು ಹುಬ್ಬಳ್ಳಿ ವರ್ತಕರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ವತಿಯಿಂದ ಜೀವಮಾನ ಶ್ರೇಷ್ಠ ಸಾಧಕ ಪುರಸ್ಕೃತ ನಾಗರಾಜ ಕೆಂಬಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಹೊಟ್ಟೆಪಾಡಿಗಾಗಿ ವ್ಯಾಪಾರ ವೃತ್ತಿಯನ್ನು ಅರಸಿ ಬಂದವರು ಇಂದು ಇನ್ನೂರಕ್ಕೂ ಹೆಚ್ಚು ಕುಟುಂಬಗಳು ಸೇರಿದಂತೆ ಸಾವಿರಾರು ಜನರಿಗೆ ಅನ್ನ ನೀಡಿ ಬದುಕಿನ ಭರವಸೆ ಮೂಡಿಸಿದ್ದಾರೆ ಎಂದರು.

ವರ್ತಕ ಅಶೋಕ ಬಾಳಿಕಾಯಿ ಮಾತನಾಡಿ, ನಾಗಾರಾಜ ಕೆಂಬಿ ಅವರ ಪರಿಶ್ರಮದಿಂದ ರಾಜ್ಯದೆಲ್ಲೆಡೆ ಬ್ಯಾಡಗಿ ತಳಿ ಮೆಣಸಿನಕಾಯಿ ಇಂದು ದೇಶದಲ್ಲಷ್ಟೇ ಅಲ್ಲ ಇಟಲಿ, ಯುಎಇ, ನೇಪಾಳ, ಶ್ರೀಲಂಕಾ ದೇಶಗಳಿಗೆ ರಫ್ತಾಗುತ್ತಿದೆ. ಓದಿದ್ದು ಕೇವಲ ನಾಲ್ಕನೇ ತರಗತಿಯಾದರೂ ವಿದೇಶಗಳಿಗೆ ಮೆಣಸಿನಕಾಯಿ ರಫ್ತು ಮಾಡುವಷ್ಟು ಶಕ್ತಿ ಹೊಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ಯಕಲಾಸಪುರ, ಗಂಗನಗೌಡ ಪಾಟೀಲ(ಮುತ್ತಣ್ಣ), ಸಿದ್ದು ಕೊಟ್ಟೂರಶೆಟ್ರ, ಗುಂಡಪ್ಪ ಸಾವುಕಾರ, ಸೋಮನಗೌಡ್ರ, ಎಲ್.ಬಿ. ಪಾಟೀಲ, ಶಿವನಗೌಡ್ರ ಪಾಟೀಲ, ಚಂದ್ರು ಪೂಜಾರ, ವಿನೋದ ತಲ್ಲೂರ, ಶರಣಬಸಯ್ಯ ಹಿರೇಮಠ, ಈಶಣ್ಣ ಹೆಬಸೂರು, ಸುರೇಶ ಮೇಲಗಿರಿ, ರಾಜಣ್ಣ ಮಾಗನೂರ, ವಿಜಯ ವಾಲಿಶೇಟ್ರ, ಎಸ್.ಎಂ. ಕೆಂಬಿ, ಮಲ್ಲಿಕಾರ್ಜುನ ಕೆಂಬಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ