ಕನ್ನಡಪ್ರಭ ವಾರ್ತೆ ಬ್ಯಾಡಗಿ
ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ವ್ಯಾಪಾರಸ್ಥರ ಮೇಲಿದೆ. ಅಂತೆಯೇ ಬ್ಯಾಡಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಮೆಣಸಿನಕಾಯಿ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ವ್ಯಾಪಾರಸ್ಥರ ಗೌರವವನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಲೋಕಸಭೆ ಚುನಾವಣೆ ಪ್ರಚಾರಾರ್ಥವಾಗಿ ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬ್ಯಾಡಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಾರ್ಷಿಕವಾಗಿ ಸುಮಾರು 3 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. ಇದೇನು ಸಾಮಾನ್ಯವಾದ ವಿಷಯವಲ್ಲ. ಇದರ ಹಿಂದೆ ಕೂಲಿ ಕಾರ್ಮಿಕರು, ರೈತರು ಸೇರಿ ಎಲ್ಲರ ಶ್ರಮದ ಫ್ರತಿಫಲವಿದೆ, ಅದರಲ್ಲೂ ಬ್ಯಾಡಗಿ ವ್ಯಾಪಾರಸ್ಥರು ರೈತರೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಇಟ್ಟುಕೊಳ್ಳುವ ಮೂಲಕ ವರ್ಷವಿಡೀ ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದರು.ಮಾರಾಟ ಮಾಡಿದ ಕೋಟಿಗಟ್ಟಲೇ ಹಣವನ್ನು ರೈತರಿದ್ದ ಸ್ಥಳಕ್ಕೆ ತಲುಪಿಸುತ್ತಿದ್ದ ಕಾಲವೊಂದಿತ್ತು, ಇದೊಂದು ಬಹುದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ, ಡಿಜಿಟಲ್ ಇಂಡಿಯಾ ಘೋಷಣೆ ಬಳಿಕ ಆನ್ ಲೈನ್ ವಹಿವಾಟು ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ. ಅಲ್ಲಿಂದ ಇಲ್ಲಿ ವರೆಗೂ ನಮ್ಮೆಲ್ಲ ದಲಾಲರು ರೈತರ ಖಾತೆಗಳಿಗೆ ನೇರ ಹಣ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ದಲಾಲರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಯಿತು ಎಂದರು.
ವೇದಿಕೆಯಲ್ಲಿ ಬಸವರಾಜ ಛತ್ರದ, ಬಾಲಚಂದ್ರ ಪಾಟೀಲ, ಶಿವಬಸಪ್ಪ ಕುಳೇನೂರ, ಸುರೇಶ ಮೇಲಗಿರಿ, ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಇನ್ನಿತರರಿದ್ದರು.ರೋಡ್ ಶೋ:
ಬಳಿಕ ಬ್ಯಾಡಗಿ ಮಾರುಕಟ್ಟೆಯಿಂದ ಪಟ್ಟಣದ ಸುಭಾಸ್ ವೃತ್ತದ ವರೆಗೂ ರೋಡ್ ಶೋ ನಡೆಸಲಾಯಿತು,ತುಷ್ಟೀಕರಣ
ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದರೂ ತುಷ್ಟೀಕರಣ ಕೈಬಿಡದ ಕಾಂಗ್ರೆಸ್ ಒಂದು ವರ್ಗದ ಓಲೈಕೆಗೆ ಮುಂದಾಗಿದ್ದು ಹೇಯಕರ ಸಂಗತಿ. ಬರುವ ಚುನಾವಣೆಯಲ್ಲಿ ಜನರ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ವಿರೂಪಾಕ್ಷಪ್ಪ ಬಳ್ಳಾರಿ ಮಾಜಿ ಶಾಸಕ