ವ್ಯಾಪಾರಸ್ಥರು ರೈತರ ಹಿತ ಬಲಿ ಕೊಡಬಾರದು: ಹೆಬ್ಬಾರ

KannadaprabhaNewsNetwork |  
Published : Sep 17, 2024, 12:48 AM IST
ಪೊಟೋ೧೬ಎಸ್.ಆರ್.ಎಸ್೧ (ಶಿರಸಿ ನಗರದಲ್ಲಿ ಶಿವರಾಮ ಹೆಬ್ಬಾರ್ ಮಾಧ್ಯಮದವರ ಜತೆ ಮಾತನಾಡಿದರು.) | Kannada Prabha

ಸಾರಾಂಶ

ವಿದೇಶಿ ಅಡಕೆ ಅಕ್ರಮವಾಗಿ ತಂದು ಇಲ್ಲಿನ ಅಡಕೆ ಜತೆ ಬೆರಕೆ ಮಾಡಿರುವ ವ್ಯಾಪಾರಸ್ಥರನ್ನು ವ್ಯಾಪಾರಿ ಸಂಘಟನೆಗಳು ದೂರ ಇಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಶಿರಸಿ: ಅಡಕೆ ವ್ಯಾಪಾರಸ್ಥರು ಕೇವಲ ಹಣ ಗಳಿಸುವುದನ್ನೇ ಮಾನದಂಡವನ್ನಾಗಿ ಮಾಡಿಕೊಂಡು ನಿಯತ್ತಿನ ವ್ಯಾಪಾರ ನಡೆಸದಿದ್ದರೆ ರೈತರ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ. ಬರ್ಮಾ ದೇಶದ ಅಡಕೆ ಕಲಬೆರಕೆ ಮಾಡಿರುವುದು ತಪ್ಪು. ಇದರಿಂದ ದರ ಇಳಿಮುಖವಾಗಿದ್ದು, ವ್ಯಾಪಾರಸ್ಥರು ರೈತ ಮೂಲದಿಂದ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ರೈತರಿದ್ದಾರೆ. ವೈಯಕ್ತಿಕ ಹಿತಾಸಕ್ತಿಗೊಸ್ಕರ ರೈತರನ್ನು ಬಲಿ ಕೊಡಬಾರದು ಎಂದು ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದರು.ಸೋಮವಾರ ಮಾಧ್ಯಮದವರ ಜತೆ ಮಾತನಾಡಿ, ವಿದೇಶಿ ಅಡಕೆ ಅಕ್ರಮವಾಗಿ ತಂದು ಇಲ್ಲಿನ ಅಡಕೆ ಜತೆ ಬೆರಕೆ ಮಾಡಿರುವ ವ್ಯಾಪಾರಸ್ಥರನ್ನು ವ್ಯಾಪಾರಿ ಸಂಘಟನೆಗಳು ದೂರ ಇಡಬೇಕು ಎಂದ ಅವರು, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇರಬಾರದು ಎಂದು ರಾಜಕಾರಣಿಗಳು ಹೇಳುತ್ತಾರೆ. ಸಹಕಾರಿ ಕ್ಷೇತ್ರದಿಂದಲೇ ರಾಜಕೀಯ ಹುಟ್ಟುವುದು. ನಾನು ಸಹಕಾರಿ ಕ್ಷೇತ್ರದಿಂದ ಬಂದು ಎಪಿಎಂಸಿ ಅಧ್ಯಕ್ಷ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧ್ಯಕ್ಷ, ಶಾಸಕ, ಮಂತ್ರಿಯಾಗಲು ಸಹಕಾರಿಯಾಗಿದೆ. ರಾಜಕಾರಣಿಗಳೂ ಸಹಕಾರಿ ಕ್ಷೇತ್ರದಲ್ಲಿದ್ದಾರೆ. ರಾಜಕೀಯದಲ್ಲಿದ್ದವರೆಲ್ಲರೂ ಸಹಕಾರಿ ಕ್ಷೇತ್ರದಲ್ಲಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕರು ಬರಬೇಕು ಎಂದರು.ನಡವಳಿಕೆಯಲ್ಲಿ ವಿವೇಚನೆ ಇರಲಿ: ಶಿವರಾಮ ಹೆಬ್ಬಾರ

ಶಿರಸಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ನಡವಳಿಕೆಯಲ್ಲಿ ವಿವೇಚನೆ ಮತ್ತು ಮಿತಿ ಇರಬೇಕು. ಮಿತಿ ಮೀರಿ ನಡೆದರೆ ಶಾಸಕ ಮುನಿರತ್ನ ಅವರ ಬಂಧನದಂತಹ ಘಟನೆ ಜರುಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾತನಾಡುವಾಗ ನಮ್ಮ ಮೇಲೆ ಎಚ್ಚರಿಕೆ ಇಟ್ಟುಕೊಂಡರೆ ಆರೋಗ್ಯಕ್ಕೂ ಒಳ್ಳೆಯದು ಎಂದರು.

ನಾಗಮಂಗಲದಲ್ಲಿ ಇತ್ತೀಚೆಗೆ ಗಣೇಶನಮೂರ್ತಿ ಮೆರವಣಿಗೆ ಮೇಲೆ ದಾಳಿ ನಡೆದಿರುವುದು ದುರದೃಷ್ಟಕರ. ಗಲಭೆಗೆ ಕಾರಣರಾದ ಯಾವುದೇ ಧರ್ಮಿಯರಾದರೂ ಅವರ ಮೇಲೆ ಕ್ರಮ ಕೈಗೊಳ್ಳುವುದರ ಜತೆ ಸಮಾಜಘಾತುಕ ಶಕ್ತಿಯನ್ನು ದಂಡಿಸಬೇಕು.ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಲು ಯಾವುದೇ ಧರ್ಮಕ್ಕೆ, ಜಾತಿಗೆ ಅವಕಾಶವಿಲ್ಲ. ಸಹೋದರತ್ವದಿಂದ ಬಾಳಬೇಕಾಗಿದೆ. ನಾಗಮಂಗಲದ ಘಟನೆ ಪೂರ್ವ ನಿಯೋಜಿತವೋ ಎಂಬುದರ ಕುರಿತು ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದ ಎಂದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ