ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಲು ಸ್ಪರ್ಧೆಗಳಲ್ಲಿ ಭಾಗವಹಿಸಿ: ಮುನಿಶ್ರೀ ಮಹೋಜಿತ್‌ಕುಮಾರ್‌ಜಿ

KannadaprabhaNewsNetwork |  
Published : Sep 17, 2024, 12:48 AM IST
ಚಿಕ್ಕಮಗಳೂರಿನ ತೆರಾಪಂಥ್ ಭವನದಲ್ಲಿ ಅಣುವ್ರತ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಅಣುವ್ರತ್‌ ಕ್ರಿಯೋಟಿವಿಟಿ ಸ್ಪರ್ಧೆಯಲ್ಲಿ ವಿಜೇತರಾದ  ಶಾಲಾ ಮಕ್ಕಳಿಗೆ ಪ್ರಜಾಪಿತ ಬ್ರಹ್ಮಾಕುಮಾರೀಸ್‌ನ ಸಂಚಾಲಕಿ ಭಾಗ್ಯ ಅವರು ಬಹುಮಾನ ವಿತರಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು,ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆಂದು ಮುನಿಶ್ರೀ ಮಹೋಜಿತ್‌ ಕುಮಾರ್‌ಜಿ ನುಡಿದರು.

ತೆರಾಪಂಥ್ ಭವನದಲ್ಲಿ ಅಣುವ್ರತ್‌ ಕ್ರಿಯೋಟಿವಿಟಿ ಸ್ಪರ್ಧೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆಂದು ಮುನಿಶ್ರೀ ಮಹೋಜಿತ್‌ ಕುಮಾರ್‌ಜಿ ನುಡಿದರು.ನಗರದ ತೆರಾಪಂಥ್ ಭವನದಲ್ಲಿ ಅಣುವ್ರತ್ ಸಮಿತಿಯಿಂದ ಏರ್ಪಡಿಸಿದ್ದ ಅಣುವ್ರತ್‌ ಕ್ರಿಯೋಟಿವಿಟಿ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಏರ್ಪಟ್ಟಿದೆ. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನಿಟ್ಟುಕೊಂಡು ಸಾಧನೆ ಮಾಡಬೇಕೆಂದು ತಿಳಿಸಿದರು.ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಕ್ರೀಡೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಗುರುಗಳ ಮಾರ್ಗದರ್ಶನದೊಂದಿಗೆ ತಮ್ಮ ಜೀವನದ ಗುರಿ ಮುಟ್ಟಿ, ಇತರರಿಗೆ ಮಾರ್ಗದರ್ಶಕರಾಗಬೇಕೆಂದು ತಿಳಿಸಿದರು.ಅಣುವ್ರತ್ ಸಮಿತಿಯವರು ಸಮಾಜ ಸೇವೆ ಕೆಲಸಗಳ ಜೊತೆಗೆ ನಗರದ ವಿವಿಧ ಶಾಲಾ ಮಕ್ಕಳಿಗೆ ಪ್ರಬಂಧ, ಚಿತ್ರ ಕಲೆ, ಸಂಗೀತ, ಭಾಷಣ ಸ್ಪರ್ಧೆ ಏರ್ಪಡಿಸಿ, ಮಕ್ಕಳಲ್ಲಿರುವ ಪ್ರತಿಭೆ ಅನಾವರಣ ಮಾಡಲು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.ಅಣುವ್ರತ್‌ ಕ್ರಿಯೇಟಿವಿಟಿ ಸ್ಪರ್ಧೆ ಕರ್ನಾಟಕ ರಾಜ್ಯ ಪ್ರಭಾರಿಗಳಾದ ಎಸ್.ಎಂ. ಗೌತಮ್ ಆಚಾ ಮಾತನಾಡಿ, ಅಣುವ್ರತ್ ಸಮಿತಿ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ಮಕ್ಕಳಿಗೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು.ತೇರಾಪಂಥ್ ಸಭಾದ ಅಧ್ಯಕ್ಷ ಮಹೇಂದ್ರಜಿ ದೋಷಿ ಮಾತನಾಡಿ, ದಯೆ, ಕರುಣೆಯಿಂದ ಜೀವನ ಮಾಡುವ ಜೊತೆಗೆ ಪ್ರಾಣಿವಧೆ ವಿರೋಧಿಸಿ ಅಹಿಂಸೆ ತೊಡೆದು ಹಾಕುವುದೇ ಜೈನ್‌ ಧರ್ಮದ ಉದ್ದೇಶ ಎಂದು ಹೇಳಿದರು.ಅಣುವ್ರತ್ ಸಮಿತಿ ಅಧ್ಯಕ್ಷರಾದ ಮಂಜುಬಾಯಿ ಬನ್ಸಾಲಿ ಮಾತನಾಡಿ, ನಮ್ಮ ಸಮಾಜದವರು ಸಮಾಜಸೇವೆ ಕೆಲಸಗಳ ಮೂಲಕ ಗುರುತಿಸಿ ಕೊಂಡಿದ್ದೇವೆ. ನಮ್ಮ ಗುರುಗಳ ಮಾರ್ಗದರ್ಶನದಂತೆ ಸಮಾಜ ಸೇವೆ ಕೆಲಸಗಳನ್ನು ಮಾಡುವ ಜೊತೆಗೆ ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಿಂದ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಜಾಪಿತ ಬ್ರಹ್ಮಾಕುಮಾರೀಸ್‌ನ ಸಂಚಾಲಕಿ ಭಾಗ್ಯ ಮಾತನಾಡಿ, ಸಾಹಸ- ಸಾಧನೆ ಇದ್ದರೆ ಪರಮಾತ್ಮನ ಅಶೀರ್ವಾದ ಇರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಸಾಧನೆ ಮಾಡುವುದು ಅಗತ್ಯ ಎಂದು ತಿಳಿಸಿದರು.ಒಳ್ಳೆಯ ಆಚಾರ- ವಿಚಾರಗಳು ಕೇಳುವುದಷ್ಟಕ್ಕೇ ಸೀಮಿತವಾಗದೇ ಇವುಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಂಡಾಗ ಮೌಲ್ಯ ಹೆಚ್ಚಾಗುತ್ತದೆ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಮುನಿಶ್ರೀಗಳಾದ ಜಯೇಶ್ ಮುನಿ, ಭವ್ಯ ಮುನಿ, ಸಂಯೋಜಕರಾದ ಪುಷ್ವರಾಜ್‌ ಗಾಧಿಯಾ, ತೆರಾಪಂಥ್‌ ಟ್ರಸ್ಟ್‌ ಅಧ್ಯಕ್ಷ ಅಶೋಕ್‌ಜೀ ದೋಸಿ, ಮಹಾ ಸಭಾ ಕಾರ್ಯಕಾರಿಣಿ ಸದಸ್ಯ ಮಾಣಿಕ್‌ಚಂದ್‌ ಗಾಧಿಯಾ, ಭರತ್ ಬರ್‍ಲೋಟಾ, ಸಜನ್‌ರಾಜ್ ಪಿರಗಲ್, ಅಣುವ್ರತ್ ಸಮಿತಿಯ ಮಾಜಿ ಅಧ್ಯಕ್ಷ ಲಾಲ್‌ಚಂದ್‌ಜಿ ಬನ್ಸಾಲಿ, ಮಹಿಳಾ ಮಂಡಲ ಅಧ್ಯಕ್ಷೆ ಗುಣವತಿ ನಹರ್, ಜಯೆಶ್‌ ಗಾಧಿಯಾ, ರಾಕೇಶ್‌ ಕವಾಡಿಯಾ, ಕಿಶೋರ್ ಭೋತ್ರ, ಚಂದ್ರಗಾಧಿಯಾ,ಕಿಶೋರ್ ಆಚಾ, ನಗರಸಭೆ ಸದಸ್ಯ ವಿಫುಲ್‌ಕುಮಾರ್‌ಜೈನ್ ಉಪಸ್ಥಿತರಿದ್ದರು. 16 ಕೆಸಿಕೆಎಂ 3ಚಿಕ್ಕಮಗಳೂರಿನ ತೆರಾಪಂಥ್ ಭವನದಲ್ಲಿ ಅಣುವ್ರತ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಅಣುವ್ರತ್‌ ಕ್ರಿಯೋಟಿವಿಟಿ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಪ್ರಜಾಪಿತ ಬ್ರಹ್ಮಾಕುಮಾರೀಸ್‌ನ ಸಂಚಾಲಕಿ ಭಾಗ್ಯ ಅವರು ಬಹುಮಾನ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!