ಉದ್ಯಮಿ ಮೈಲಾಪುರಗೆ ಕುಶಾಗ್ರಮತಿ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jul 23, 2026, 01:30 AM IST
ಫೋಟೋ- ಖರ್ಗೆ ಅವಾರ್ಡ್‌ | Kannada Prabha

ಸಾರಾಂಶ

Businessperson Mylapore Awarded Acumen Award

-ಡಾ.ಮಲ್ಲಿಕಾರ್ಜುನ ಖರ್ಗೆ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಹವಾ ಮಲ್ಲಿನಾಥ ಮಹಾರಾಜರು ಚಾಲನೆ

----

ಕನ್ನಡಪ್ರಭ ವಾರ್ತೆ ಕಲಬುರಗಿ

ಡಾ. ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ನಗರದ ಸುಪರ ಮಾರುಕಟ್ಟೆ ಕೆಕೆಸಿಸಿಐ ಯ ಶ್ರೀನಿವಾಸರಾವ್‌ ರಘೋಜಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ರಾಘವೇಂದ್ರ ಮೈಲಾಪುರ ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕುಶಾಗ್ರಮತಿ ಖರ್ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ಮಯೋಗಿ ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 85ನೇ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಹವಾ ಮಲ್ಲಿನಾಥ ಮಹಾರಾಜರು ಚಾಲನೆ ನೀಡಿದರು.

ಶ್ರೀಶರಣಬಸವೇಶ್ವರ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಗುವಿವಿ ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ, ಶರಣಬಸಪ್ಪಾ ಪಪ್ಪಾ, ರಾಜು ದೇಶಮುಖ, ಲಕ್ಷ್ಮೀ ನಾರಾಯಣ ಮನೋಕರ್ ಭಾಗವಹಿಸಿದ್ದರು.

ವ್ಯಾಪಾರ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಕೈಗೊಂಡ ಗಣನಿಯ ಸಾಧನೆಗಾಗಿ ಹಿರಿಯ ಉದ್ಯಮಿ ರಾಘವೇಂದ್ರ ಮೈಲಾಪುರ ಮತ್ತು ವಿವಿಧ ಕ್ಷೇತ್ರಗಳ ಸಾಧಕರಾದ ಉಮಾಕಾಂತ ನಿಗ್ಗುಡಗಿ, ಡಾ.ಶಿವಪುತ್ರಪ್ಪ ಹರವಾಳ, ಪ್ರಭಾಕರ ಜೋಶಿ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಹಿರಿಯ ಪತ್ರಕರ್ತ ಹಟ್ಟಿ ನಜೀರ್ ಮಿಯಾನ್, ಡಾ.ಲಕ್ಷ್ಮೀ ಪಾಟೀಲ ಮಾಕಾ, ವೈಷ್ಣವಿ ಎಸ್.ಅಹಂಕಾರಿ, ಸರೇಖಾ ಹೊನಗುಂಟಾ, ಸೋಮಶೇಖರ ಬಣಗಾರ ಸೊನ್ನ, ದಯಾನಂದ ಮನೋಕರ್, ಶಿವು ಹಳ್ಳಿಖೇಡ ಅವರಿಗೆ ಕುಶಾಗ್ರಮತಿ ಖರ್ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷ ಶಾಂತರೆಡ್ಡಿ ಪೇಠಶೀರೂರ ಅವರು ಪ್ರಸ್ತಾವಿಕವಾಗಿ ಸಂಘದ ಉದ್ದೇಶ ಮತ್ತು ಕಳೆದ ಎರಡು ದಶಕಗಳಿಂದ ಕೈಗೊಳ್ಳುತ್ತಿರುವ ಕಾರ್ಯಕ್ರಮದ ಕುರಿತು ಮಾತನಾಡಿದರು.

ಹೋರಾಟಗಾರ ಲಕ್ಷ್ಮಣ ದಸ್ತಿ, ಉಮಾಕಾಂತ ನಿಗ್ಗುಡಗಿ, ಬಸವರಾಜ ದೇಶಮುಖ, ಶರಣು ಪಪ್ಪಾ ಮತ್ತು ಪ್ರೊ. ಶಶಿಕಾಂತ ಉಡಿಕೇರಿ ಅವರು, ಡಾ.ಮಲ್ಲಿಕಾರ್ಜುನ ಖರ್ಗೆ ಅವರು, ಈ ಭಾಗದ ಕಲ್ಯಾಣಕ್ಕಾಗಿ ಕೈಗೊಂಡ ಕೊಡುಗೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಡಾ.ಖರ್ಗೆ ಅವರ ಜನಪರ ಕಾಳಜಿ, ದೂರದೃಷ್ಠಿಯಿಂದ ಕಲಂ 371 ಜೆ ಸಂವಿಧಾನಿಕ ಸೌಲಭ್ಯ ನಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಗುವಂತಾಗಿದೆ ಎಂದು ಖರ್ಗೆಯವರಿಗೆ ಅಭಿನಂದಿಸಿದರು.

ಫೋಟೋಸುಪರ ಮಾರುಕಟ್ಟೆ ಕೆಕೆಸಿಸಿಐ ಯ ಶ್ರೀನಿವಾಸರಾವ್‌ ರಘೋಜಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ರಾಘವೇಂದ್ರ ಮೈಲಾಪುರ ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕುಶಾಗ್ರಮತಿ ಖರ್ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲಾ ಮಕ್ಕಳಿಗಿಲ್ಲ ಪಠ್ಯಪುಸ್ತಕ ಭಾಗ್ಯ!
ಯುಗ್ಮಾ ಟೆಕ್‌ಫೆಸ್ಟ್- ರಾಷ್ಟ್ರಮಟ್ಟದ ಎಐ ಹ್ಯಾಕಥಾನ್‌