Cabinet expansion likely over the weekend: Minister MB Patil
ಸಂಪುಟದಲ್ಲಿ ಹೊಸಬರಿಗೆ ಆದ್ಯತೆ
---
-ಡಾ. ವೀರಬಸವಂತರೆಡ್ಡಿ ಪಾಟೀಲರ ಪುಣ್ಯಸ್ಮರಣೋತ್ಸವ ಸಮಾರಂಭ
----
ಕನ್ನಡಪ್ರಭ ವಾರ್ತೆ ಕಲಬುರಗಿ
ಸಂಸದ್ ಅಧಿವೇಶನ, ದೆಹಲಿ ಹೋರಾಟ ಹಿನ್ನಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಅಲ್ಪದಿನ ಮುಂದೂಡಲಾಗಿದೆ, ಬಹುಶಃ ಮೂರು ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಇಂಗಿತ ವ್ಯಕ್ತಪಡಿಸಿದ್ದಾರೆ.
ಯಾದಗಿರಿಯಲ್ಲಿ ಬುಧವಾರ ನಡೆಯಲಿರುವ ಡಾ. ವೀರಬಸವಂತರೆಡ್ಡಿ ಪಾಟೀಲರ ಪುಣ್ಯಸ್ಮರಣೋತ್ಸವದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಪಾಟೀಲರು ಕಲಬರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವ ಸಂಪುಟದ ಬಗ್ಗೆ ನಮ್ಮ ನಾಯಕರು ನಿರ್ಧಾರ ಮಾಡುತ್ತಾರೆ, ನೀಟ್ ಪರೀಕ್ಷೆ ಪಶ್ನೆ ಪತ್ರಿಕೆ ಹಿನ್ನೆಲೆ ಪ್ರತಿಭಟನೆ ನಡೆದಿದ್ದು ಅವರೆಲ್ಲರೂ ಕಾರ್ಯಮಗ್ನರಾಗಿದ್ದಾರೆ. ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿಯವರನ್ನು ಅಮಾನುಷವಾಗಿ ಪೋಲಿಸರು ನಡೆಸಿಕೊಂಡಿದ್ದಾರೆ
ಸದ್ಯ ಸಂಸತ್ ಅಧಿವೇಶನದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು, ವೇಣುಗೋಪಾಲ ಭಾಗಿಯಾಗಿದ್ದಾರೆ, ವಾರಾಂತ್ಯ ಅಥವಾ ರಜಾ ದಿನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ಸಚಿವ ಸಂಪುಟದಲ್ಲಿ ಹೊಸಬರಿಗೆ ಮತ್ತು ಯುವಕರಿಗೆ ಆದ್ಯತೆ ಕೊಡಲಾಗುತ್ತಿದೆ. ಸರ್ಕಾರದಲ್ಲಿ ಯುವಕರು ಬೇಕು, ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ಹೊಸ ಡಿಸಿಎಂ ಸ್ಥಾನಗಳ ಸೃಷ್ಟಿಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ದೆಹಲಿಯಲ್ಲಿ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಪಾಟೀಲರು, ಪ್ರಜಾಪ್ರಭುತ್ವ ವಿರೋಧಿ ಧೋರಣೆ ಕೇಂದ್ರದಲ್ಲಿ 2014 ರಿಂದ ನಡೆಯುತ್ತಿದೆ. ಒಳ್ಳೆ ದಿನಗಳು ಬರುತ್ತೆ ಅಂತಾ ಹೇಳಿದರು.
ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದರು. ಆದರೂ ಉದ್ಯೋಗ ಸೃಷ್ಟಿಯಾಗಿಲ್ಲ , ಯುವಕರಿಗೆ ಉದ್ಯೋಗ ಲಭಿಸುತ್ತಿಲ್ಲ ಎಂದು ದೂರಿದರು.
ಡಾಲರ್ ಬಗ್ಗೆ ಪ್ರಧಾನಿ ಹೇಳಿದ್ದರು, ಡಾಲರ್ ಒಂದು ದೇಶದ ಆರ್ಥಿಕ ನೀತಿ ತೋರಿಸುತ್ತದೆ, ನೋಡಿದ್ರೆ ಪ್ರಧಾನಿ ಎಷ್ಟು ದುರ್ಬಲರಾಗಿದ್ದಾರೆಂದು ಗೊತ್ತಾಗುತ್ತದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದ ಎಷ್ಟು ಮಕ್ಕಳು ಜೀವ ಕಳೆದುಕೊಂಡರು. ಸುಪ್ರೀಂಕೋರ್ಟ್ ಚೀಫ್ ಜಸ್ಟಿಸ್ ಜಿರಳೆಗಳು ಎಂದು ಕರೆದರು.
24 ಕೋಟಿ ಉದ್ಯೋಗ ಕೊಡಿಸಿಲ್ಲಾ , ಪಕೋಡಾ ಮಾರಿ ಅಂದ್ರು, ಅದನ್ನ ಮಾಡಲಿಲ್ಲ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಪ್ರಧಾನಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಬೇರೆಯವರು ಹೇಳುತ್ತಾರೆ. ಯುವಕರನ್ನ ಕರೆದು ಮಾತನಾಡಲು ಮೋದಿ ಅವರಿಗೆ ಆಗೋದಿಲ್ವಾ? ಎಂದು ಪ್ರಶ್ನಿಸಿದರು.
ಟಿಎಂಸಿ ಆಯ್ತು ಇದೀಗ ಶರದ್ ಪವಾರ್ ಹಿಂದೆ ಬಿದಿದ್ದಾರೆ, ಒನ್ ನೇಶನ್ ಒನ್ ಎಲೆಕ್ಷನ್ ಮಾಡಿ ಸರ್ವಾಧಿಕಾರಿಯಾಗಲು ಹೋಗುತ್ತಿದ್ದಾರೆ. ಬೇರೆ ಬೇರೆ ಪಕ್ಷದಲ್ಲಿದ್ದಾಗ ಭ್ರಷ್ಟರು ಅಂತಾ ಬಿಜೆಪಿಯವರೇ ಆರೋಪಿಸಿದವರು ಮುಂದೆ ಅವರು ಬಿಜೆಪಿ ಸೇರಿದಾಗ ಸ್ವಚ್ಚವಾಗಿ ಬಿಡ್ತಾರೆಂದು ಪಾಟೀಲರು ಲೇವಡಿ ಮಾಡಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಆರೋಪ ಬಂದಾಗ ಕೇಂದ್ರದಲ್ಲಿ ರಾಜೀನಾಮೆ ಪಡೆದಿದ್ದೇವೆ. ಈಗಲೂ ಆರೋಪ ಬಂದಿದೆ, ಶಿಕ್ಷ ಸಚಿವರ ರಾಜೀನಾಮೆ ಪಡೆಯಲೆಂದು ಪಾಟೀಲ್ ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.