ಬೆಲೆ ಏರಿಕೆ ನಡುವೆಯೂ ಖರೀದಿ ಭರಾಟೆ!

KannadaprabhaNewsNetwork |  
Published : Sep 14, 2026, 01:45 AM IST
ಪೋಟೊ: 13ಎಸ್‌ಎಂಜಿಕೆಪಿ02ಶಿವಮೊಗ್ಗದ ಸೈನ್ಸ್‌ ಮೈದಾನದಲ್ಲಿ ಮಾರಾಟಕ್ಕಿರುವ ಗಣೇಶ್‌ ಮೂರ್ತಿಗಳು. | Kannada Prabha

ಸಾರಾಂಶ

ಗೌರಿ ಗಣೇಶನ ಸ್ವಾಗತಕ್ಕೆ ಶಿವಮೊಗ್ಗ ನಗರ ಸಂಭ್ರಮದಿಂದ ಸಜ್ಜಾಗಿದೆ. ಗಣಪನನ್ನು ಕರೆತರಲು ಸಿದ್ಧತೆಗಳು ನಡೆದಿದ್ದು, ಮಾರುಕಟ್ಟೆಯೂ ಜನರಿಂದ ಗಿಜಿಗುಡುತ್ತಿತ್ತು. ಗಣೇಶನ ಮೂರ್ತಿ ಹಾಗೂ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗೌರಿ ಗಣೇಶನ ಸ್ವಾಗತಕ್ಕೆ ಶಿವಮೊಗ್ಗ ನಗರ ಸಂಭ್ರಮದಿಂದ ಸಜ್ಜಾಗಿದೆ. ಗಣಪನನ್ನು ಕರೆತರಲು ಸಿದ್ಧತೆಗಳು ನಡೆದಿದ್ದು, ಮಾರುಕಟ್ಟೆಯೂ ಜನರಿಂದ ಗಿಜಿಗುಡುತ್ತಿತ್ತು. ಗಣೇಶನ ಮೂರ್ತಿ ಹಾಗೂ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಶಿವಮೊಗ್ಗ ನಗರದ ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಬಿ.ಎಚ್. ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಹಬ್ಬಕ್ಕೆ ಹೂ- ಹಣ್ಣು ಮತ್ತು ಪೂಜಾ ಸಾಮಗ್ರಿಗಳ ಖರೀದಿಯ ಭರಾಟೆ ಕಂಡುಬಂತು. ದಿನಸಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ಕಂಡುಬಂದಿತು.

ಪ್ರತಿ ಬಡಾವಣೆಗಳಲ್ಲೂ ಗಣಪತಿ ಕೂರಿಸಲು ತಯಾರಿ ನಡೆಯುತ್ತಿದ್ದು, ಮನೆಗಳಲ್ಲೂ ಗೌರಿ-ಗಣೇಶನ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಲವು ಕಡೆ ಆಕರ್ಷಕ ಗಣಪತಿ ಪೆಂಡಾಲ್ ಹಾಗೂ ಮಂಟಪಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಚಕ್ಕುಲಿ, ಕೋಡುಬಳೆ, ಕಡುಬು, ಉಂಡೆಗಳು, ಸಿಹಿ ತಿನಿಸುಗಳ ತಯಾರಿ ಭರ್ಜರಿಯಾಗಿಯೇ ನಡೆದಿದೆ.

ಹಬ್ಬದ ಪ್ರಯುಕ್ತ ದೂರದ ಊರುಗಳಲ್ಲಿ ನೆಲೆಸಿರುವವರು ಊರಿಗೆ ಬರುತ್ತಿದ್ದಾರೆ. ಹೀಗಾಗಿ ರೈಲು, ಬಸ್ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಪೊಲೀಸ್ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಿದೆ.

ಹಬ್ಬದ ಹಿನ್ನೆಲೆ ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಮಾರುಕಟ್ಟೆಯಲ್ಲಿ ಕೆ.ಜಿ ಸೇಬಿಗೆ 200 ರು., ದಾಳಿಂಬೆ ಕೆ.ಜಿಗೆ 150 ರು., ಕೆ.ಜಿ ದ್ರಾಕ್ಷಿ ಬೆಲೆ 200 ರು., ಮೋಸಂಬಿ ಕೆ.ಜಿ ಗೆ 80 ರು., ಕಿತ್ತಳೆ ಕೆ.ಜಿಗೆ 200 ರು. , ಬಾಳೆ ಹಣ್ಣಿಗೆ 100 ರು. ದರ ನಿಗದಿ ಮಾಡಲಾಗಿತ್ತು. ವ್ಯಾಪಾರಸ್ಥರು ಎಲ್ಲ ಹಣ್ಣುಗಳನ್ನು ಕೂಡಿಸಿ ಪ್ಯಾಕೇಜ್ ರೂಪದಲ್ಲಿ ಪೂಜೆಗಾಗಿ ಸಿದ್ಧಪಡಿಸಿದ್ದ ಬುಟ್ಟಿಗೆ 150 ರು. ದರ ನಿಗದಿ ಮಾಡಿದ್ದರು.

ಎರಡು ಬಾಳೆ ದಿಂಡಿಗೆ 30 ರು., ಮಾವಿನ ತೋರಣಕ್ಕೆ 10 ರು. ನಿಗದಿ ಮಾಡಿದ್ದರು. ಮಲ್ಲಿಗೆ ಹೂವು ಒಂದು ಮಾರು 100 ರು., ಮೊಗ್ಗಿನ ಒಂದು ಹಾರಕ್ಕೆ 300 ರು., ಕೆ.ಜಿ ಚೆಂಡು ಹೂವಿನ ಬೆಲೆ 200 ರು., ತೆಂಗಿನ ಕಾಯಿ ಬೆಲೆ 25 ರು. ಇತ್ತು.

ಇನ್ನೂ ತರಕಾರಿ ಬೆಲೆ ಕೂಡ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ. ಕೆ.ಜಿ ಟೊಮೆಟೊಗೆ 20 ರು., ಕೆ.ಜಿ ಆಲೂಗಡ್ಡೆಗೆ 40 ರು., ಹೀರೇಕಾಯಿ ಕೆ.ಜಿಗೆ 60 ರು., ಸೌತೆಕಾಯಿ ಕೆ.ಜಿಗೆ 60 ರು., ಬೀಟ್ರೂಟ್ ಕೆ.ಜಿಗೆ 50 ರು., ಈರುಳ್ಳಿ ಬೆಲೆ ಕೆ.ಜಿಗೆ 60 ರು., ನುಗ್ಗೆಕಾಯಿ ಕೆ.ಜಿಗೆ 80 ರು. ಹಾಗೂ ಸೊಪ್ಪಿನ ಕಟ್ಟು ಒಂದಕ್ಕೆ 10 ರು. ಇತ್ತು. ಪೂಜಾ ಸಾಮಗ್ರಿಗಳ ಖರೀದಿಯೂ ಜೋರಾಗಿತ್ತು.

ಪೋಟೊ: 13ಎಸ್‌ಎಂಜಿಕೆಪಿ03ಶಿವಮೊಗ್ಗ ನಗರದ ಹೂವಿನ ಮಾರುಕಟ್ಟೆಯಲ್ಲಿ ಗೌರಿ ಗಣೇಶ ಹಬ್ಬ ಹಿನ್ನೆಲೆ ಹೂವು ಖರೀದಿಸುತ್ತಿರುವ ಜನ.---------------

ಬಾಕ್ಸ್‌.....ಗಣೇಶ ಮೂರ್ತಿಗಳ ಖರೀದಿ ಜೋರು

ಮಲೆನಾಡು ಶಿವಮೊಗ್ಗದಲ್ಲಿ ಬೆಲೆ ಏರಿಕೆ ನಡುವೆಯೂ ಹೆಚ್ಚಿದ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಗಣೇಶ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭ ಹಿನ್ನೆಲೆ ಗಣೇಶ ಮೂರ್ತಿಗಳ ಖರೀದಿಸಲು ಶಿವಮೊಗ್ಗ ಜನತೆ ಮುಂದಾಗಿದ್ದರು.

ಶಿವಮೊಗ್ಗದ ಸೈನ್ಸ್ ಫೀಲ್ಡ್, ಗೋಪಿ ವೃತ್ತ, ಜೈಲ್ ವೃತ್ತ, ವಿನೋಬನಗರ ಸೇರಿದಂತೆ ಹಲವೆಡೆ ಮಕ್ಕಳು ಜೊತೆ ಪೋಷಕರು, ಯುವಕರ ತಂಡಗಳಿಂದ ಗಣೇಶ ಮೂರ್ತಿ ಭರ್ಜರಿ ಖರೀದಿ ನಡೆಯಿತು.

ಈ ಬಾರಿ ಗಣೇಶ ಮೂರ್ತಿಗಳ ಬೆಲೆಯಲ್ಲೂ ಏರಿಕೆ ಕಂಡಿದ್ದು, 2 ರಿಂದ 3 ಅಡಿಯ ಗಣೇಶ ಮೂರ್ತಿಗಳಿಗೆ 6 ರಿಂದ 8 ಸಾವಿರದವರೆಗೆ ದರ ನಿಗದಿ ಮಾಡಲಾಗಿದೆ. 4 ಅಡಿ ಮೇಲ್ಪಟ್ಟ ವಿಗ್ರಹಗಳಿಗೆ 8 ರಿಂದ15 ಸಾವಿರದವರೆಗೂ ಮಾರಾಟ ಬೆಲೆ ಏರಿಕೆ ನಡುವೆಯೂ ಗಣೇಶ ಮೂರ್ತಿಗಳನ್ನು ಕೊಂಡೊಯ್ಯುತ್ತಿರುವ ಜನರು. 5 ರಿಂದ 6 ಅಡಿ ಮೂರ್ತಿಗೆ 35 ರಿಂದ 40 ಸಾವಿರ ರು.ವರೆಗೆ ಮಾರಾಟ ಮಾಡಲಾಗುತ್ತಿದೆ.

-------------------

ಪೋಟೊ: 13ಎಸ್‌ಎಂಜಿಕೆಪಿ02

ಶಿವಮೊಗ್ಗದ ಸೈನ್ಸ್‌ ಮೈದಾನದಲ್ಲಿ ಮಾರಾಟಕ್ಕಿರುವ ಗಣೇಶ ಮೂರ್ತಿಗಳು.

--------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣಪ ಉತ್ಸವಕ್ಕೆ ಖರೀದಿ ಭರಾಟೆ ರಂಗು
ಭದ್ರಾವತಿಯಲ್ಲಿ ಗೌರಿ ಹಬ್ಬಕ್ಕೆ ಖರೀದಿ ಜೋರು