ಬಿಜೆಪಿ ಅಪಪ್ರಚಾರಕ್ಕೆ ಉಪ ಚುನಾವಣೆ ಫಲಿತಾಂಶವೇ ತಕ್ಕ ಉತ್ತರ : ಶಾಸಕ ಆರ್.ಬಸನಗೌಡ ತುರುವಿಹಾಳ

KannadaprabhaNewsNetwork | Updated : Nov 24 2024, 12:28 PM IST

ಸಾರಾಂಶ

ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಯಚೂರಿನ ಅಲ್ಲಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

  ಮಸ್ಕಿ : ಕಳೆದ ನ.13 ರಂದು ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿಯಾಗಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಪಟ್ಟಣದ ಚೆನ್ನಮ್ಮನ ವೃತ್ತದಲ್ಲಿ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರುವಿಹಾಳ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಹಚ್ಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶಾಸಕ ಆರ್.ಬಸನಗೌಡ ತುರುವಿಹಾಳ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ. ಆದ್ದರಿಂದ ಜನರು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಬಿಜೆಪಿ ಪಕ್ಷದವರು ಏನೇ ಅಪಪ್ರಚಾರ ಮಾಡಿದರೂ ಜನ ಅವರನ್ನು ನಂಬುವುದಿಲ್ಲ ಎಂದರು.

ರಾಜ್ಯದಲ್ಲಿ ಐದು ಗ್ಯಾರಂಟಿಗಳು ಸಮರ್ಪಕವಾಗಿ ಅರಹ ಫಲಾನುಭವಿಗಳಿಗೆ ತಲುಪಿರುವುದರಿಂದ ಜನರು ನಮ್ಮ ಮೇಲೆ ಇನ್ನಷ್ಟು ಹೆಚ್ಚಿಗೆ ನಂಬಿಕೆಯನ್ನು ಇಟ್ಟಿದ್ದಾರೆ. ಆದ್ದರಿಂದ ಮೂರು ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯವನ್ನು ತಂದುಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರು ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಕೊಟ್ಟು ರಾಜ್ಯದ ಜನರ ಋಣವನ್ನು ತೀರಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ್, ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ್, ಅದಾನಗೌಡ, ಮಲ್ಲಯ್ಯ ಬಳ್ಳಾ , ಹನುಮಂತಪ್ಪ ವೆಂಕಟಾಪುರ್, ಮಲ್ಲನಗೌಡ ಸುಂಕನೂರ್, ವಿರೇಶ್ ಪಾಟೀಲ್, ಬಿ.ಜಿ. ನಾಯಕ್, ಕರಿಯಪ್ಪ ಹಾಲಾಪುರು, ಕೃಷ್ಣ ಚಿಗರಿ, ಆನಂದ ವೀರಾಪುರ್, ನಾಗಭೂಷಣ ಸುರೇಶ್ ಬ್ಯಾಳಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.ಸಿದ್ದು ಸರ್ಕಾರದ ಜನಪ್ರಿಯ ಆಡಳಿತಕ್ಕೆ ಈ ಗೆಲುವು ಸಾಕ್ಷಿಲಿಂಗಸುಗೂರು: ಕರ್ನಾಟಕ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದರಿಂದ ಬ್ಲಾಕ್ ಕಾಂಗ್ರೆಸ್‌ನಿಂದ ಪಟ್ಟಣದ ಗಡಿಯಾರ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಮಾತನಾಡಿ, ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವ ದಲ್ಲಿ ಡಿ.ಕೆ.ಶಿವಕುಮಾರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ಬಡ ಜನರಿಗೆ ಆಸರೆ ಆಗಿದ್ದರಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಅಭೂತ ಪೂರ್ವ ಗೆಲುವು ದಾಖಲಿಸಿರುವುದು ಸರ್ಕಾರದ ಜನಪ್ರಿಯ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷ ಬಾಬಾರೆಡ್ಡಿ ಮುನ್ನೂರು, ಖಾದರ ಪಾಶ, ರುದ್ರಪ್ಪ ಬ್ಯಾಗಿ, ಕುಪ್ಪಣ್ಣ ಕೊಡ್ಲಿ, ಪ್ರಭುಸ್ವಾಮಿ ಅತ್ತನೂರು, ಮಹ್ಮದ್ ರಫಿ, ಯಮನಪ್ಪ ದೇಗಲಮಡಿ, ಬಸವರಾಜ ಯತಗಲ್, ಪರಸಪ್ಪ ಹುನಕುಂಟಿ, ಹಾಜಿಬಾಬಾ ಕರಡಕಲ್, ಶರಣಬಸವ ಮೇಟಿ, ಸಂಜೀವಪ್ಪ ಹುನಕುಂಟಿ, ಮಂಜನಾಥ ಆನಾಹೊಸೂರು, ಬಾಲನಗೌಡ ಸೇರಿದಂತೆ ಇದ್ದರು.ಸುಳ್ಳಿನ ಮುಡಾ ಹಗರಣಕ್ಕೆ ಫಲ ಸಿಗಲಿಲ್ಲ

ಮುದಗಲ್: ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ,ಪಟಾಕಿ ಸಿಡಿಸಿ, ಸಂಭ್ರಮದಿಂದ ಶನಿವಾರ ವಿಜಯೋತ್ಸವ ಆಚರಣೆ ಮಾಡಿದರು.ಈ ವೇಳೆ ಮಾತನಾಡಿದ ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪಾರನಂದಿಹಾಳ, ರಾಜ್ಯದಲ್ಲಿ ಅಹಿಂದ ವರ್ಗವನ್ನು ಹಿಯಾಳಿಸಿರುವುದು. ಸಿಎಂ ಸಿದ್ರಾಮಯ್ಯ ಅವರ ಸುಳ್ಳಿನ ಮುಡಾ ಹಗರಣವನ್ನು ಹಬ್ಬಿಸಿದರೂ ಫಲಸಿಗದೆ. ಬಿಜೆಪಿಗರು ಸೋತು ಸುಣ್ಣವಾಗಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾದ ಡಿ.ಕೆ. ಶಿವಕುಮಾರ್‌ ಸತತ ಪ್ರಯತ್ನದಿಂದ ಹಾಗೂ ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳೇ ಗೆಲುವಿಗೆ ಸಹಕಾರಿಯಾಗಿವೆ ಎಂದರು.ಈ ಸಮಯದಲ್ಲಿ ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್ ಪುರಸಭೆ ಸದಸ್ಯ ಹನಮಂತ ವಾಲ್ಮೀಕಿ, ಮೈಬೂಬು ಕಡ್ಡಿಪುಡಿ, ತಸ್ಲಿಂ ಮುಲ್ಲಾ, ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ತಮ್ಮಣ್ಣ ಗುತ್ತೇದಾರ, ಬ್ಲಾಕ್ ಮಾಜಿ ಅಧ್ಯಕ್ಷ ದಾವೂದ್ ಸಾಬ, ಕಾರ್ಯಕರ್ತರಾದ ಹುಸೇನ್ ಅಲಿ, ಖಾಲೀದ್ , ನಂದಪ್ಪ ಕತ್ತಿ, ಸೈಯದ್ ನ್ಯಾಮತ್ಖಾದ್ರಿ, ಶೇಖ್ಹುಸೇನ್ಷರೀಪ್, ಖದೀರ ಪಾನವಾಲೆ, ಅಮರಯ್ಯ ಬ್ಯಾಲಿಹಾಳ,ರಾಘುವೇಂದ್ರ ಕುದರಿ, ಸತೀಶ್ ಬೋವಿ,ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಚಾಂದ್ ಪಾಶ, ಮೌನೇಶ. ಸೇರಿದಂತೆ ಕಾಂಗ್ರೇಸ್ ಪಕ್ಷದ ಅಭಿಮಾನಿಗಳು ಸೇರಿದಂತೆ ಇನ್ನಿತರರು ಇದ್ದರು.

Share this article