ಕನ್ನಡಪ್ರಭವಾರ್ತೆ ಚನ್ನಪಟ್ಟಣ
ಮುಂದಿನ ತಿಂಗಳು ೭ರಂದು ಗಣೇಶನ ಚತುರ್ಥಿ ಇದ್ದು, ಅದಕ್ಕಾಗಿ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಯುವಜನರು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದು, ಈ ಹೊತ್ತಿನಲ್ಲೇ ಗಣೇಶ ಮೂರ್ತಿ ವಿತರಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿವೆ.
ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಿಗಳು ಗಣೇಶಮೂರ್ತಿ ವಿತರಣೆಯ ಮೂಲಕ ಜನರನ್ನು ಸೆಳೆಯುವ ತಂತ್ರಗಾರಿಕೆ ನಡೆಸಿದ್ದಾರೆ. ಒಂದು ಕಡೆ ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಚತುರ್ಥಿಗೆ ಮೂರ್ತಿಗಳನ್ನು ವಿತರಿಸಲು ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ತಯಾರಿ ನಡೆಸಿದ್ದರೆ, ಮಗದೊಂದು ಕಡೆ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮತ್ತೊಂದು ಬಾರಿ ಗಣೇಶನ ಮೂರ್ತಿಗಳನ್ನು ವಿತರಿಸಲು ಮುಂದಾಗಿದ್ದಾರೆ.ಸಿಪಿವೈರಿಂದ ೧೦೦೦ ಮೂರ್ತಿ ವಿತರಣೆ:
೭೦೦ ಮೂರ್ತಿ ವಿತರಣೆಗೆ ಜಯಮುತ್ತು ಸಜ್ಜು:
ಗಣೇಶನ ಮೂರ್ತಿ ವಿತರಣೆ ಕುರಿತು ಈಗಾಗಲೇ ಎರಡೂ ಪಕ್ಷಗಳವರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಹರಿಯಬಿಟ್ಟಿದ್ದು, ಯಾವ ಭಾಗದವರು ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇನ್ನು ಗಣೇಶ ಮೂರ್ತಿಗಳ ವಿತರಣೆಯ ಹಿಂದೆ ಯುವಕರ ಸಂಘಟನೆಯ ಉದ್ದೇಶವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಯುವಕರನ್ನು ಸೆಳೆಯುವ ತಂತ್ರಗಾರಿಕೆ ಹಣೆಯಲಾಗಿದೆ. ಗಣೇಶ ವಿಗ್ರಹ ಪಡೆಯಲು ಬರುವ ಯುವಕರ ಮಾಹಿತಿ ಸಂಗ್ರಹಿಸಲು ತಂತ್ರಗಾರಿಕೆ ರೂಪಿಸಲಾಗಿದೆ. ಗಣೇಶ ಮೂರ್ತಿ ಪಡೆಯಲು ಹೆಸರು ನೋಂದಾಯಿಸಲು ಬರುವವರು ಕನಿಷ್ಠ ೧೦ ಜನರ ತಂಡದೊಂದಿಗೆ ಬರಬೇಕು, ಕಡ್ಡಾಯವಾಗಿ ಒಂದಿಬ್ಬರದಾದರೂ ಆಧಾರ್ ಕಾರ್ಡ್‌ಗಳನ್ನು ನೀಡಬೇಕು ಎಂಬ ಷರತ್ತನ್ನು ವಿಧಿಸಲಾಗಿದ್ದು, ಇದರ ಹಿಂದೆ ಯುವ ಪಡೆಯನ್ನು ಸೆಳೆಯುವ ಉದ್ದೇಶವಿರುವುದು ನಿಚ್ಚಳವಾಗಿದೆ.
-ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ‘ನಮ್ಮ ತಾಯಿಯ ಹೆಸರಿನಲ್ಲಿರುವ ಚನ್ನಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ೨೦೦೯ರಿಂದ ಗಣೇಶನ ಮೂರ್ತಿಗಳನ್ನು ವಿತರಿಸುದ್ದೇನೆ. ಕೋವಿಡ್ ನಿಬಂಧನೆಗಳ ಕಾರಣದಿಂದ ಎರಡು ವರ್ಷ ಗಣೇಶನ ಮೂರ್ತಿಗಳನ್ನು ವಿತರಿಸಲಾಗಿರಲಿಲ್ಲ. ಗಣೇಶನ ಮೂರ್ತಿಗಳ ವಿತರಣೆ ಕಾರ್ಯವನ್ನು ನಾನೇನು ಹೊಸದಾಗಿ ಮಾಡುತ್ತಿಲ್ಲ. ಪ್ರತಿವರ್ಷ ಬೇಡಿಕೆ ಬಂದಷ್ಟು ಗಣೇಶನ ಮೂರ್ತಿಗಳನ್ನು ವಿತರಿಸುತ್ತಿದ್ದು, ಈ ವರ್ಷವೂ ವಿತರಿಸಲಾಗುವುದು.’