ಸೆಪ್ಟೆಂಬರ್ ಹೊತ್ತಿಗೆ ಪ್ರತಿ ಮನೆಗೆ ತುಂಗೆ ನೀರು: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Feb 07, 2024, 01:53 AM IST
ಫೋಟೊ: ೬ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ತಾಲೂಕಿನಲ್ಲಿ ಮನೆ, ಮನೆಗೆ ಗಂಗೆ ಯೋಜನೆ ಹಾಗೂ ತಡಸ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಭಾಗಶಃ ಪೂರ್ಣಗೊಂಡಿದೆ.

ಅಕ್ಕಿಆಲೂರಿನಲ್ಲಿ ₹೬.೩೬ ಕೋಟಿ ವೆಚ್ಚದಲ್ಲಿ ಮನೆ, ಮನೆಗೆ ಗಂಗೆ ಯೋಜನೆಗೆ ಭೂಮಿಪೂಜೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ತಾಲೂಕಿನಲ್ಲಿ ಮನೆ, ಮನೆಗೆ ಗಂಗೆ ಯೋಜನೆ ಹಾಗೂ ತಡಸ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಭಾಗಶಃ ಪೂರ್ಣಗೊಂಡಿದ್ದು, ಬರುವ ಆಗಸ್ಟ್ ಇಲ್ಲವೇ ಸೆಪ್ಟೆಂಬರ್ ಹೊತ್ತಿಗೆ ಪ್ರತಿ ಮನೆಗಳಿಗೆ ತುಂಗಭದ್ರಾ ನದಿ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಅಕ್ಕಿಆಲೂರಿನಲ್ಲಿ ₹೬.೩೬ ಕೋಟಿ ವೆಚ್ಚದಲ್ಲಿ ಮನೆ, ಮನೆಗೆ ಗಂಗೆ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮನೆ, ಮನೆಗೆ ಗಂಗೆ ಯೋಜನೆಯ ಅನುಷ್ಠಾನದಿಂದ ಭವಿಷ್ಯದಲ್ಲಿ ಕುಡಿಯುವ ನೀರಿನ ಅಭಾವಕ್ಕೆ ಬ್ರೇಕ್ ಬೀಳಲಿದೆ. ತಾಲೂಕಿನಲ್ಲಿ ಬಹುತೇಕ ಗ್ರಾಪಂಗಳಲ್ಲಿಯೂ ಸಹ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಮುಕ್ತಾಯದ ಹಂತದಲ್ಲಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಳೆಯ ತೀವ್ರ ಕೊರತೆಯಿಂದ ಈ ವರ್ಷ ಹಾನಗಲ್ ತಾಲೂಕಿನ ಜೀವನಾಡಿ ಧರ್ಮಾ ಜಲಾಶಯದಲ್ಲಿಯೂ ನಿರೀಕ್ಷೆಯಷ್ಟು ನೀರಿನ ಸಂಗ್ರಹವಿಲ್ಲದಂತಾಗಿದೆ. ಕೊಳವೆ ಬಾವಿಗಳೂ ಸಹ ಬತ್ತುತ್ತಿವೆ. ಮುಂದಿನ ದಿನಗಳಲ್ಲಿ ನೇರವಾಗಿ ನದಿ ನೀರಿನ ಪೂರೈಕೆಯಿಂದ ಸಮಸ್ಯೆ ಉದ್ಭವಿಸದು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅಕ್ಕಿಆಲೂರಿನಲ್ಲಿ ಒಟ್ಟು ೨೮೯೭ ನಳಗಳಿಗೆ ಸಂಪರ್ಕ ಕಲ್ಪಿಸಿ ನೀರು ಪೂರೈಸಲಾಗುವುದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಮಕ್ಬೂಲ್‌ಅಹ್ಮದ್ ರುಸ್ತುಂಖಾನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೇಕವ್ವ ತಳವಾರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಎಲ್.ಕೆ. ಶೇಷಗಿರಿ, ಮುಖಂಡರಾದ ಸದಾಶಿವ ಬೆಲ್ಲದ, ಮೆಹಬೂಬಅಲಿ ಬ್ಯಾಡಗಿ, ಸತ್ತಾರಸಾಬ ಅರಳೇಶ್ವರ, ಯಾಸೀರಅರಾಫತ್ ಮಕಾನದಾರ, ಖ್ವಾಜಾ ಮೊಹಿದ್ದೀನ್ ಅಣ್ಣಿಗೇರಿ, ನಿಂಗಪ್ಪ ಹಾನಗಲ್, ಬಸಣ್ಣ ಹಾಲಬಾವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ತಳವಾರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಆರ್.ಸಿ. ನೆಗಳೂರ, ಪಿಡಿಒ ಕುಮಾರ ಮಕರವಳ್ಳಿ ಈ ಸಂದರ್ಭದಲ್ಲಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ