ಜೂ. 5ರಂದು ಮುಖ್ಯ ಅಗಲೀಕರಣಕ್ಕೆ ಆಗ್ರಹಿಸಿ ಬ್ಯಾಡಗಿ ಬಂದ್‌

KannadaprabhaNewsNetwork |  
Published : May 31, 2025, 12:48 AM IST
ಮ | Kannada Prabha

ಸಾರಾಂಶ

ಅಗಲೀಕರಣ ವಿರೋಧಿಗಳಿಗೆ ಇನ್ನೂ ಕಾಲ ಮಿಂಚಿಲ್ಲ. ಇನ್ನಾದರೂ ಬದಲಾಗಿ. ಸ್ವಯಂಪ್ರೇರಿತರಾಗಿ, ಸೌಹಾರ್ದಯುತವಾಗಿ ಸರ್ಕಾರದ ನಿಯಮಾನುಸಾರ ಅಗಲೀಕರಣಕ್ಕೆ ಸಹಕರಿಸಬೇಕು.

ಬ್ಯಾಡಗಿ: ಇಲ್ಲಿನ ಮುಖ್ಯರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಜೂ. 5ರಂದು ಮೆಣಸಿನಕಾಯಿ ವ್ಯಾಪಾರ ವಹಿವಾಟು ಸೇರಿದಂತೆ ಬ್ಯಾಡಗಿ ಬಂದ್ ಮಾಡಲಾಗುವುದು. ಅಲ್ಲದೇ ರಸ್ತೆ ಅಗಲೀಕರಣ ಆಗುವ ವರೆಗೂ ಅನಿರ್ದಿಷ್ಟಾವಧಿವರೆಗೆ ಧರಣಿ ನಡೆಸಲಿದ್ದೇವೆ ಎಂದು ಪುರಸಭೆ ಅಧ್ಯಕ್ಷ ವರ್ತಕ ಬಾಲಚಂದ್ರಗೌಡ ಪಾಟೀಲ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಗಮ ಸಂಚಾರಕ್ಕೆ ಗುಣಮಟ್ಟದ ರಸ್ತೆಗಳು ಅತ್ಯವಶ್ಯ. ಆದರೆ ಬ್ಯಾಡಗಿ ಜನತೆಗೆ ಅಂತಹ ಭಾಗ್ಯವನ್ನು ಮುಖ್ಯರಸ್ತೆಯಲ್ಲಿನ ಜನರು ಕಸಿದುಕೊಂಡಿದ್ದಾರೆ. ನನೆಗುದಿಗೆ ಬಿದ್ದಿರುವ ಮುಖ್ಯರಸ್ತೆಯಿಂದ ಬ್ಯಾಡಗಿಯ ಖ್ಯಾತಿ ಕೂಡ ಮಣ್ಣುಪಾಲಾಗುತ್ತಿದೆ. ನಮ್ಮ ತಾಳ್ಮೆ ಪರೀಕ್ಷಿಸಲಾಗುತ್ತಿದೆ. ಇನ್ನು ಮುಂದೆ ಹೋರಾಟದ ರೂಪುರೇಷೆ ಬದಲಾಗಲಿದೆ ಎಂದರು.

ಅಗಲೀಕರಣ ವಿರೋಧಿಗಳಿಗೆ ಇನ್ನೂ ಕಾಲ ಮಿಂಚಿಲ್ಲ. ಇನ್ನಾದರೂ ಬದಲಾಗಿ. ಸ್ವಯಂಪ್ರೇರಿತರಾಗಿ, ಸೌಹಾರ್ದಯುತವಾಗಿ ಸರ್ಕಾರದ ನಿಯಮಾನುಸಾರ ಅಗಲೀಕರಣಕ್ಕೆ ಸಹಕರಿಸಬೇಕು. ಇಲ್ಲದಿದ್ದರೆ ನಮ್ಮ ಪ್ರತಿರೋಧ ಎದುರಿಸುವಂತೆ ಎಚ್ಚರಿಸಿದರು.ವರ್ತಕರ ಸಂಘದ ಬೆಂಬಲ: ವರ್ತಕರ ಸಂಘದ ಕರ‍್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಮಾರುಕಟ್ಟೆಯಲ್ಲಿ ಒಟ್ಟು 1100ಕ್ಕೂ ಹೆಚ್ಚು ಅಂಗಡಿಗಳಿಗೆ ಈ ಬಾರಿ ಅಗಲೀಕರಣ ಹೋರಾಟಕ್ಕೆ ಅಂತಿಮ ಮೊಳೆ ಹೊಡೆಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಧುಮಕಲಿದ್ದೇವೆ. ವರ್ತಕರ ಸಂಘದ ಸಂಪೂರ್ಣ ಬೆಂಬಲವಿದೆ ಎಂದರು.

ನ್ಯಾಯವಾದಿಗಳ ಸಂಘದ ಬೆಂಬಲ: ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೆನೂರ ಮಾತನಾಡಿ, ಕಳೆದ 14 ವರ್ಷದಿಂದ ನಡೆಯುತ್ತಿರುವ ನ್ಯಾಯಸಮ್ಮತ ಹೋರಾಟಕ್ಕೆ ಇಂದಿಗೂ ಬೆಲೆ ಸಿಕ್ಕಿಲ್ಲ ಎಂದರೆ ನಮ್ಮ ವ್ಯವಸ್ಥೆ ಬಗ್ಗೆಯೇ ಅನುಮಾನ ಮೂಡುತ್ತದೆ. ನಮ್ಮದೇ ರಸ್ತೆಗಾಗಿ ಇಷ್ಟೊಂದು ಹೋರಾಟ ಮಾಡಬೇಕಾಗಿರುವುದು ವಿಪರ‍್ಯಾಸ ಎಂದರು.ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿದರು. ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, ನ್ಯಾಯವಾದಿಗಳಾದ ನಿಂಗಪ್ಪ ಬಟ್ಟಲಕಟ್ಟಿ, ಯಶೋಧರ ಅರ್ಕಾಚಾರಿ, ಎಚ್.ಜಿ. ಮುಳುಗುಂದ, ಹರೀಶಕುಮಾರ ರಿತ್ತಿ, ಅಂಗವಿಕಲರ ಸಂಘದ ಅಧ್ಯಕ್ಷ ಪಾಂಡುರಂಗ ಸುತಾರ, ಎ.ಎಂ. ದೊಡ್ಮನಿ, ವಿನಾಯಕ ಕಂಬಳಿ, ಪ್ರದೀಪ್ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇಂದು, ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

ಹಾನಗಲ್ಲ: ತಾಲೂಕಿನ ತಿಳವಳ್ಳಿಯಲ್ಲಿರುವ 110, 33, 11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಮತ್ತು ಲಿಂಕ್‌ಲೈನ್ ಕಾಮಗಾರಿ ಇರುವುದರಿಂದ ಮೇ 31 ಹಾಗೂ ಜೂ. 1ರ ಬೆಳಗ್ಗೆ 10ರಿಂದ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ವಿತರಣಾ ಕೇಂದ್ರದಿಂದ ಪೂರೈಕೆಯಾಗುವ ಕಚವಿ, ಕಿರವಾಡಿ, ಜಾಲಿ, ಕಲಗುಡ್ಡಿ, ಗುಡ್ಡದಮಲ್ಲಾಪುರ, ಪುರಪುಂಡಿಕೊಪ್ಪ, ದುಮ್ಮಿಹಾಳ, ಚಿಕ್ಕಬಾಸೂರ, ಹುಲ್ಲಿಕಟ್ಟಿ, ಹಿರಿಯೂರ ಕೆರೆ ಐಪಿ ಮಾರ್ಗಗಳಿಂದ ಪೂರೈಕೆಯಾಗುವ ಎಲ್ಲ ಹಳ್ಳಿಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಹಾನಗಲ್ಲ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್. ಮರಿಗೌಡರ ತಿಳಿಸಿದ್ದಾರೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ