ಬ್ಯಾಡಗಿ ಮೆಣಸಿನಕಾಯಿ ದರ ಎಂದಿನಂತೆ ಸ್ಥಿರ

KannadaprabhaNewsNetwork |  
Published : Feb 20, 2026, 02:30 AM IST
ಬ್ಯಾಡಗಿ ಮಾರುಕಟ್ಟೆಯಲ್ಲಿ ಕಂಡು ಬಂದ ಮೆಣಸಿನಕಾಯಿ ಚೀಲಗಳು. | Kannada Prabha

ಸಾರಾಂಶ

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ ಒಟ್ಟು 1.61 ಲಕ್ಷ ಮೆಣಸಿಕಾಯಿ ಚೀಲಗಳು ಆವಕಾಗಿದ್ದು ಕಳೆದ ಸೋಮವಾರಕ್ಕಿಂತ 14 ಸಾವಿರ ಚೀಲಗಳಷ್ಟು ಅಧಿಕ ಮೆಣಸಿನಕಾಯಿ ಮಾರುಕಟ್ಟೆಗೆ ಆಗಮಿಸಿ ದರದಲ್ಲಿ ಎಂದಿನಂತೆ ಸ್ಥಿರತೆ ಮುಂದುವರೆದಿದೆ.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ ಒಟ್ಟು 1.61 ಲಕ್ಷ ಮೆಣಸಿಕಾಯಿ ಚೀಲಗಳು ಆವಕಾಗಿದ್ದು ಕಳೆದ ಸೋಮವಾರಕ್ಕಿಂತ 14 ಸಾವಿರ ಚೀಲಗಳಷ್ಟು ಅಧಿಕ ಮೆಣಸಿನಕಾಯಿ ಮಾರುಕಟ್ಟೆಗೆ ಆಗಮಿಸಿ ದರದಲ್ಲಿ ಎಂದಿನಂತೆ ಸ್ಥಿರತೆ ಮುಂದುವರೆದಿದೆ.ಹಂಗಾಮಿನ ಆರಂಭದಲ್ಲಿ ಪ್ರಸಕ್ತ ವರ್ಷದ ಮೆಣಸಿನಕಾಯಿ ಆವಕ ಹೆಚ್ಚು ದಿನಗಳ ಕಾಲ ಮುಂದುವರೆಯುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ವಾರದಿಂದ ವಾರಕ್ಕೆ ಮೆಣಸಿನಕಾಯಿ ಆವಕದಲ್ಲಿ ಗಣನೀಯ ಪ್ರಮಾಣದ ಏರಿಕೆ ಕಾಣುತ್ತಿದೆ. ಹೀಗಾಗಿ ದಲಾಲರು ಮತ್ತು ಖರೀದಿದಾರರಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು ಸುಮಾರು ಇಂದು ಒಟ್ಟು 373 ಖರೀದಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಬ್ಯಾಡಗಿಯತ್ತ ಮುಖ ಮಾಡಿದ ರೈತ: ಮೂರು ತಳಿಯ ಮೆಣಸಿನಕಾಯಿಗೆ ಉತ್ತಮ ದರಗಳು ಸಿಗುತ್ತಿರುವ ಬೆನ್ನಲ್ಲೇ ಪಟ್ಟಣದ ಪ್ರಮುಖ ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಕಡೆಗೆ ಹೆಚ್ಚಿನ ರೈತರು ಮುಖ ಮಾಡಿದ್ದಾಗಿ ತಿಳಿದು ಬಂದಿದೆ. ಕಳೆದ 7 ವಾರದಿಂದ ಸುಮಾರು 12 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕವಾದ ಬಗ್ಗೆ ಮಾರುಕಟ್ಟೆ ಮೂಲಗಳು ದೃಢಪಡಿಸಿದೆ.ಅಂದೇ ಹಣ ಬಡವಡೆ: ಟೆಂಡರ್ ದಿನವೇ ಎಲ್ಲಾ ಮಾಲುಗಳು ಮಾರಾಟ, ಅಂದೇ ರೈತರಿಗೆ ಹಣಕಾಸಿನ ಸೌಲಭ್ಯ, ಸ್ಪರ್ಧಾತ್ಮಕ ದರಕ್ಕಾಗಿ ಇ-ಟೆಂಡರ್ ಸೌಲಭ್ಯ, ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಬಳಕೆ ಪಾರದರ್ಶಕ ವ್ಯಾಪಾರವನ್ನು ಮೆಚ್ಚಿಕೊಂಡಿರುವ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತ ಸಮೂಹ ಮಾರುಕಟ್ಟೆಯತ್ತ ಹರಿದು ಬರುತ್ತಿದೆ. ಗುರುವಾರ ಒಟ್ಟು 1.61.586 ಚೀಲ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಒಟ್ಟು 1.61.586 ಚೀಲಗಳು ಮಾರಾಟಕ್ಕಿದ್ದು. ಇದರಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹ 4569 ಗರಿಷ್ಠ 69099 ಸರಾಸರಿ 48009, ಡಬ್ಬಿ ತಳಿ ಕನಿಷ್ಠ 5689 ಗರಿಷ್ಠ 77786 ಸರಾಸರಿ 51259, ಗುಂಟೂರು ಕನಿಷ್ಠ 1809 ಗರಿಷ್ಟ 18859 ಸರಾಸರಿ 14509 ರು.ಗಳಿಗೆ ಮಾರಾಟವಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟಿ ಕೋಟಿ ಆದಾಯವಿದ್ದರೂ ಬಯಲಲ್ಲೇ ಸ್ನಾನ, ಬಹಿರ್ದೆಸೆ!
ಸಾರಿಗೆ ನೌಕರರ ಪ್ರತಿಭಟನೆಗೆ ಹಾವೇರಿ ಜಿಲ್ಲೆಯಲ್ಲೂ ಬೆಂಬಲ