ಆರ್.ಎಸ್.ಎಸ್. ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ ಅಭಿಮತಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಟಿಬೆಟ್ ಕ್ಯಾಂಪಿನಲ್ಲಿ ಬೌದ್ಧ ಧರ್ಮಗುರು ದಲೈಲಾಮ ಅವರನ್ನು ಭೇಟಿ ಮಾಡಿ ನಂತರ ಮಾತನಾಡಿ ಅವರು, ಇತರ ದೇಶದ ಜನಾಂಗದವರು ಆಕ್ರಮಣಕ್ಕೆ ಒಳಗಾಗಿ ಭಾರತಕ್ಕೆ ಬಂದಾಗ ಅವರಿಗೆ ರಕ್ಷಣೆ ನೀಡಿ ಪಾಲನೆ ಪೋಷಣೆ ಮಾಡಿ, ಸಂರಕ್ಷಣೆ ಮಾಡಿ ನೋಡಿಕೊಳ್ಳುವ ಅಂತಹ ಸಂಸ್ಕೃತಿ ನಮ್ಮದಾಗಿದೆ, ಬೌದ್ಧ ಧರ್ಮಗುರು ದಲೈಲಾಮ ಅವರು ಶಾಂತಿ ಸೌಹಾರ್ದತೆಯ ಜನಾಂಗದ ಧರ್ಮ ಗುರುಗಳು ಎಂದರು.
ಆರ್.ಎಸ್.ಎಸ್. ಮುಖಂಡ ಬಿ.ಎಸ್. ಅಣ್ಣಪ್ಪ, ಕೆ.ಎಸ್. ಕೃಷ್ಣಪ್ರಸಾದ್, ವಸಂತ, ಮಾಧವ, ಬಿ.ಎಸ್. ಮಂಜುನಾಥ, ನಾರಾಯಣ ಹಡಪ್ಪಮ್ಗಾಯ ಇದ್ದರು.