ಸಮೃದ್ಧ ಬೈಂದೂರು ಯೋಜನೆಯಡಿ ಕೆನರಾ ರೋಬೆಕೊ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಆಯ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಕೆನರಾ ರೋಬೆಕೊ ಸಂಸ್ಥೆಯ ಆಂತರಿಕ ಮುಖ್ಯ ಲೆಕ್ಕಪರಿಶೋಧಕ ಗುರುಚರಣ್ ಹೊಸ್ಕೋಟೆ ಅವರು ಉದ್ಘಾಟಿಸಿದರು.
ಬೈಂದೂರು: ಸಮೃದ್ಧ ಬೈಂದೂರು ಯೋಜನೆಯಡಿ ಕೆನರಾ ರೋಬೆಕೊ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಆಯ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಕೆನರಾ ರೋಬೆಕೊ ಸಂಸ್ಥೆಯ ಆಂತರಿಕ ಮುಖ್ಯ ಲೆಕ್ಕಪರಿಶೋಧಕ ಗುರುಚರಣ್ ಹೊಸ್ಕೋಟೆ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಕೆನರಾ ರೋಬೆಕೊ ಸಂಸ್ಥೆಯ ಸೈಕಲ್ ಕೊಡುಗೆ ಇಲ್ಲಿನ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಸ ಬೆಸುಗೆಯಾಗಲಿದೆ. ಕ್ಷೇತ್ರದ ಇನ್ನಷ್ಟು ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ನಿಟ್ಟಿನಲ್ಲಿ ಸಂಸ್ಥೆಯೊಂದಿಗೆ ಸಮೃದ್ಧ ಬೈಂದೂರು ತಂಡ ಸದಾ ಜೊತೆಯಾಗಿರುತ್ತೇವೆ ಎಂದರು.ಗುರುಚರಣ್ ಹೊಸ್ಕೋಟೆ ಅವರು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಈ ಸೈಕಲ್ ಗಳು ತಲುಪುತ್ತಿರುವುದು ಸಂತಸ ತಂದಿದೆ, ಶಾಸಕರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜಿಸಿದ 300 ಟ್ರೀಸ್ ಯೋಜನೆಗೆ ಸಂಸ್ಥೆ ಸಹಕಾರ ನೀಡಲಿದೆ ಎಂದರು.ನಂತರ ಸರಕಾರಿ ಬಿಜೂರು, ಮೊಗೇರಿ, ಬವಳಾಡಿ, ಉಳ್ಳೂರು, ಕಂಬದಕೋಣೆ ಹಾಗೂ ನಾಯ್ಕನಕಟ್ಟೆಯ ಸರ್ಕಾರಿ ಶಾಲೆಗಳ 220 ವಿದ್ಯಾರ್ಥಿಗಳಿಗೆ ಸೈಕಲ್ ಗಳನ್ನು ವಿತರಿಸಲಾಯಿತು.ಕೆನರಾ ರೋಬೊಕೊ ಸಂಸ್ಥೆಯ ಅಧಿಕಾರಿ ಸಂದೀಪ್ ಪೂಜಾರಿ, ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಆಡಳಿತ ವಿಶ್ವಸ್ಥ ಗೋವಿಂದ ಬಾಬು ಪೂಜಾರಿ, ಬಿಜೂರು ಗ್ರಾಪಂ ಮಾಜಿ ಸದಸ್ಯರಾದ ರಾಜೇಂದ್ರ ಬಿಜೂರು, ವೀರೇಂದ್ರ ಶೆಟ್ಟಿ, ಶೇಖರ್ ದೇವಾಡಿಗ, ಉಪ್ಪಂದ ಸಮೂಹ ಸಂಪನ್ಮೂಲ ಕೇಂದ್ರ ಮಂಜುನಾಥ ಎಸ್., ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ವಿ ದೇವಾಡಿಗ ಮತ್ತಿತರರು ಭಾಗವಹಿಸಿದ್ದರು.ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕಿ ಸುಮತಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.