ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಬೈಂದೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಬೈಂದೂರು ಹೋಬಳಿಯ 9 ಗ್ರಾಮಗಳ ಸುಮಾರು 55 ಅರ್ಹ ಬಡ ಫಲಾನುಭವಿಗಳಿಗೆ 94 ಸಿ ಹಾಗೂ 94 ಸಿಸಿ ಹಕ್ಕು ಪತ್ರಗಳನ್ನು ವಿತರಿಸಿದರು.
ಬೈಂದೂರು: ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಬೈಂದೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಬೈಂದೂರು ಹೋಬಳಿಯ 9 ಗ್ರಾಮಗಳ ಸುಮಾರು 55 ಅರ್ಹ ಬಡ ಫಲಾನುಭವಿಗಳಿಗೆ 94 ಸಿ ಹಾಗೂ 94 ಸಿಸಿ ಹಕ್ಕು ಪತ್ರಗಳನ್ನು ವಿತರಿಸಿದರು.ಬಳಿಕ ಮಾತನಾಡಿದ ಶಾಸಕರು ಬೈಂದೂರು ಹೋಬಳಿಯಲ್ಲಿ ಅರ್ಹ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ಈಗಾಗಲೇ ವಿತರಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನ ಸಂಪರ್ಕ ಸಭೆ ನಡೆಸಿ ಜನರ ಬಳಿ ಅಧಿಕಾರಿಗಳನ್ನು ಕರೆದುಕೊಂಡು ಹೋದ ಪರಿಣಾಮ ಸಣ್ಣಪುಟ್ಟ ನ್ಯೂನ್ಯತೆ ಇರುವ ಕಡತಗಳನ್ನು ಸರಿಪಡಿಸಿ ಅರ್ಹರನ್ನು ಹುಡುಕಿ ಅವರಿಗೆ ಭೂಮಿ ಹಕ್ಕು ನೀಡುವ ಕೆಲಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ನಿರಂತರವಾಗಿ ನಡೆದು ಯಾವೊಂದು ಅರ್ಹ ಬಡ ಕುಟುಂಬ ಹಕ್ಕು ಪತ್ರ ವಂಚಿತರಾಗದೆ ಇರುವಂತೆ ಮಾಡಲಾಗುವುದು ಎಂದರು.
ಗೊಳಿಹೊಳೆ ಹಾಗೂ ಯಳಜಿತ್ ಗ್ರಾಮದ 32, ಹೇರೂರು ಗ್ರಾಮದ 04, ಜಡ್ಕಲ್ 04, ಕಾಲ್ತೊಡು 04, ಹೆರೆಂಜಾಲು, ನಾಡ, ಕಿರಿಮಂಜೇಶ್ವರ ಗ್ರಾಮದ ತಲಾ 01 ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ಹಾಗೂ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ 08 ಫಲಾನುಭವಿಗಳಿಗೆ 94 ಸಿಸಿ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀರಾಮಚಂದ್ರಪ್ಪ, ಕಂದಾಯ ನಿರೀಕ್ಷಕರಾದ ಉಪೇಂದ್ರ, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.