ಬೈಪಾಸ್ ಗಣೇಶೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Aug 29, 2025, 01:00 AM IST
22ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ | Kannada Prabha

ಸಾರಾಂಶ

ತಾಲೂಕಿನಲ್ಲಿ ಹಿರಿಯರು ಅಡಿಪಾಯ ಹಾಕ್ಕಿ ಕೊಟ್ಟಂತೆ ಅಲ್ಲಿಂದ ಇಲ್ಲಿಯವರೆಗೂ ಈ ಒಂದು ಬೈಪಾಸ್ ಯುವಕರ ತಂಡ ಯಾವುದೇ ಜಾತಿ ಭೇದಭಾವವಿಲ್ಲದೆ ತಾಲ್ಲೂಕಿನ ಎಲ್ಲಾ ಜನರನ್ನು ಒಗ್ಗೂಡಿಸಿಕೊಂಡು ಈ ಒಂದು ಗಣೇಶ ಉತ್ಸವವನ್ನು ಆಚರಣೆ ಮಾಡುತ್ತಿದ್ದಾರೆ. 19 ದಿನಗಳ ಕಾಲ ಶ್ರದ್ಧ ಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ಸಾರ್ವಜನಿಕರ ಬಹು ನಿರೀಕ್ಷಿತ ಬೈಪಾಸ್ ಗಣೇಶೋತ್ಸವ ಕಾರ್ಯಕ್ರಮವನ್ನು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಉದ್ಘಾಟಿಸಿದರು.ನಗರದ ವಿನಾಯಕ ಸರ್ಕಲ್ ಬಳಿಯ ಬೈಪಾಸ್ ರಸ್ತೆಯಲ್ಲಿ 22 ಅಡಿ ಎತ್ತರದ ಪ್ರಣವ ರುದ್ರಮಹಾಗಣಪತಿ ಮೂರ್ತಿಯನ್ನು ಪವಿತ್ರಗಂಗಾ ನದಿಯ ಮಣ್ಣಿನಿಂದ ತಯಾರಿಸಿದ್ದು 19 ದಿನಗಳ ಕಾಲ ಶ್ರದ್ಧ ಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಹಿರಿಯರು ಹಾಕಿಕೊಟ್ಟ ದಾರಿ

ಇದೇ ವೇಳೆ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಹಿರಿಯರು ಅಡಿಪಾಯ ಹಾಕ್ಕಿ ಕೊಟ್ಟಂತೆ ಅಲ್ಲಿಂದ ಇಲ್ಲಿಯವರೆಗೂ ಈ ಒಂದು ಬೈಪಾಸ್ ಯುವಕರ ತಂಡ ಯಾವುದೇ ಜಾತಿ ಭೇದಭಾವವಿಲ್ಲದೆ ತಾಲ್ಲೂಕಿನ ಎಲ್ಲಾ ಜನರನ್ನು ಒಗ್ಗೂಡಿಸಿಕೊಂಡು ಈ ಒಂದು ಗಣೇಶ ಉತ್ಸವವನ್ನು ಆಚರಣೆ ಮಾಡುತ್ತಿದ್ದಾರೆ ಎಂದರು.ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ ಶಾಸಕರಿಂದ ಈ ಒಂದು ಪ್ರತಿಷ್ಠಾಪನ ಕಾರ್ಯಕ್ರಮ ನೆರವೇರಿದೆ ಜಿಲ್ಲೆ ಸೇರಿದಂತೆ ತಾಲೂಕಿನ ಎಲ್ಲಾ ಭಕ್ತಾದಿಗಳು ಪ್ರತಿ ವರ್ಷದಂತೆ ಈ ವರ್ಷವೂ ದೇವರ ಕೃಪೆಗೆ ಪಾತ್ರರಾಗಬೇಕು ಮತ್ತು 19 ದಿನಗಳ ಕಾಲ ನಡೆಯುವ ಈ ಒಂದು ವಿಶೇಷ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಸಹಕಾರ ನೀಡಬೇಕೆಂದು ತಿಳಿಸಿದರು.ಮಣ್ಣಿನ ಗಣೇಶ ಬಳಕೆ

ಇನ್ನು ಯಾವುದೇ ರಾಸಾಯನಿಕ ಬಳಸದೆ ಪವಿತ್ರ ಗಂಗಾ ನದಿ ಮಣ್ಣಿನಿಂದ ಗಣೇಶ ಮೂರ್ತಿಯನ್ನು ಮಾಡಲಾಗಿದ್ದು ಹಾಗೂ ಪವಿತ್ರ ಧಾರ್ಮಿಕ ಸ್ಥಳಗಳಾದ ಬದ್ರಿನಾಥ್, ಅಯೋಧ್ಯ, ಕೇದಾರ್ ನಾಥ್, ಧರ್ಮಸ್ಥಳ, ಮುರುಡೇಶ್ವರ ಇನ್ನಿತರ ದೇವಾಲಯಗಳ ತದ್ರೂಪಿಗಳನ್ನು ತಯಾರಿಸಿದ್ದು. ಭಕ್ತಾದಿಗಳ ಸುರಕ್ಷತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾ, ಅಗ್ನಿ ನಿರೋಧಕ ವ್ಯವಸ್ಥೆ, ಸರ್ಕಾರದ ಎಲ್ಲಾ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿರುವುದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮಿ ನಾರಾಯಣಪ್ಪ, ಶ್ರೀನಿವಾಸ್ ಗೌಡ, ಜೈ ಕಾಂತರಾಜು, ಸದಸ್ಯರಾದ ಸುಬ್ಬರಾಜು, ಕಲಿ ಮುಲ್ಲಾ, ಪದ್ಮಾವತಮ್ಮ, ಹುದುಗುರು ಶಿವಕುಮಾರ್,ಆಲಿಪುರ ಅನಿಲ್ ಕುಮಾರ್, ರಾಕೇಶ್, ಮಂಜು, ಶರತ್, ನರೇಶ್, ನವೀನ್, ಶಾಂತರಾಜು, ನಿಖಿಲ್, ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಬೆಂಗಳೂರು : ಗಣೇಶ ವಿಸರ್ಜನೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ - ಎಲ್ಲೆಲ್ಲಿ?, ಯಾವಾಗ?
ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ : ಡಿಕೆಶಿ