ಬೈಪಾಸ್‌ಗಳಿಗಿಂದ ಸಾರಿಗೆ ಸಂಚಾರ ಸುಗಮ: ಹಿಟ್ನಾಳ

KannadaprabhaNewsNetwork |  
Published : Apr 22, 2025, 01:50 AM IST
21ಕೆಕೆಆರ್1:ಕುಕನೂರು ಪಟ್ಟಣದಲ್ಲಿ ಕುಕನೂರು, ಯಲಬುರ್ಗಾ ಬೈಪಾಸ್ ಕಾಮಗಾರಿ ಭೂಮಿ ಪೂಜೆಯನ್ನು ಸಂಸದ ರಾಜಶೇಖರ ಹಿಟ್ನಾಳ ನೆರವೇರಿಸಿದರು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಾಗೂ ಗಣ್ಯರು, ಅಧಿಕಾರಿಗಳಿದ್ದರು.   | Kannada Prabha

ಸಾರಾಂಶ

ರಾಷ್ಟ್ರದಲ್ಲಿ ಅಭಿವೃದ್ಧಿಯಾದ ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದರೆ ಅದರಲ್ಲಿ ಯಲಬುರ್ಗಾ ಪ್ರಮುಖ ಸ್ಥಾನ ಪಡೆಯುತ್ತದೆ. ಅನ್ಯ ಕ್ಷೇತ್ರಗಳಲ್ಲಿ ಸರಿಯಾಗಿ ಕುಡಿಯಲು ನೀರಿಲ್ಲ. ಆದರೆ, ಬಸವರಾಜ ರಾಯರಡ್ಡಿ ಅವರ ಕ್ಷೇತ್ರ ಸಮೃದ್ಧತೆಯಿಂದ ಕೂಡಿದೆ.

ಕುಕನೂರು

ಹೊಸ ಬೈಪಾಸ್‌ ನಿರ್ಮಾಣದಿಂದ ಸಾರಿಗೆ ಸಂಚಾರ ಸುಗಮವಾಗಲಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಪಟ್ಟಣದಲ್ಲಿ ಭಾನಾಫೂರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿಯ ಕುಕನೂರು, ಯಲಬುರ್ಗಾ, ಗಜೇಂದ್ರಗಡ ಬೈಪಾಸ್‌ಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಯಲಬುರ್ಗಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಬೈಪಾಸ್ ನಿರ್ಮಾಣ, ರೈಲ್ವೆ ಲೈನ್, ಆಸ್ಪತ್ರೆ, ಶಾಲಾ, ಕಾಲೇಜುಗಳ ನಿರ್ಮಾಣ ನೋಡಿದರೆ ಇದೊಂದು ಮಾದರಿ ಕ್ಷೇತ್ರ. ಇಲ್ಲಿ ಆರ್ಥಿಕವಾಗಿ ಸದೃಢ ಆಗಲು ನೀರಾವರಿ, ಕೈಗಾರಿಕೆಗಳಿಲ್ಲ. ಆದರೆ, ಕ್ಷೇತ್ರವನ್ನು ಅಭಿವೃದ್ಧಿ ಕಾರ್ಯಗಳಿಗೆ ಶ್ರೀಮಂತಗೊಳಸಿಲಾಗಿದೆ ಎಂದರು.

ರಾಷ್ಟ್ರದಲ್ಲಿ ಅಭಿವೃದ್ಧಿಯಾದ ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದರೆ ಅದರಲ್ಲಿ ಯಲಬುರ್ಗಾ ಪ್ರಮುಖ ಸ್ಥಾನ ಪಡೆಯುತ್ತದೆ ಎಂದಿರುವ ಹಿಟ್ನಾಳ, ಅನ್ಯ ಕ್ಷೇತ್ರಗಳಲ್ಲಿ ಸರಿಯಾಗಿ ಕುಡಿಯಲು ನೀರಿಲ್ಲ. ಆದರೆ, ಬಸವರಾಜ ರಾಯರಡ್ಡಿ ಅವರ ಕ್ಷೇತ್ರ ಸಮೃದ್ಧತೆಯಿಂದ ಕೂಡಿದೆ. ಅವರು ಅಭಿವೃದ್ಧಿಯೊಂದಿಗೆ ಹೊಸ ಶಾಸಕ, ಸಂಸದರಿಗೆ ಪ್ರೇರಣೆ ಆಗಿದ್ದಾರೆ. ಅವರಿಂದ ನಾನು ಸಹ ಹೊಸ ಕೆಲಸ ಮಾಡುವುದನ್ನು ಕಲಿತಿದ್ದೇನೆ ಎಂದ ಅವರು, ರಾಜಕಾರಣಿಗಳು ಪ್ರಚಾರ ಬಯಸುತ್ತಾರೆ. ಆದರೆ ರಾಯರಡ್ಡಿ ಅವರು ಪ್ರಚಾರಕ್ಕೆ ಹೋದವರಲ್ಲ. ಮಂತ್ರಿಯಾಗಬೇಕೆಂದು ಸಹ ಅಂದುಕೊಂಡಿಲ್ಲ. ಕ್ಷೇತ್ರದ ಅಭಿವೃದ್ಧಿ ಆಗಬೇಕು ಎನ್ನುತ್ತಾರೆ ಎಂದು ಹೇಳಿದರು.

ಪಟ್ಟಣಗಳ ಬೈಪಾಸ್ ನಿರ್ಮಾಣದ ಭೂ ಸ್ವಾಧೀನಕ್ಕೆ ಹಣ ಮಂಜೂರು ಆಗದೆ ಇದ್ದ ವೇಳೆ ರಾಯರಡ್ಡಿ ಅವರೇ ಹೋಗಿ ಮಾಡಿಸಿದರು. ಬೈಪಾಸ್ ಮಾದರಿ ರೀತಿಯಲ್ಲಿ ನಿರ್ಮಾಣ ಆಗುತ್ತಿದ್ದು, ಸಂಚಾರಕ್ಕೆ ಅನುಕೂಲ ಆಗಲಿವೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಗಿರೀಶ ಮಾತನಾಡಿ, ₹ 333.96 ಕೋಟಿ ವೆಚ್ಚದಲ್ಲಿ ಬೈಪಾಸ್‌ ರಸ್ತೆ ನಿರ್ಮಿಸಲಾಗುತ್ತಿದ್ದು ಕುಕನೂರಿನಲ್ಲಿ 6.88 ಕಿ.ಮಿ, ಯಲಬುರ್ಗಾ 4.76 ಕಿ.ಮಿ, ಗಜೇಂದ್ರಗಡ ಬೈಪಾಸ್‌ 5.63 ಕಿಮಿ ಸೇರಿದ ಒಟ್ಟು 17.256 ಕಿಲೋ ಮೀಟರ್‌ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ ಎಂದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಪಪಂ ಸದಸ್ಯರಾದ ಸಿರಾಜ ಕರಮುಡಿ, ರಾಮಣ್ಣ ಬಂಕದಮನಿ, ನೂರುದ್ದೀನಸಾಬ್ ಗುಡಿಹಿಂದಲ್, ಗಗನ ನೋಟಗಾರ, ನಾರಾಯಣಪ್ಪ ಹರಪನ್ಹಳ್ಳಿ, ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಸಿದ್ದಯ್ಯ ಕಳ್ಳಿಮಠ, ಪ್ರಶಾಂತ ಆರಬೆರಳಿನ್, ಸಂಗಮೇಶ ಗುತ್ತಿ, ತಿಮ್ಮಣ್ಣ ಚೌಡಿ, ಶಿವನಗೌಡ ದಾನರೆಡ್ಡಿ, ವೀರಯ್ಯ ತೋಂಟದಾರ್ಯಮಠ, ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ, ಮಂಜುನಾಥ, ಸೋಂಪೂರು ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ