ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಸಮಗ್ರ ನೀರು ಹೋರಾಟ ವೇದಿಕೆ ವತಿಯಿಂದ ಸೋಮವಾರ ಪಟ್ಟಣದ ಎಸ್‌ಎಸ್‌ಕೆ ಸಮುದಾಯದ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕಿಗೆ ತುಂಗಭದ್ರಾ ಕುಡಿಯುವ ನೀರು ಸರಬರಾಜಿಗೆ ಶ್ರಮವಹಿಸಿದ್ದ ಹೋರಾಟಗಾರರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.
ನೀರು ಅನ್ನಕ್ಕೆ ಸಮಾನ. ಪಕ್ಷತೀತಾವಾಗಿ ಅನೇಕ ಮಂದಿ ಮಾಜಿ ಹಾಲಿ ಜನಪ್ರತಿನಿಧಿಗಳು ಹಾಗೂ ರೈತ ಸಂಘಟನೆಯ ಮುಖಂಡರು ಸೇರಿ ಅನೇಕ ವರ್ಷದ ಕಾಲ ಜನಾಂದೋಲನ ನಡೆಸಿದ ಪರಿಣಾಮ ಪಾವಗಡಕ್ಕೆ ತುಂಗಭದ್ರಾ ಯೋಜನೆಯ ಶುದ್ದ ನೀರು ಪೂರೈಕೆ ಸಾಧ್ಯವಾಗಿದೆ. ಇದೇ ರೀತಿ ನೀರಾವರಿ ಪ್ರಗತಿಗೆ ಕೆರೆಗಳಿಗೆ ನೀರು ತುಂಬಿಸಲು ಭದ್ರಾಮೇಲ್ದಂಡೆ ಯೋಜನೆ ಸಹ ಜಾರಿಯಾಗಿದ್ದು ಸಂತಸ ತಂದಿದೆ. ನೀರಿಗಾಗಿ ಮುಷ್ಕರ ನಡೆಸಿದ ಹೋರಾಟಗಾರರನ್ನು ಗುರ್ತಿಸಿ ಸನ್ಮಾನಕ್ಕೆ ಮುಂದಾದ ಇಲ್ಲಿನ ತಾಲೂಕು ಸಮಗ್ರ ನೀರು ಹೋರಾಟ ವೇದಿಕೆಯ ಕಾರ್ಯ ಅಭಿನಂದನೀಯವಾಗಿದೆ ಎಂದರು.ತಾಲೂಕು ಹಸಿರು ಸೇನೆಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಅಂದಿನ ಸಿಎಂ ಸಿದ್ದರಾಮಯ್ಯ ಪಾವಗಡಕ್ಕೆ ನೀರು ಕಲ್ಪಿಸುವುದಾಗಿ ಆದೇಶಿಸಿ ಬಜೆಟ್‌ನಲ್ಲಿ 2,352 ಕೋಟಿ ಮೀಸಲಿರಿಸಿದ ಪರಿಣಾಮ ಪೈಪ್ ಲೈನ್ ಕಾಮಗಾರಿ ಪೂರ್ಣವಾಗಿ ಪಾವಗಡ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕರೆ ಮೊಳಕಾಲ್ಮೂರು ಇತರೆ ಬಯಲು ಸೀಮೆ ಪ್ರದೇಶಗಳಿಗೆ ವಿಜಯನಗರ ಜಿಲ್ಲೆಯ ತುಂಗಭದ್ರಾ ಡ್ಯಾಂನಿಂದ ನೀರು ಸರಬರಾಜಾಗಲು ಸಾಧ್ಯವಾಗಿದೆ ಎಂದರು.ಮಾಜಿ ಸಂಸದ ಜನಾರ್ಧನಸ್ವಾಮಿ ಮಾತನಾಡಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಕಾಲದಲ್ಲಿ ಭದ್ರಾಮೇಲ್ದಂಡೆ ಯೋಜನೆ ಜಾರಿಗೆ ಬಂದಿದ್ದು ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ತಿಮ್ಮರಾಯಪ್ಪ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಶಾಸಕರು ನಿಯೋಗ ತೆರಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಪರಿಣಾಮ ಭದ್ರಾ ಹಾಗೂ ತುಂಗಭದ್ರಾ ಎತ್ತಿನ ಹೊಳೆ ಯೋಜನೆ ಜಾರಿ ಸಾಧ್ಯವಾಗಿದೆ. ಹೋರಾಟಗಾರನ್ನು ಗುರ್ತಿಸಿದ ವೇದಿಕೆ ಕಾರ್ಯ ಶ್ಲಾಘನೀಯ ಎಂದರು.