ಕನ್ನಡಪ್ರಭ ವಾರ್ತೆ ಶಿಕಾರಿಪುರ
ಗುರುವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಮಮಾರ್ಗದ ಮೂಲಕ ಶಾಸಕರಾಗಿ ಕೇವಲ 2 ವರ್ಷ ಪೂರ್ಣಗೊಂಡಿಲ್ಲ ಅಧಿವೇಶನವನ್ನು ಸಮರ್ಪಕವಾಗಿ ಎದುರಿಸದೆ ಶಾಸಕ ವಿಜಯೇಂದ್ರ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಯೋಗ್ಯ ಎಂದು ಏಕವಚನದಲ್ಲಿ ನಿಂದಿಸುವ ಮೂಲಕ ರಾಜ್ಯದ ಜನತೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಜನಪರ ಹೋರಾಟ ಕಾಳಜಿ ಮೂಲಕ ಸತತ 2 ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಅರ್ಹತೆ ಯಾರಿಗೂ ಇಲ್ಲ ಎಂದರು.
ಸಿದ್ದರಾಮಯ್ಯ ಅವರನ್ನು ಅಯೋಗ್ಯ ಎಂದು ನಿಂದಿಸಲು ಅವರು ಎಂದಿಗೂ ನಕಲಿ ಸಹಿ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ, ಗೊಬ್ಬರಕ್ಕಾಗಿ ಕಾದು ನಿಂತ ರೈತರ ವಿರುದ್ಧ ಗೋಲಿಬಾರ್ ಮಾಡಲಿಲ್ಲ, ಚೆಕ್ ಮೂಲಕ ಲಂಚ ಪಡೆದಿಲ್ಲ, ಭ್ರಷ್ಟಾಚಾರದ ಆರೋಪದಲ್ಲಿ ಜೈಲು ದರ್ಶನ ಪಡೆದಿಲ್ಲ, ಪೋಕ್ಸೋ ಪ್ರಕರಣದ ಅಪರಾಧಿಯಲ್ಲ, ಸಾಗುವಳಿದಾರರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಕಾನೂನು ಜಾರಿಗೊಳಿಸಿಲ್ಲ, ತಾಲೂಕಿನ ಸಾಗುವಳಿದಾರರಿಗೆ ಸತತ 4 ದಶಕದಿಂದ ಹಕ್ಕು ಪತ್ರ ನೀಡುವ ವಾಗ್ದಾನ ಮರೆತು ದ್ರೋಹ ಬಗೆದಿಲ್ಲ, ಸಾಗುವಳಿದಾರರನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಿಸಿಕೊಳ್ಳುವ ಜಾಯಮಾನದವರಲ್ಲ ಎಂದು ಅವರು ವ್ಯಂಗ್ಯವಾಡಿದರು.ಜಾತಿಗಣತಿ ಮೂಲಕ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿರುವ ಸಿದ್ದರಾಮಯ್ಯನವರಿಗೆ ಬಿಜೆಪಿ ಮುಖಂಡರ ಸರ್ಟಿಫಿಕೇಟ್ ಅಗತ್ಯವಿಲ್ಲ. ಪಂಚ ಗ್ಯಾರಂಟಿ ಘೋಷಿಸಿ ಜನತೆಗೆ ನೀಡುತ್ತಿರುವ ಮುಖ್ಯಮಂತ್ರಿ ಬಗ್ಗೆ ಅಸೂಯೆ ಜತೆಗೆ ಹೈಕಮಾಂಡ್ ಮೆಚ್ಚಿಸಲು ಯೋಗ್ಯತೆ ಮೀರಿ ಮಾತನಾಡುವ ಚಾಳಿ ಬೆಳೆಸಿಕೊಳ್ಳದಂತೆ ಅವರು ಸಲಹೆ ನೀಡಿದರು.