ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ಸಿ.ಅಶೋಕ್ ಬಿರುಸಿನ ಪ್ರಚಾರ

KannadaprabhaNewsNetwork |  
Published : Apr 18, 2024, 02:27 AM IST
17ಕೆಎಂಎನ್ ಡಿ22 | Kannada Prabha

ಸಾರಾಂಶ

ದೇಶದ ರಕ್ಷಣೆಗೆ ನರೇಂದ್ರ ಮೋದಿ, ಜಿಲ್ಲೆಯ ಅಭಿವೃದ್ಧಿ ಹಾಗೂ ಕಾವೇರಿ ರಕ್ಷಣೆಗೆ ಎಚ್.ಡಿ.ಕುಮಾರಸ್ವಾಮಿ ಬೇಕಾಗಿದ್ದಾರೆ. ಎಚ್.ಡಿ.ಕೆಗೆ ಹೆಚ್ಚಿನ ಮತಕೊಟ್ಟು ಗೆಲ್ಲಿಸಬೇಕು. ಎರಡು ಬಾರಿ ಸಿಎಂ ಆಗಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದು ಕೇಂದ್ರದಲ್ಲಿ ಮಂತ್ರಿ ಆಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಂಡ್ಯ ಲೋಕಸಭಾ ಕ್ಷೇತ್ರದ ಎನ್ ಡಿಎ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಚಿನಕುರಳಿ ಹೋಬಳಿ ವ್ಯಾಪ್ತಿಯ ಹಲವು ಹಳ್ಳಿಗಳಿಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಸಿ.ಅಶೋಕ್, ದೇಶದ ರಕ್ಷಣೆಗೆ ನರೇಂದ್ರ ಮೋದಿ, ಜಿಲ್ಲೆಯ ಅಭಿವೃದ್ಧಿ ಹಾಗೂ ಕಾವೇರಿ ರಕ್ಷಣೆಗೆ ಎಚ್.ಡಿ.ಕುಮಾರಸ್ವಾಮಿ ಬೇಕಾಗಿದ್ದಾರೆ. ಎಚ್.ಡಿ.ಕೆಗೆ ಹೆಚ್ಚಿನ ಮತಕೊಟ್ಟು ಗೆಲ್ಲಿಸಬೇಕು ಮನವಿ ಮಾಡಿದರು.

ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ರಾಜ್ಯದ ರೈತರ 26 ಸಾವಿರ ಕೋಟಿ ಸಾಲಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆ ತಪ್ಪಿಸಿದರು. ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ಭೇಟಿಕೊಟ್ಟು ಆರ್ಥಿಕ ನೆರವು ನೀಡಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದರು.

ಎರಡು ಬಾರಿ ಸಿಎಂ ಆಗಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದು ಕೇಂದ್ರದಲ್ಲಿ ಮಂತ್ರಿ ಆಗಲಿದ್ದಾರೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸಚಿವ, ಶಾಸಕರಾಗಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಹಾಗಾಗಿ ಹೆಚ್ಚಿನ ಮತ ನೀಡಿ ಕುಮಾರಸ್ವಾಮಿ ಗೆಲುವಿಗೆ ಸಹಕಾರಿಯಾಗಬೇಕೆಂದು ಮನವಿ ಮಾಡಿದರು.

ತಾಪಂ ಮಾಜಿ ಅಧ್ಯಕ್ಷ ಎಂ.ಸಿ.ಯಶ್ವಂತ್ ಕುಮಾರ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ಒಂದಂಕಿ ಲಾಟರಿ ಹಾಗೂ ಸರಾಯಿ ನಿಷೇಧಿಸುವ ಮೂಲಕ ಹೆಣ್ಣುಮಕ್ಕಳು ನೆಮ್ಮದಿ ಜೀವನ ನಡೆಸುವಂತೆ ಮಾಡಿದರು. ಜನರ ಪರ ಸ್ವಚ್ಚ ಆಡಳಿತ ನಡೆಸಿದ್ದರು ಎಂದರು.

ತಾಲೂಕಿನ ಬನ್ನಂಗಾಡಿ ಗ್ರಾಮದಿಂದ ಆರಂಭಗೊಂಡ ಮತಯಾಚನೆ ತಾಲೂಕಿನ ಗಿರಿಯಾರಗಳ್ಳಿ, ಕೆಂಪೂಗೌಡನಕೊಪ್ಪಲು, ಅಂತನಹಳ್ಳಿ, ಬಿಂಡಹಳ್ಳಿ, ಯರಗನಹಳ್ಳಿ, ಮಲ್ಲಿಗೆರೆ, ಹೊಸಸಾಯಪನಹಳ್ಳಿ, ಹಳೇ ಸಾಯಪನಹಳ್ಳಿ, ಡಿಂಕಾ, ಡಿಂಕಾಶೆಟ್ಟಹಳ್ಳಿ ವಳಲೇಕಟ್ಟೆಕೊಪ್ಪಲು, ರಾಗಿಮುದ್ದನಹಳ್ಳಿ, ಹುಣಸೇಕಟ್ಟೆಕೊಪ್ಪಲು, ಬಸವನಗುಡಿಕೊಪ್ಪಲು, ಹೊನ್ನೇಹಳ್ಳಿ, ಗುಮ್ಮನಹಳ್ಳಿ, ಕುಂಬಾರಕೊಪ್ಪಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ ಮತಯಾಚನೆ ಮಾಡಿದರು.

ಈ ವೇಳೆ ತಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮಾವೆಂಕಟೇಶ್, ಸದಸ್ಯ ಸಿ.ಎಸ್.ಗೋಪಾಲಗೌಡ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಯಶ್ವಂತ್‌ಕುಮಾರ್, ಗ್ರಾಪಂ ಅಧ್ಯಕ್ಷ ಪ್ರಭಾಕರ್, ಹುಚ್ಚೇಗೌಡ, ಸಿ.ಕೆ.ಅಂಕೇಗೌಡ, ಬಿ.ಪಿ.ಶ್ರೀನಿವಾಸ್, ಮಲ್ಲಿಗೆರೆ ರವಿಕರ, ಗಂಗಾಧರ್, ರಾಜೇಶ್, ಕರೀಗೌಡ, ಬಿ.ಎಸ್.ಶ್ರೀನಿವಾಸ್, ವಾಸು, ನಿವೃತ ಶಿಕ್ಷಕ ನಾಗರಾಜು, ಚಂದ್ರು, ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ